ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಕುಗಳ ಸಾಗಣೆ ಮೇಲೆ ನಿಗಾ : ಇ-ವೇ ಬಿಲ್ ಶೀಘ್ರ ಜಾರಿ

|
Google Oneindia Kannada News

ಬೆಂಗಳೂರು, ಡಿಸೆಂಬರ್16 : ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸಾಗಿಸುವುದರ ಮೇಲೆ ನಿಗಾ ಇರಿಸಲು ಇ-ವೇ ಬಿಲ್‍ ಗಳನ್ನು ಮುಂದಿನ ಫೆಬ್ರವರಿ ವೇಳೆಗೆ ಜಾರಿಗೆ ತರಲಾಗುವುದೆಂದು ಬಿಹಾರದ ಉಪ ಮುಖ್ಯಮಂತ್ರಿಗಳು ಹಾಗೂ ಜಿ.ಎಸ್.ಟಿ. ಮಂಡಳಿಯ ಅಧ್ಯಕ್ಷರಾದ ಸುಶೀಲ್ ಕುಮಾರ್ ಮೋದಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್‍ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕು ಸಾಗಿಸುವ ಮುಂಚೆಯೇ ಆನ್‍ಲೈನ್ ನಲ್ಲಿ ನೋಂದಣಿ ಮಾಡಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಜಿ.ಎಸ್.ಟಿ. ಪದ್ಧತಿ ಜುಲೈ 2017 ರಿಂದ ಜಾರಿಗೆ ಬಂದಿದ್ದು ಇದರ ಅಂಗವಾದ ಇ-ವೇ ಬಿಲ್ ಪದ್ಧತಿಯಿಂದ ತೆರಿಗೆ ನೋಂದಣಿ, ಆನ್ ಲೈನ್ ತೆರಿಗೆ ವಹಿವಾಟು ಹಾಗೂ ಇತರ ವಾಣಿಜ್ಯ ವ್ಯವಹಾರಗಳಿಗೆ ಬಹಳ ಅನುಕೂಲವಾಗಲಿದೆ ಎಂದರು.

E-way bill for interstate goods transport

ಜಿ.ಎಸ್.ಟಿ. ಪ್ರಾರಂಭವಾದಾಗಿನಿಂದಲೇ ಈ ಇ-ವೇ ಬಿಲ್‍ನನ್ನು ಜಾರಿಗೊಳಿಸಲು ಪ್ರಯತ್ನ ನಡೆಯಿತಾದರೂ ಅದು ಸಾಧ್ಯವಾಗಿರಲಿಲ್ಲ. ಕರ್ನಾಟಕದಲ್ಲಿ ಇ-ವೇ ಬಿಲ್ ಸುವಿಧಾ ಬಿಲ್ ಮುಂತಾದ ಹೆಸರಿನಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಇದರ ತಂತ್ರಾಂಶವನ್ನು ಸರ್ಕಾರದ ಸಾಮ್ಯದ ಎನ್.ಐ.ಸಿ. ಕಂಪೆನಿ ವಿನ್ಯಾಸಗೊಳಿಸಿದ್ದು, ಇದನ್ನು ಸಿದ್ದಪಡಿಸಲು 40 ಕೋಟಿ ರೂ. ವೆಚ್ಚ ತಗುಲಿದೆ. ಇದರಿಂದ ಇ-ಬಿಲ್‍ ಗಳನ್ನು ತೆಗೆಯಬಹುದಾಗಿದೆ ಎಂದರು.

ಇನ್ಫೋಸಿಸ್ ಜೊತೆ ಸಹ ಇದು ಒಡಂಬಡಿಕೆ ಮಾಡಿಕೊಂಡಿದ್ದು, ವ್ಯಾಪಾರ ವಹಿವಾಟು ಹಿಂದಿಗಿಂತ ಸುಲಭವಾಗಲಿದೆ. ತೆರಿಗೆ ಪಾವತಿದಾರರಿಗೆ ಸಹ ಇ-ವೇ ಪದ್ಧತಿ ಸಹಾಯಕವಾಗಿದೆ. ಇದರಿಂದ ರಘ್ತು ವ್ಯವಹಾರ ನವೆಂಬನ್ ನಿಂದ ಶೇ 30.6 ರಷ್ಟು ಹೆಚ್ಚಿದೆ. ಜಿ.ಎಸ್.ಟಿ. ಪದ್ಧತಿ ಜಾರಿಗೊಂಡಾಗಿನಿಂದ 37 ತೆರಿಗೆಗಳು ರದ್ದಾಗಿ ಏಕರೂಪದ ತೆರಿಗೆ ಜಾರಿಗೊಂಡಿದೆ ಎಂದರು. ಸಭೆಯಲ್ಲಿ ಜಿ.ಎಸ್.ಟಿ. ಅಧ್ಯಕ್ಷರಾದ ಎ. ಬಿ. ಪಾಂಡೆ ಸಹ ಉಪಸ್ಥಿತರಿದ್ದರು.

ಗಡ್, ತಿರುಪತಿ, ತೆಲಂಗಾಣ, ಜೆಕ್ ರಿಪಬ್ಲಿಕ್ ಮೃಗಾಲಯ, ಗೌಹಾಟಿ, ಲಕ್ನೋ, ಕಾನ್ಪುರ್, ಡೆಹರಾಡೋನ್, ರಾಂಚಿ, ಭೂಪಾಲ್, ತ್ರಿಪುರ, ಮೀರೋಸ್ಲೋವ್ ಬರಾಕ್ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

English summary
Goods and service Tax council chairman and Bihar deputy Chief minister Sushil kumar Modi said e-way billing system will be implemented on interstate goods transport from coming February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X