ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಆರಂಭಗೊಂಡ ಇ-ಆಟೋ ಸಂಚಾರ

By Nayana
|
Google Oneindia Kannada News

Recommended Video

ಬೆಂಗಳೂರಿನಲ್ಲಿ ಶುರುವಾಯ್ತು ಇ ಆಟೋರಿಕ್ಷಾ ಓಡಾಟ | Oneindia Kannada

ಬೆಂಗಳೂರು, ಜು 3: ನಗರದಲ್ಲಿ ಇ-ಆಟೋ ರಿಕ್ಷಾ ಪ್ರಾಯೋಗಿಕ ಓಡಾಟ ಆರಂಭಗೊಂಡಿದೆ. ವೋಲ್ಟಾ ಆಟೋಮೋಟಿವ್‌ ಇಂಡಿಯಾ ಪ್ರೈ.ಲಿ. ಸಂಸ್ಥೆಯು ಬೆಂಗಳೂರಿನ ಆಟೋ ಚಾಲಕರಿಗೆ ತಮ್ಮ ಪೆಟ್ರೋಲ್‌ ಎಂಜಿನ್‌ ಆಟೋವನ್ನು ಇ-ಆಟೋವನ್ನಾಗಿ ಪರಿವರ್ತಿಸುವ ಅವಕಾಶವನ್ನು ನೀಡಿದೆ.

ಸಂಸ್ಥೆಯು ಇಂಥದ್ದೊಂದು ರಿಕ್ಷವೊಂದನ್ನು ಸಿದ್ಧಪಡಿಸಿದ್ದು, ಪ್ರಾಯೋಗಿಕ ಓಡಾಟ ಆರಂಭವಾಗಿದೆ. ಇದು ಸದ್ಯಕ್ಕಿರುವ ಪೆಟ್ರೋಲ್‌ ಎಂಜಿನ್‌ ರಿಕ್ಷಾವನ್ನು ಬ್ಯಾಟರಿ ಚಾಲಿತ ಮೋಟಾರ್‌ ಆಟೋ ಆಗಿ ಪರಿವರ್ತಿಸುವ ಯೋಜನೆಯಾಗಿದೆ.

2 ಸ್ಟ್ರೋಕ್ ಆಟೋ ನಿಷೇಧ ಆದೇಶ ತಾತ್ಕಾಲಿಕವಾಗಿ ಹಿಂಪಡೆದ ಇಲಾಖೆ2 ಸ್ಟ್ರೋಕ್ ಆಟೋ ನಿಷೇಧ ಆದೇಶ ತಾತ್ಕಾಲಿಕವಾಗಿ ಹಿಂಪಡೆದ ಇಲಾಖೆ

ಜತೆಗೆ, ಪರಿಸರ ಸ್ನೇಹಿಯಾಗಿರುವ ಈ ರಿಕ್ಷಾದಲ್ಲಿ ಸ್ವಯಂಚಾಲಿತ ಗೇರ್‌ ವ್ಯವಸ್ಥೆ ಇರುವ ಕಾರಣ ಚಾಲನೆ ಸುಲಭವಾಗಲಿದೆ.ಕಂಪನಿ ನಗರದ ಅನೇಕ ಕಡೆ ಚಾರ್ಜರ್‌ ಬೂಸ್ಟರ್‌ಗಳನ್ನು ಅಳವಡಿಸಲು ಬೆಸ್ಕಾಂ ಜತೆ ಮಾತುಕತೆ ನಡೆಸುತ್ತಿದೆ.

E-auto runs in Bengaluru on pilot basis

ಆದರೆ, ಈ ಘಟಕಗಳಲ್ಲಿ ವಯಸ್ಸಾದ ಆಟೋ ಚಾಲಕರಿಗೆ ಹಾಗೂ ಅವರ ಕುಟುಂಬದವರಿಗೆ ಅಥವಾ ಅಪಘಾತಕ್ಕೀಡಾಗಿ ಕೆಲಸ ಮಾಡಲು ಸಾಧ್ಯವಾಗದ ಚಾಲಕರಿಗೆ ಕೆಲಸ ನೀಡಬೇಕು ಎನ್ನುವ ಷರತ್ತನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಅಭಿಷೇಕ್‌ ಶೆಟ್ಟಿ ಕಂಪನಿ ಮುಂದಿಟ್ಟಿದ್ದಾರೆ.

ಬ್ಯಾಟರಿ ಚಾಲಿತ ಎಂಜಿನ್‌ ಅಳವಡಿಸಲು 1.8 ಲಕ್ಷ ರೂ. ವೆಚ್ಚವಾಗುತ್ತದೆ. ಆದರೆ ಕಡಿಮೆ ನಿರ್ವಹಣಾ ವೆಚ್ಚ ಬೇಡುವ ಈ ಆಟೋ ನಂತರದಲ್ಲಿ ಲಾಭದಾಯಕವಾಗಲಿದೆ. ಇದರ ಬ್ಯಾಟರಿ 7 ಯೂನಿಟ್‌ ವಿದ್ಯುತ್‌ ಸಂಗ್ರಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅದರಲ್ಲಿ ಸುಮಾರು 100 ಕಿ.ಮೀ ದೂರ ಓಡಾಟ ನಡೆಸಬಲ್ಲದಾಗಿದೆ.

English summary
With less expenditure and pollution, electric auto rickshaw is on road in Bengaluru as pilot basis. Volta automotive private limited has started e-auto engine installation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X