ಕೆರೆಗಳ ಡಿನೋಟಿಫಿಕೇಶನ್ ಕೈಬಿಡುವಂತೆ ಸಿಎಂಗೆ ಸದಾನಂದ ಗೌಡ ಪತ್ರ

Subscribe to Oneindia Kannada

ಬೆಂಗಳೂರು, ಆಗಸ್ಟ್ 3: ಬತ್ತಿಹೋದ ಕೆರೆಗಳನ್ನು ಡಿನೋಟಿಫೈ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ಸಚಿವ ಟಿಬಿ ಜಯಚಂದ್ರ ವಿರುದ್ಧ ಕೆರೆ ಅತಿಕ್ರಮಣ ದೂರು

ಪತ್ರದಲ್ಲಿ, "ಕೆರೆಗಳು ಕೃಷಿಕರ ಜೀವನಾಡಿಯಾಗಿವೆ. ಇಂಥ ಸಂದರ್ಭದಲ್ಲಿ1500 ಕೆರೆಗಳನ್ನು ಡಿನೋಟಿಫೈ ಮಾಡುವ ರಾಜ್ಯ ಸಚಿವ ಸಂಪುಟದ ತೀರ್ಮಾನ ಅಘಾತಕಾರಿಯಾಗಿದೆ," ಎಂದು ಸದಾನಂದ ಗೌಡರು ಹೇಳಿದ್ದಾರೆ.

DV Sadananda Gowda wrote a letter to Siddaramaiah against de-notification of lakes

"ಕೆರೆಗಳ ಡಿನೋಟಿಫೈ ಮಾಡುವ ತೀರ್ಮಾನಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದೆ. ಹಾಗಾಗಿ ನಿಮ್ಮ ತೀರ್ಮಾನ ಜನಾಂದೋಲನಕ್ಕೆ ವ್ಯತಿರಿಕ್ತವಾಗಿದೆ. ರಾಜ್ಯ ಬರಗಾಲದಿಂದ ತತ್ತರಿಸಿ ಜೀವ ಸಂಕುಲಗಳು ವಿನಾಶದ ಹಾದಿ ಹಿಡಿದಿರುವ ಹೊತ್ತಲ್ಲಿ, ಡಿನೋಟಿಫೈ ಮಾಡುವುದನ್ನು ಬಿಟ್ಟು ಕರೆಗಳನ್ನು ಪುನರುಜ್ಜೀವನಗೊಳಿಸಿ," ಎಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಕೆರೆಗಳ ಡಿನೋಟಿಫೀಕೇಶನ್ ವಿರುದ್ಧ ರಾಜ್ಯಪಾಲರಿಗೆ ಎಚ್.ಡಿ.ಕೆ ಪತ್ರ

ಈ ಹಿಂದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಕೆರೆಗಳ ಡಿನೋಟಿಫಿಕೇಶನ್ ವಿರೋಧಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

ಸದಾನಂದ ಗೌಡರು ಬರೆದ ಪತ್ರದ ಪೂರ್ಣ ಪಾಠ ಇಲ್ಲಿದೆ..

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, " ಪತ್ರ ಬರೆದಿದ್ದಕ್ಕೆ ಧನ್ಯವಾದಗಳು. ನಿಮ್ಮದು ತಪ್ಪು ಅಭಿಪ್ರಾಯವಾಗಿದೆ. ಯಾವುದೇ ಕೆರೆಯನ್ನೂ ಡಿ ನೋಟಿಫೈ ಮಾಡುತ್ತಿಲ್ಲ. ನಾವು ವಾಸ್ತವವಾಗಿ ಕೆರೆಗಳನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ ಮತ್ತು ಅವುಗಳನ್ನು ಭರ್ತಿ ಮಾಡುತ್ತಿದ್ದೇವೆ," ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former chief minister of Karnataka and Union minister DV Sadananda Gowda wrote a letter to CM Siddaramaiah and request to drop Karnataka State Government move on de-notification of 1500 dying lakes.
Please Wait while comments are loading...