ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಗಳಿಗೆ ಇ-ಆಟೋ ಸಂಪರ್ಕ

|
Google Oneindia Kannada News

ಬೆಂಗಳೂರು ಡಿಸೆಂಬರ್ 13 : ಮೆಟ್ರೋ ನಿಲ್ದಾಣಗಳಿಂದ ಸ್ಥಳೀಯ ಬಿಎಂಟಿಸಿ ಬಸ್ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವಂತೆ ಪ್ರಾಯೋಗಿಕವಾಗಿ ಶೀಘ್ರ ಎಲೆಕ್ಟ್ರಿಕ್ ರಿಕ್ಷಾ(ಇ-ರಿಕ್ಷಾ) ಆರಂಭಿಸುವ ಸಾದ್ಯತೆ ಇದೆ.

ಮೆಟ್ರೋ ಸಂಚಾರದ ಆರಂಭದಲ್ಲಿ ಒಂದು ಮೆಟ್ರೋ ನಿಲ್ದಾಣದಿಂದ ಮತ್ತೊಂದು ಮೆಟ್ರೋ ನಿಲ್ದಾಣಕ್ಕೆ ಹಾಗೂ ಕೆಲವು ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಬಿಎಂಟಿಸಿ ಬಸ್ ನಿಯೋಜಿಸಲಾಗಿತ್ತು. ಕಾಲಕ್ರಮೇಣ ಬಸ್ ಗಳ ಸಂಚಾರ ನಿಂತೇ ಹೋಯಿತು. ಆದರೆ ಈಗ ಇ-ರಿಕ್ಷಾ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸಾರಿಗೆ ಆಯುಕ್ತರು ಆಲೋಷಚಿಸಿದ್ದಾರೆ.

ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರವೇ ಪ್ರೀಪೇಯ್ಡ್ ಕೌಂಟರ್ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರವೇ ಪ್ರೀಪೇಯ್ಡ್ ಕೌಂಟರ್

ಇ-ರಿಕ್ಷಾ ನಿರ್ಬಂಧ ಮರುಪರಿಶೀಲನೆ: ಇ-ರಿಕ್ಷಾ ಮೇಲೆ ವಿಧಿಸಿರುವ ನಿರ್ಬಂಧ ಮರುಪರಿಶೀಲಿಸುವಂತೆ ಸಂಚಾರ ಪೊಲೀಸ್ ಆಯುಕ್ತರಿಗೆ ಸಾರಿಗೆ ಇಲಾಖೆ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ರಾಜಧಾನಿ ಮಾಡಲು ಸರ್ಕಾರ ಯೋಜನೆ ರೂಪಿಸುತ್ತಿದೆ.

E-Rickshaws may connect metro stations and bus stops soon

ಆದರೆ ರಾಜಧಾನಿಯಲ್ಲಿ ಎಲೆಕ್ಟ್ರಿಕ್ ವಾಹನ ಓಡಾಟಕ್ಕೆ ಅನುಮತಿಯಿಲ್ಲ, ಅವೈಜ್ಞಾನಿಕ ನಿಯಮದ ಕಾರಣದಿಂದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ರಿಕ್ಷಾ, ಓಡಾಟಕ್ಕೆ ನಿಷೇಧ ಹೇರಲಾಗಿದೆ.

ಇ-ರಿಕ್ಷಾ ವಿಶೇಷತೆ: ಇ-ರಿಕ್ಷಾದಲ್ಲಿ ಬ್ಯಾಟರಿ ಚಾಲಿತ ವಾಹನವಾಗಿದೆ. ಇದರಿಂದಾಗಿ ವಾಯುಮಾಲಿನ್ಯ ಇಳಿಕೆಯಾಗಲಿದೆ. ಇಂತಹ ರಿಕ್ಷಾಗಳನ್ನು ಒಮ್ಮೆ ೫ಗಂಟೆ ಚಾರ್ಜ್ ಮಾಡಿದರೆ 70 ಕಿ.ಮೀ ಸಂಚರಿಸುವ ಸಾಮರ್ಥ್ಯವಿರುತ್ತದೆ. ಇದು ಕೇವಲ 2-4 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತದೆ.

