'ನಮ್ಮ ಮೆಟ್ರೋ'ದಿಂದಾಗಿ ಬಿಎಂಟಿಸಿ ಆದಾಯ ಇಳಿಕೆ!

Posted By:
Subscribe to Oneindia Kannada

ಬೆಂಗಳೂರು,ಆ. 3: ಸದ್ಯದ ಮಟ್ಟಿಗೆ ಬೆಂಗಳೂರಿಗರ ಅಚ್ಚುಮೆಚ್ಚಿನ ಸಾರ್ವಜನಿಕ ಸಾರಿಗೆಯಾಗಿರುವ ನಮ್ಮ ಮೆಟ್ರೋ ರೈಲು ಬಂದಾಗಿನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ನಷ್ಟವಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

'ಯಶವಂತಪುರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೇರ ರೈಲು'

ಮೆಟ್ರೋರೈಲು ಪ್ರಯಾಣ ಆರಂಭವಾದ ನಂತರ, ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು 2 ಲಕ್ಷದಷ್ಟು ಇಳಿಮುಖವಾಗಿದೆ. ಇದರಿಂದಾಗಿ, ಸಂಸ್ಥೆಗೆ ಪ್ರತಿದಿನ 5 ಲಕ್ಷ ರು. ಆದಾಯ ಕಡಿಮೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಮೆಟ್ರೋದಲ್ಲಿ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಲು ಆ.26 ಕೊನೆ

Due to Metro rail, BMTC income reduced about 5 lakh per day: Ramalinga Reddy

ನಿತ್ಯ ಬಿಎಂಟಿಸಿ ಬಸ್‍ಗಳಲ್ಲಿ 52 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದೀಗ, ಮೆಟ್ರೊ ರೈಲಿನಿಂದ ಪ್ರತಿನಿತ್ಯ ಸುಮಾರು 5 ಲಕ್ಷ ರು. ಆದಾಯದಲ್ಲಿ ಇಳಿಕೆಯಾಗಿದೆ ಎಂದರು. ಸದ್ಯಕ್ಕೆ ಬೆಂಗಳೂರಿನ ಸುತ್ತಮುತ್ತಲ 25 ಕಿ.ಮೀವರೆಗೂ ಬಿಎಂಟಿಸಿ ಬಸ್ ವ್ಯವಸ್ಥೆ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಹೊಸ ಬಸ್ ಖರೀದಿ: ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಪ್ರಸಕ್ತÀ ಸಾಲಿನಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಹಾಗೂ ನಗರ ಸಾರಿಗೆ ಸಂಸ್ಥೆಗೆ 5172 ಹೊಸ ಬಸ್ಸುಗಳನ್ನು ಖರೀದಿಸಲಿದ್ದು ಡಿಸೆಂಬರ್ ಅಂತ್ಯದೊಳಗೆ ಹೊಸ ಬಸ್ಸುಗಳು ಸಂಚಾರ ಆರಂಭಿಸಲಿವೆ ರಾಮಲಿಂಗಾರೆಡ್ಡಿ ತಿಳಿಸಿದರು.

ಮೆಟ್ರೋದಲ್ಲಿ ಹಿಂದಿ ಬಳಸಲು ಸಾಧ್ಯವಿಲ್ಲ - ಕೇಂದ್ರಕ್ಕೆ ಸಿಎಂ ಪತ್ರ

ಮನವಿ: ಈ ಹಿಂದೆ ನರ್ಮ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ ಬರುತ್ತಿತ್ತು. ಈಗ ಕಡಿತಗೊಳಿಸಲಾಗಿದೆ. ಈ ಸಂಬಂಧ ತಾವು ಸೇರಿದಂತೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಈ ಹಿಂದೆ ಕೇಂದ್ರ ಸಚಿವರಾಗಿದ್ದ ವೆಂಕಯ್ಯ ನಾಯ್ದು ಅವರನ್ನು ಭೇಟಿಮಾಡಿ ಅನುದಾನ ನಿಲ್ಲಿಸದಂತೆ ಮನವಿ ಮಾಡಿದ್ದೇವೆ ಎಂದರು.

36 ನಗರಗಳಲ್ಲಿ 'ನಗರ ಸಾರಿಗೆ':ನಮ್ಮ ಯೋಜನೆಯಡಿ ರಾಜ್ಯದಲ್ಲಿನ 36 ನಗರಗಳಲ್ಲಿ ನಗರ ಸಾರಿಗೆ ಬಸ್ ಸಂಚಾರ ಸೇವೆ ಆರಂಭಿಸಲಾಗಿದ್ದು ಸುಮಾರು 76 ಹೊಸ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾತನಾಡಿದ ಸಾರಿಗೆ ಸಚಿವರು ಸುಮಾರು 52 ಲಕ್ಷ ಜನರು ಇಂದಿಗೂ ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದು 1.15 ಕೋಟಿ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿದಿನ ಪ್ರಯಾಣ ಮಾಡುತ್ತಿದ್ದಾರೆ ಎಂದು ತಿಳಿಸಿದರು.

85 ವರ್ಷದ ವೃದ್ಧೆ ಕೆಐಎಡಿಬಿಗೆ ಕೋಟಿಗಟ್ಟಲೆ ನಾಮ ಹಾಕಿದ ಕುತೂಹಲದ ಕತೆ!

ದಾಖಲೆ ಸಲ್ಲಿಕೆಗೆ ಮತ್ತೊಂದು ಅವಕಾಶ: ಅಂತರ್‍ ನಿಗಮ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 700 ಸಿಬ್ಬಂದಿಗಳು ಇನ್ನೂ ಸಮರ್ಪಕ ದಾಖಲೆಗಳನ್ನು ಒದಗಿಸಿಲ್ಲ ಎಂದು ತಿಳಿಸಿದ ಸಾರಿಗೆ ಸಚಿವರು ಹೀಗಾಗಿ ಅಂತವರಿಗೆ ಮತ್ತೊಂದು ಅವಕಾಶ ನೀಡಿ ಸಮರ್ಪಕ ದಾಖಲೆ ನೀಡುವಂತೆ ಸೂಚಿಸಲಾಗಿದೆ ಎಂದರು.

ಐದು ಪ್ರಶಸ್ತಿ ಸಂಭ್ರಮ: ರಾಜ್ಯದಲ್ಲಿ ಸಾರಿಗೆ ಸಂಸ್ಥೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಹಲವಾರು ಪ್ರಶಸ್ತಿಗಳು ಗೌರವಗಳು ಲಭಿಸಿದ್ದು, ಕಳೆದ ವಾರ ಕೂಡ ಸಂಸ್ಥೆಗೆ ಐದು ಪ್ರಶಸ್ತಿಗಳು ಲಭಿಸಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The daily income of BMTC has been reduced due to the arrival of Namma Metro facility in Bengaluru,says Transport Minister of Karnataka Ramalinga Reddy on August 3, 2017.
Please Wait while comments are loading...