ಬೆಂಗಳೂರಿನ ಸಾಧಕಿಯರಿಗೆ ಈಸ್ಟರ್ನ್ ಸಂಸ್ಥೆ ಐಕಾನಿಕ್ ಪ್ರಶಸ್ತಿ

Posted By:
Subscribe to Oneindia Kannada

ಬೆಂಗಳೂರು ಮಾರ್ಚ್ 08: ಕೊಚ್ಚಿ ಮೂಲದ ಈಸ್ಟರ್ನ್ ಕಾಂಡಿಮೆಂಟ್ಸ್ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಮನ ಸೆಳೆದ ಹಾಗೂ ಇತರರಿಗೆ ಮಾದರಿಯಾದ ಸಾಮಾನ್ಯ ಮಹಿಳೆಯರನ್ನು ಗುರುತಿಸಿ ಈಸ್ಟರ್ನ್ ಭೂಮಿಕಾ ಐಕಾನಿಕ್ ವುಮೆನ್ ಆಫ್ ಯುವರ್ ಲೈಫ್ ಪ್ರಶಸ್ತಿ ನೀಡಿ ಗೌರವಿಸಿತು.

ಬೆಂಗಳೂರಿನ ದವನಂ ಸರೋವರ ಪೊರ್ಟಿಕೊ ಸೂಟ್ಸ್‌ನಲ್ಲಿ ಇಂದು ನಡೆದ ಈಸ್ಟರ್ನ್ ಭೂಮಿಕಾ ನಾಲ್ಕನೇ ಆವೃತ್ತಿಯಲ್ಲಿ ಸಂಘಮಿತ್ರ ಅಯ್ಯಂಗಾರ್, ಭಾಗ್ಯ ರಂಗಚಾರ್, ಡಾ|| ದೀಪಾ ಕಣ್ಣನ್, ಎಸ್.ಚಂದ್ರರಾಮತಿರಾವ್, ಪದ್ಮಾಜ ರಾಮಮೂರ್ತಿ, ವಿದ್ಯಾ ವೈ, ಶಿಲ್ಪಾ, ಅಶ್ವಿನಿ ಅಂಗಡಿ, ಡೈಸಿ ಜೋಸೆಫ್ ಅಮ್ಮಜಿ ಮತ್ತು ರುಕ್ಸಾನಾ ಅವರನ್ನು ಈಸ್ಟರ್ನ್ ಭೂಮಿಕಾ ಐಕಾನಿಕ್ ವುಮೆನ್ ಆಫ್ ಯುವರ್ ಲೈಫ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Eastern Condiments honours 10 Bengaluru woman achievers

ವಿಜೇತ ಮಹಿಳೆಯರಿಗೆ ನೃತ್ಯಪಟು, ಚಲನಚಿತ್ರ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ ಸ್ಮರಣ ಫಲಕ ನೀಡಿದರು. ಡಾ. ಗ್ಲೋರಿ ಅಲೆಕ್ಸಾಂಡರ್ (ಸಂಸ್ಥಾಪಕ, ಆಶಾ ಪ್ರತಿಷ್ಠಾನ) ವಿಜಯಶಾಲಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಶ್ರೀಧರ ಪಬ್ಬಿಶೆಟ್ಟಿ (ಸಿಇಒ, ನಮ್ಮ ಬೆಂಗಳೂರು ಪ್ರತಿಸ್ಥಾನ) , ಫಿರ್ಜೊಮಿರನ್ (ಎಂ.ಡಿ, ಈಸ್ಟರ್ನ್ ಸಮೂಹ) ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮಹಿಳಾ ದಿನಾಚರಣೆಗೆ 'ಗಿಫ್ಟ್' ಕೊಟ್ಟ ಮೋದಿ ಸರ್ಕಾರ

ಈ ಸಂದರ್ಭದಲ್ಲಿ ವಿಕ್ರಂ ಆಸ್ಪತ್ರೆಯ ಕನ್ಸಲ್ಟೆಂಟ್ ಫಿಜಿಷಿಯನ್ ಡಾ|| ಕೆ.ಎಸ್.ಮಂಜುನಾಥ್ ಅವರು ಈಸ್ಟರ್ನ್ ಪರವಾಗಿ ಕುದೂರಿನ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ 10 ಕಂಪ್ಯೂಟರ್‌ಗಳನ್ನು ನೀಡಿ, ಕುದೂರು ಸರ್ಕಾರಿ ಪ್ರೌಢಶಾಲೆಯ ನವೀಕರಣ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.

Eastern Condiments honours 10 Bengaluru woman achievers

ಜೀವನದಲ್ಲಿ ತಮ್ಮ ಮೇಲೆ ಪ್ರಭಾವ ಬೀರಿದ ಮಹಿಳೆಯರನ್ನು ನಾಮಕರಣ ಮಾಡುವಂತೆ ಸಾರ್ವಜನಿಕರಿಗೆ ಸೂಚಿಸಿ ವಿಜೇತರ ಆಯ್ಕೆ ಮಾಡಲಾಗಿದೆ. ಆಯ್ಕೆ ಜತೆಗೆ ಸ್ಫೂರ್ತಿ ನೀಡಿದವರ ಭಾವಚಿತ್ರ ಕಳುಹಿಸುವಂತೆ ಕೋರಲಾಗಿತ್ತು. ಸಾಮಾಜಿಕ ಜಾಲತಾಣ ಹಾಗೂ ಅಂಚೆಯಲ್ಲಿ (ಹೆಸರು ಸೂಚನೆ) ನಾಮಕರಣ ಮಾಡಲಾಗಿದೆ.

ಜೀವನದಲ್ಲಿ ಎದುರಾದ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಈ ಮಹಿಳೆಯರು ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಈ ಪ್ರತಿಷ್ಠಿತ ಸಮಾರಂಭ ನಾಲ್ಕನೇ ವರ್ಷದಾಗಿದ್ದು ಇದನ್ನು ಏಳು ನಗರಗಳಲ್ಲಿ ಕೊಚ್ಚಿ, ಲಕ್ನೋ, ಹೈದರಾಬಾದ್, ಆಗ್ರ, ವಾರಣಾಸಿ, ಬೆಂಗಳೂರು ಹಾಗೂ ಚೆನ್ನೈನಲ್ಲಿ ಒಂದೇ ದಿನ ಏರ್ಪಡಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kochi based Eastern Condiments honoured 10 eminent women achievers of Bengaluru on the occasion of Women’s Day today(March 08). Eastern-Bhoomika Iconic Women of Your Life’ campaign illustrates the influence of women in our society,' said Firoz Meeran, managing director, Eastern Group.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