ಬೆಂಗಳೂರು ಏರ್ ಪೋರ್ಟ್ ಗೆ ಮೆಟ್ರೋ: ಸಚಿವ ಸಂಪುಟ ಅಸ್ತುಬೆಂಗಳೂರು ಏರ್ ಪೋರ್ಟ್ ಗೆ ಮೆಟ್ರೋ: ಸಚಿವ ಸಂಪುಟ ಅಸ್ತು

ಇ-ರಿಕ್ಷಾ ಯೋಜನೆ: ಕೇಂದ್ರ ಸರ್ಕಾರದ ನಿಯಮಾನ್ವಯ ಇ-ರಿಕ್ಷಾಗಳು ಗಂಟೆಗೆ 25 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವಂತಿಲ್ಲ, ಇಂತಹ ವಾಹನಗಳಲ್ಲಿ ಗರಿಷ್ಠ ಚಾಲಕ ಹೊರತುಪಡಿಸಿ ನಾಲ್ವರ ಪ್ರಯಾಣಕ್ಕೆ ಅವಕಾಶವಿದೆ. ಇ-ರಿಕ್ಷಾ ಸಾರಿಗೆ ವಾಹನ ಎಂದು ನೋಂದಣಿ ಮಾಡುವುದು ಕಡ್ಡಾಯ ಹಾಗೂ ಅರ್ಹತಾ ಪತ್ರ, ನೋಂದಣಿ ಪತ್ರ ಮತ್ತು ಪರ್ಮಿಟ್ ಹೊಂದಿರಬೇಕು.

ನಿಷೇಧಕ್ಕೇನು ಕಾರಣ: ವೇಗಮಿತಿಯೇ ಬಿಬಿಎಂಪಿ ವ್ಯಾಪ್ತಿಯೊಳಗೆ ಇ-ರಿಕ್ಷಾಗಳು ಪ್ರವೇಶ ಮಾಡದಂತೆ ಇ-ರಿಕ್ಷಾಗಳು ಪ್ರವೇಶ ಮಾಡದಂತೆ ತಡೆದಿದೆ. ಇ-ರಿಕ್ಷಾಗಳು ಗರಿಷ್ಠ ೨೫ಕಿ.ಮೀ ವೇಗದಲ್ಲಿ ಸಂಚರಿಸ ತೊಡಗಿದರೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ. ಎಂಬ ಕಾರಣ ನೀಡಿ 2016 ರಲ್ಲಿ ಸಂಚಾರ ಪೊಲೀಸರು ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ರಿಕ್ಷಾ ನಿರ್ಬಂಧಕ್ಕೆ ಸೂಚಿಸಿದ್ದರು.

ಪರುಪರಿಶೀಲನೆಗೆ ಪ್ರಸ್ತಾವನೆ: ದಟ್ಟಣೆ ಸಮಯದಲ್ಲಿ ವಾಹನಗಳು ಗಂಟೆಗೆ10-15 ಕಿ.ಮೀ ಯಷ್ಟೂ ವೇಗದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಇ-ರಿಕ್ಷಾಗೆ ನಿರ್ಬಂಧ ಹೇರಿರುವುದು ಅವೈಜ್ಞಾನಿಕವಾಗಿದೆ. ಎಂದು ಸಾರಿಗೆ ಇಲಾಖೆಯ ಹಲವು ಇ-ರಿಕ್ಷಾ ಕಂಪನಿಗಳು ತಿಳಿಸಿವೆ. ಇದರಿಂದಾಗಿ ಪ್ರಾಯೋಗಿಕವಾಗಿ ಮೆಟ್ರೋ ನಿಲ್ದಾಣದಿಂದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಸಂಚರಿಸಲು ಅನುಮತಿ ಕೋರಿ ಪೊಲೀಸ್ ಆಯುಕ್ತರಿಗೆ ಸಾರಿಗೆ ಇಲಾಖೆ ಪತ್ರ ಬರೆದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ರಿಕ್ಷಾ ಓಡಾಟದ ಕುರಿತು ಪಲೀಸ್ ಆಯುಕ್ತರಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

English summary
E-Rickshaws may connect metro stations and bus stops soon: Namma Metro stations may have connect to BMTC bus stops through electric auto rickshaws. The transport commissioner has written a letter to Bengaluru additional police commissioner(traffic) to consider than on electric auto rickshaw in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X