ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲ್ಲಪ್ಪ ಆತ್ಮಹತ್ಯೆ ಪ್ರಕರಣ: ಸಿಐಡಿಗೆ ಮಾಹಿತಿ ನೀಡುವುದು ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಜುಲೈ 07: ಚಿಕ್ಕಮಗಳೂರಿನ ಡಿವೈಎಸ್ಪಿಯಾಗಿದ್ದ ಕಲ್ಲಪ್ಪ ಅವರ ಆತ್ಮಹತ್ಯೆ ಹಾಗೂ ತೇಜಸ್ ಗೌಡ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಮಾಹಿತಿ ಇದ್ದಲ್ಲಿ ನೀವು ಕೂಡಾ ಸಿಐಡಿ ತಂಡಕ್ಕೆ ತಿಳಿಸಬಹುದು.

ಸಾರ್ವಜನಿಕರು ಕೂಡಾ ಈಗ ತಮ್ಮ ಬಳಿ ಇರುವ ಮಾಹಿತಿಯನ್ನು ನೇರವಾಗಿ ಕ್ರಿಮಿನಲ್ ಇನ್ವೆಸ್ಟಿಕೇಷನ್ ಡಿಪಾರ್ಟ್ಮೆಂಟ್ (ಸಿಐಡಿ) ಗೆ ತಿಳಿಸಬಹುದು. ಇದರಿಂದ ತನಿಖೆಗೆ ಸಹಕಾರಿಯಾಗುತ್ತದೆ. [ಕಲ್ಲಪ್ಪ ಆತ್ಮಹತ್ಯೆ ಪ್ರಕರಣ, ಸಿಐಡಿಯಿಂದ ತೀವ್ರ ವಿಚಾರಣೆ]

ಕರ್ನಾಟಕದ ಸಿಐಡಿ ತಂಡ ಸದ್ಯಕ್ಕೆ ಕಲ್ಲಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಬಳಸಿ, ಮಾಹಿತಿ ನೀಡುವಂತೆ ಕೋರಿ ಟ್ವೀಟ್ ಮಾಡಿದೆ.

CID

ಚಿಕ್ಕಮಗಳೂರಿನ ತೇಜಸ್ ಗೌಡ ಅವರನ್ನು ಕಿಡ್ನಾಪ್ ಮಾಡಿ 10 ಲಕ್ಷ ರು. ಹಣ ಸ್ವೀಕರಿಸಿದ ಆರೋಪ ಹೊತ್ತಿದ್ದ ಡಿವೈಎಸ್ಪಿ ಕಲ್ಲಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ಕಲ್ಲಪ್ಪ ಅವರ ಫೋನ್ ಕರೆ ಸಂಭಾಷಣೆಯನ್ನು ವಿಡಿಯೋದಲ್ಲಿ ಕೇಳಿಸಿಕೊಳ್ಳಿ

ಆದರೆ, ಈ ಬಗ್ಗೆ ಕರ್ನಾಟಕದ ಐಜಿಪಿ ಓಂ ಪ್ರಕಾಶ್ ಅವರ ಕಚೇರಿಗೆ ಮಾಹಿತಿ ತಲುಪುವ ಮೊದಲೇ ಡಿವೈಎಸ್ಪಿ ಕಲ್ಲಪ್ಪ ಅವರು ಬೆಳಗಾವಿಯ ಸವದತ್ತಿ ತಾಲೂಕಿನ ಮುರಗೋಡದಲ್ಲಿರುವ ಮಾವನ ಮನೆಯಲ್ಲಿ ಮಂಗಳವಾರ ನೇಣಿಗೆ ಶರಣಾಗಿದ್ದರು. ಬೆಳಗಾವಿಯಲ್ಲಿ ಕುಟುಂಬಸ್ಥರಿಗೆ ಆಘಾತ ವಿಡಿಯೋ ನೋಡಿ

ಕಲ್ಲಪ್ಪ ಅವರ ಸಾವಿಗೆ ಪೊಲೀಸ್ ಇಲಾಖೆ ಕಿರುಕುಳವೇ ಕಾರಣ ಎಂದು ಬೆಳಗಾವಿಯಲ್ಲಿ ಪ್ರತಿಭಟನೆ ಕೂಡಾ ನಡೆಸಲಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಲು ಡಿಜಿಪಿ ಸೋನಿಯಾ ನಾರಂಗ್ ಅವರ ತಂಡ ಬೆಳಗಾವಿಗೆ ಭೇಟಿ ನೀಡಿ ಕಲ್ಲಪ್ಪ ಅವರ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ.

ಇತ್ತ ಚಿಕ್ಕಮಗಳೂರಿನಲ್ಲಿ ಸಿಐಡಿ ರಾಜಪ್ಪ ಅವರ ನೇತೃತ್ವದ ತಂಡ ತೇಜಸ್ ಗೌಡ ಹಾಗೂ ಇನ್ನಿತರರ ವಿಚಾರಣೆಯನ್ನು ತೀವ್ರಗೊಳಿಸಿದೆ. ನಿಮ್ಮಲ್ಲಿ ಕೂಡಾ ಈ ಬಗ್ಗೆ ಮಾಹಿತಿ ಇದ್ದರೆ ಸಿಐಡಿ ತಂಡಕ್ಕೆ ತಿಳಿಸಿ

ಸಿಐಡಿ ಇಮೇಲ್: [email protected]
ಸಿಐಡಿ ಮೊಬೈಲ್ ನಂಬರ್: 94808 00123
ಸಿಐಡಿ ಅಧಿಕಾರಿಗಳ ನಂಬರ್ ಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
How to provide information to Criminal investigation department (CID) regarding DySP Kallappa suicide case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X