ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾರ್ಜ್ ವಿರುದ್ಧ ಎಫ್ಐಆರ್ ಹಾಕದಂತೆ ಎಸ್ಪಿಗೆ ಕರೆ ಮಾಡಿದ್ದು ಯಾರು?

By Mahesh
|
Google Oneindia Kannada News

ಬೆಂಗಳೂರು, ಜುಲೈ 21: ಮಂಗಳೂರಿನ ಡಿವೈಎಸ್ಪಿ ಎಂಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಕೆಜೆ ಜಾರ್ಜ್ ವಿರುದ್ಧ ಎಫ್ ಐಆರ್ ದಾಖಲಿಸದಂತೆ ಮಡಿಕೇರಿ ಎಸ್ಪಿ ಕಚೇರಿಗೆ ಹಿರಿಯ ಅಧಿಕಾರಿಯೊಬ್ಬರು ಒತ್ತಡ ಹೇರಿದ್ದ ವಿಷಯ ಈಗ ಬಹಿರಂಗಗೊಂಡಿದೆ.

ಜೆಎಂಎಫ್ ಸಿ ನ್ಯಾಯಾಲಯದ ಆದೇಶದಂತೆ ಮಡಿಕೇರಿ ನಗರ ಠಾಣೆ ಪೊಲೀಸರು ಜುಲೈ 19 ರಂದು ಕೆಜೆ ಜಾರ್ಜ್ ರನ್ನು ಆರೋಪಿ ನಂ. 1 ಎಂದು ಹೆಸರಿಸಿ ಪ್ರಾಥಮಿಕ ತನಿಖಾ ವರದಿ ಸಿದ್ಧಪಡಿಸಿದ್ದಾರೆ.[ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline]

ಆದರೆ, ಇದಕ್ಕೂ ಮುನ್ನ ಘಟನೆ ನಡೆದ ದಿನದಂದೇ ಗಣಪತಿ ಅವರ ಹೇಳಿಕೆ ಇರುವ ವಿಡಿಯೋ ಆಧಾರದ ಮೇಲೆ ಜಾರ್ಜ್ ಅವರ ವಿರುದ್ಧ ಎಫ್ ಐಆರ್ ದಾಖಲಿಸಲು ತನಿಖಾಧಿಕಾರಿಗಳು ಮುಂದಾಗಿದ್ದರು.[ಪೊಲೀಸರ ಆತ್ಮಹತ್ಯೆಗೆ ಪ್ರಮುಖ ಕಾರಣಗಳೇನು?]

DySP Ganapathy case: Did a senior cop try to stop FIR against George
ಆದರೆ, ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಮಡಿಕೇರಿ ಎಸ್ಪಿ ರಾಜೇಂದ್ರ ಕುಮಾರ್ ಅವರಿಗೆ ಕರೆ ಮಾಡಿ ಮಡಿಕೇರಿ ಠಾಣೆ ಸಬ್ ಇನ್ಸ್ ಪೆಕ್ಟರ್ ಹಾಗೂ ತನಿಖಾಧಿಕಾರಿಗಳಿಗೆ ಎಫ್ ಐಆರ್ ಹಾಕದಂತೆ ಸೂಚಿಸುವಂತೆ ಹೇಳಿದರು. ಆದರೆ, ಇದೆಲ್ಲವೂ ಗುಟ್ಟಿನ ವಿಷ್ಯ,ಅನಧಿಕೃತ ಹಾಗಾಗಿ ಹುಷಾರಾಗಿ ನಿಭಾಯಿಸಿ ಎಂದಿದ್ದಾರೆ.

ಹಿರಿಯ ಅಧಿಕಾರಿಯ ಆದೇಶವನ್ನು ಯಥಾವತ್ತಾಗಿ ಸಬ್ ಇನ್ಸ್ ಪೆಕ್ಟರ್ ಭರತ್ ಗೆ ಹೇಳಿದ್ದಾರೆ. ಇಬ್ಬಂದಿಗೆ ಸಿಲುಕಿದ ಭರತ್ ಅವರು ತನ್ನ ಇತರೆ ಉನ್ನತ ಅಧಿಕಾರಿಗಳ ಸಲಹೆ ಕೇಳಿದ್ದಾರೆ.

ಎಫ್ ಐಆರ್ ಹಾಕದಿದ್ದರೆ ನಾಳೆ ದಿನ ಕೋರ್ಟ್ ನಿಂದ ಅದೇಶ ಬರುತ್ತದೆ. ವಿಳಂಬ ಮಾಡುವುದು ಸರಿಯಲ್ಲ ಎಂದು ಆಪ್ತರು ಸಲಹೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಸ್ಥಳೀಯ ನ್ಯಾಯಾಲಯದಿಂದ ಎಫ್ ಐಆರ್ ಹಾಕುವಂತೆ ಆದೇಶ ಬಂದಿದೆ.

ಹೀಗಾಗಿ ಎಫ್ ಐಆರ್ ಹಾಕದಿರುವ ಹಿಂದಿನ ಗುಟ್ಟು ಹೆಚ್ಚು ಪ್ರಚಾರ ಪಡೆಯದೆ ಹಾಗೆ ಉಳಿದುಬಿಟ್ಟಿದೆ.

English summary
K.J. George resigned as a minister in Karnataka's Siddaramaiah government on July 19 after a court ordered that an FIR be registered against him in the DySP M.K. Ganapathi suicide case. But top sources in the state Home department have told OneIndia that there was an attempt to stop the filing of the FIR against George.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X