ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಕಾರ್ಯಕ್ಕೆ ಗೈರಾದ 1500 ಅಧಿಕಾರಿಗಳ ವಿರುದ್ಧ ಎಫ್‌ಐಆರ್

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಚುನಾವಣಾ ಪ್ರಕ್ರಿಯೆಗಳ ತರಬೇತಿ ಹಾಜರಾಗದ 1500 ಅಧಿಕಾರಿಗಳ ಮೇಲೆ ಎಫ್‌ಐಆಟರ್ ದಾಖಲಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಮೇ.5ರಂದು ಈ ಅಧಿಕಾರಿಗಳಿಗೆ ಮತ್ತೊಮ್ಮೆ ತರಬೇತಿ ಆಯೋಜನೆ ಮಾಡಲಾಗಿದೆ ಅಂದು ಹಾಜರಾಗದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕ ಚುನಾವಣಾ ಕಣದಲ್ಲಿ ಕೊನೆಗೆ ಉಳಿದವರೆಷ್ಟು?ಕರ್ನಾಟಕ ಚುನಾವಣಾ ಕಣದಲ್ಲಿ ಕೊನೆಗೆ ಉಳಿದವರೆಷ್ಟು?

ಜನವರಿ 23ರಿಂದ ಏಪ್ರಿಲ್ 17ರವರೆಗೆ ಒಟ್ಟು 4.39 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ. ನಗರದಲ್ಲಿ ಒಟ್ಟು 91.13 ಲಕ್ಷ ಮತದಾರರಿದ್ದಾರೆ. ಈವರೆಗೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5.85 ಕೋಟಿ ರೂ ನಗದು ವಶ ಪಡಿಸಿಕೊಳ್ಳಲಾಗಿದೆ.

EC to file FIR against 1,500 officials

ಬಿಜೆಪಿಗೆ ಸೇರಿದ 2162, ಕಾಂಗ್ರೆಸ್ ಗೆ ಸೇರಿದ 1008 ಹಾಗೂ ಎಂಇಪಿ ಪಕ್ಷಕ್ಕೆ ಸೇರಿದ 603 ಗೂಡ್ಸ್ ವಶಕ್ಕೆ ಪಡೆಯಲಾಗಿದೆ. ಬಿಜೆಪಿ ವಿರುದ್ಧ 6 ಹಾಗೂ ಕಾಂಗ್ರೆಸ್ ವಿರುದ್ಧ 3 ಎಫ್‌ಐಆರ್ ಹಾಗೂ ಇತರರ ವಿರುದ್ಧ 25 ಎಫ್‌ಐಆರ್ ದಾಖಲಾಗಿದೆ.

ಚುನಾವಣಾ ಆಯೋಗ ವಶಪಡಿಸಿಕೊಂಡ ಹಣ, ಮದ್ಯದ ಮಾಹಿತಿ ಇಲ್ಲಿದೆಚುನಾವಣಾ ಆಯೋಗ ವಶಪಡಿಸಿಕೊಂಡ ಹಣ, ಮದ್ಯದ ಮಾಹಿತಿ ಇಲ್ಲಿದೆ

ಮೇ 7 ರಂದು ಚುನಾಚಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಯಿಂದ ಪೋಸ್ಟ್ ಬ್ಯಾಲೆಟ್ ಮತದಾನ ಅಂದು ಎರಡನೇ ಹಂತದ ತರಬೇತಿ ನಡೆಯಲಿದ್ದು, ತರಬೇತಿ ಸ್ಥಳದಲ್ಲಿ‌ ಮತದಾನಕ್ಕೆ ಅವಕಾಶವಿದೆ. ಮತದಾನ ಕೊನೆಗೊಳ್ಳುವ 48 ಗಂಟೆ ಮುಂಚೆ ಹಾಗೂ ಮತ ಎಣಿಕೆ ಆರಂಭದ 48 ಗಂಟೆ ಪೂರ್ವದಲ್ಲಿ ಮದ್ಯಪಾನ ಮಾರಾಟಕ್ಕೆ ಅವಕಾಶವಿರುವದಿಲ್ಲ ಎಂದು ತಿಳಿಸಿದರು.

English summary
Election commission has warned that the commission will book case against officials who have skipped election duty and training in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X