ಅಸ್ಸಾಂ ಸೊಸೈಟಿ ಆಫ್ ಬೆಂಗಳೂರಿಂದ ಸೆ.26ರಿಂದ 30ರ ವರೆಗೆ ದುರ್ಗಾ ಪೂಜೆ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 13: ಅಸ್ಸಾಂ ಸೊಸೈಟಿ ಆಫ್ ಬೆಂಗಳೂರು ವತಿಯಿಂದ ಐದನೇ ವರ್ಷದ ದುರ್ಗಾ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಉಡುಪಿಯಲ್ಲಿ ಬುಧವಾರ ಕೃಷ್ಣಾಷ್ಟಮಿ, ಗುರುವಾರ ವಿಟ್ಲಪಿಂಡಿ ಉತ್ಸವ

ಸೆಪ್ಟೆಂಬರ್ 26ರಿಂದ 30ರ ವರೆಗೆ ದುರ್ಗಾ ಪೂಜೆಯನ್ನು ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನ ಹತ್ತೊಂಬತ್ತನೇ ಮುಖ್ಯರಸ್ತೆಯಲ್ಲಿರುವ ಜ್ಞಾನಸೃಷ್ಟಿ ಶಾಲೆಯ ಎದುರಿನಲ್ಲಿರುವ ಬಿಬಿಎಂಪಿ ಮೈದಾನದಲ್ಲಿ ಆಯೋಜಿಸಲಾಗಿದೆ.

Durga pooja in Bengaluru from September 26th to 30th

ಈ ಸಂದರ್ಭದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುವುದು. ಜತೆಗೆ ಆಹಾರ ಮೇಳವು ಸಹ ಇರುತ್ತದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಫುಷ್ಪಾಂಜಲಿ ಪ್ರದಾನ ಇರುತ್ತದೆ. ಮಧ್ಯಾಹ್ನ 1ರಿಂದ 3 ಗಂಟೆವರೆಗೆ ಭೋಗ್ ಪ್ರಸಾದ್ ಇರುತ್ತದೆ.

ಸಂಜೆ 6.30ರ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಸಾರ್ವಜನಿಕರು ಇವುಗಳಲ್ಲಿ ಪಾಲ್ಗೊಳ್ಳಬೇಕು ಎಂದು ಅಸ್ಸಾಂ ಸೊಸೈಟಿಯ ಅಧ್ಯಕ್ಷರಾದ ಸುಮೇರು ಕಾಟಕಿ ಹಾಗೂ ಪ್ರಧಾನ ಕಾರ್ಯದರ್ಶಿ ಹಿರಾಕ್ ಜ್ಯೋತಿ ಕಾಕತಿ ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Durga pooja in Bengaluru from September 26th to 30th in HSR layout by Assam society of Bengaluru.
Please Wait while comments are loading...