ಅನುಪಮಾ ಶೆಣೈ ಫೇಸ್ಬುಕ್ ಗೆ ರೀ ಎಂಟ್ರಿ, ಮರುನೇಮಕಾತಿಗಾಗಿ ಅರ್ಜಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 15: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಡಿವೈಎಸ್ ಪಿ ಅನುಪಮಾ ಶೆಣೈ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಫೇಸ್ಬುಕ್ ಗೆ ರೀ ಎಂಟ್ರಿ ಕೊಟ್ಟಿರುವ ಶೆಣೈ ತಮ್ಮ ಇತ್ತೀಚಿನ ಪೋಸ್ಟ್ ನಲ್ಲಿ ಉದ್ಯೋಗಕ್ಕೆ ಮರಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹಿತೈಷಿಗಳ ಸಲಹೆಯಂತೆ ಉದ್ಯೋಗಕ್ಕೆ ಮರಳಲಿದ್ದು, ಮರುನೇಮಕಾತಿಗಾಗಿ ಅರ್ಜಿ ಹಾಕಿದ್ದೇನೆ ಎಂದಿದ್ದಾರೆ.

ಹಾಗೆ ನೋಡಿದರೆ, ಪೊಲೀಸ್ ಇಲಾಖೆಗೆ ಮರಳುವ ಪ್ರಯತ್ನ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲೇ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಲಹೆ ಪಡೆದಿದ್ದರು. [ರಾಜೀನಾಮೆ ಹಿಂಪಡೆಯುವ ಬಗ್ಗೆ ಅನುಪಮಾ ಶೆಣೈ ಸುಳಿವು]

Kudligi DySP Anupama Shenoy returns with a Facebook pos

ನಂತರ ಐದಾರು ತಿಂಗಳುಗಳ ಕಾಲ ಯೋಜನೆಯೊಂದರಲ್ಲಿ ತೊಡಗಿಕೊಂಡಿದ್ದರು. ಈಗ ಹಿತೈಷಿಗಳ ಸಲಹೆಯಂತೆ ಇಲಾಖೆಯಲ್ಲಿ ಮರು ನೇಮಕಾತಿಗಾಗಿ ಅರ್ಜಿ ಹಾಕಿದ್ದಾರೆ.

ಫೇಸ್ ಬುಕ್ ಗೆ ರೀ ಎಂಟ್ರಿ ಕೊಟ್ಟ ಬಳಿಕ ಸೈನಿಕರ ಬವಣೆ, ಅಮೆಜಾನ್ ವಿಕೃತಿ ಸೇರಿದಂತೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ಇಲಾಖೆಗೆ ಮರಳುತ್ತಿರುವ ಬಗ್ಗೆ ಬರೆದುಕೊಂಡಿದ್ದು, ಹಾಲಿವುಡ್ ನಟ ವಿಲ್ ಸ್ಮಿತ್ ಅಭಿನಯದ The_Pursuit_of_Happiness! ಚಿತ್ರ ಹಾಗೂ ಚಿತ್ರದ ಡೈಲಾಗ್ ಉಲ್ಲೇಖಿಸಿದ್ದಾರೆ.

ಶೆಣೈ ಅವರ ಮರು ಎಂಟ್ರಿಗೆ ಅಭಿಮಾನಿಗಳಿಂದ ಮುಕ್ತ ಸ್ವಾಗತ ಕೂಡಾ ಸಿಕ್ಕಿದೆ. ಶೆಣೈ ಅವರ ಫೇಸ್ ಬುಕ್ ಪೋಸ್ಟ್ ಯಥಾವತ್ತಾಗಿ ಇಲ್ಲಿ ಕೊಡಲಾಗಿದೆ. ಜತೆಗೆ ಮತ್ತೊಂದು ಪೋಸ್ಟ್ ಕೂಡಾ ಇದೆ ಓದಿ..

Facebook ಮಿತ್ರರೆ, ಬಹಳ ದಿನಗಳ ಬಳಿಕ ನಿನ್ನೆಯಷ್ಟೇ ಮತ್ತೆ facebookಗೆ ವಾಪಸ್ ಬಂದೆ, ಕೆಲಸಕ್ಕೆ ರಾಜಿನಾಮೆ ನೀಡಿದ ಬಳಿಕ ಏನ್ ಮಾಡೋದು ಅಂತ ಇದ್ದೆ. ಬಹಳ ಆತ್ಮೀಯರು, ಹಿತೈಷಿಗಳು ಮಾರ್ಗದರ್ಶನ ಮಾಡಿ, 'ಈಗೋ' ಬಿಡು ವಾಪಾಸ್ ಕೆಲಸಕ್ಕೆ ಸೇರು, ನಾವೆಲ್ಲ ಇದ್ದೇವೆ ಎಂದರು. ಅವರೆಲ್ಲರ ಪ್ರೀತಿಗೆ ತಲೆಬಾಗಿ ಮರುನೇಮಕಾತಿಗಾಗಿ ಸರಕಾರಕ್ಕೆ ಅರ್ಜಿ ನೀಡಿದೆ. ಒಬ್ಬ ಹಿರಿಯಣ್ಣನಂತೂ ನನಗೇ ಗೊತ್ತಿಲ್ಲದಂತೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ಕೆಲಸ ಕೊಡಿ ಇಲ್ಲಾಂದ್ರೆ ಸಿಡಿ ಬಿಡ್ತೀನಿ' ಅಂತ ಬೆದರಿಸಿದ (ಯಾವ ಸಿಡಿ ಅನ್ನುವುದು ಸಸ್ಪೆನ್ಸ್!). ಆದರೆ ಸರಕಾರಿ ಕೆಲಸ ದೇವರ ಕೆಲಸ. ದೇವರ ಪೂಜೆಯಂತೆ ಬಹಳ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯ ವರೆಗೂ ಮನೆಯಲ್ಲೇ ಇರಲು ಬೇಸರವಾಗಿ ಏನಾದರೂ ಸಣ್ಣ projectನಲ್ಲಿ ಕೆಲಸ ಮಾಡೋಣವೆಂದು ಅಂದುಕೊಂಡೆ. ಒಂದು project ಸಿಕ್ಕಿತು. ಹತ್ತಿರ ಹತಿರ ಸುಮಾರು ೫ ತಿಂಗಳುಗಳ ಕಾಲ ಅದರಲ್ಲಿ ಕೆಲಸ ಮಾಡಿದೆ. ಕಳೆದ ಒಂದು ತಿಂಗಳು ಬಹಳ ಕೆಲಸವಿದ್ದುದರಿಂದ facebookಗೆ ರಜೆ ಹೇಳಿದ್ದೆ. Project ವಿಚಾರವನ್ನು ಮುಂದಿನ statusನಲ್ಲಿ ತಿಳಿಸುತ್ತೇನೆ. #ಎಲ್ಲರಿಗೂ_Happy_Sun_Day! #In_The_Pursuit_of_Happiness!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kudligi DySP Anupama Shenoy has withdrawn her resignation. She is set to return to her job soon says her recent post on Facebook.
Please Wait while comments are loading...