ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಳಿ ಕಳಚಿ ಬೇಸಿಗೆಯತ್ತ ಹೆಜ್ಜೆ: ತಾಪಮಾನ ಹೆಚ್ಚಳ

|
Google Oneindia Kannada News

ಬೆಂಗಳೂರು, ಫೆಬ್ರವರಿ 12 : ಬಂಗಾಳಕೊಲ್ಲಿಯಲ್ಲಿ ಉಂಟಾದ ಮೇಲ್ಮೈ ಸುಳಿಗಾಳಿ ಪರಿಣಾಮ ನಗರದಲ್ಲಿ ಚಳಿ ಮರೆಯಾಗಿ ಸ್ವಲ್ಪ ಸೆಕೆ ಕಾಣಿಸಿಕೊಂಡಿದೆ. ಆದರೆ ಇದು ಮೇಲ್ಮೈ ಸುಳಿಗಾಳಿಯಿಂದಾದ ಪರಿಣಾಮ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ತಿಂಗಳ ಆರಂಭದಲ್ಲಿ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಕಂಡು ಬಂದಿದ್ದರಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನವು ಹೆಚ್ಚಾಗಿ ಚಳಿ ಮಾಯವಾಗಿತ್ತು. ಆಗ ಗರಿಷ್ಠ ತಾಪಮಾನದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರಲಿಲ್ಲ. ಆದರೆ ಕಳೆದೆರೆಡು ದಿನಗಳಿಂದ ಗರಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ.

ಬೆಂಗಳೂರಿಗೆ ಕಾದಿದೆ ನೀರಿನ ಬರ: ಬಿಬಿಸಿ ವರದಿಯಲ್ಲಿ ಎಚ್ಚರಿಕೆಬೆಂಗಳೂರಿಗೆ ಕಾದಿದೆ ನೀರಿನ ಬರ: ಬಿಬಿಸಿ ವರದಿಯಲ್ಲಿ ಎಚ್ಚರಿಕೆ

ಕನಿಷ್ಠ ತಾಪಮಾನ ಕೂಡ ಏರಿರುವುದರಿಂದ ಸೆಕೆ ಕಂಡು ಬರುತ್ತಿದೆ. ಸಾಮಾನ್ಯವಾಗಿ ಫೆಬ್ರವರಿ ಮಧ್ಯಭಾಗದಿಂದ ಸೆಕೆ ಆರಂಭವಾಗುತ್ತದೆ. ಆದರೆ ಇದನ್ನು ಬೇಸಿಗೆ ಕಾಲ ಎಂದು ಪರಿಗಣಿಸಲು ಸಾಧ್ಯವಿಲ್ಲ. ಮೇಲ್ಮೈ ಸುಳಿಗಾಳಿಯ ಪರಿಣಾಮ ದಿಂದ ಹವಾಮಾನ ಬದಲಾಗಿರುವದರಿಂದ ಸ್ವಲ್ಪಮಟ್ಟಿಗೆ ಸೆಕೆ ಇದೆ ಎಂದು ತಿಳಿಸಿದೆ.

Dry wind causes increase in temperature

ಮೋಡ ಕಂಡುಬಂದಿದ್ದರಿಂದ ಕನಿಷ್ಠ ತಾಪಮಾನ ಇಳಿಕೆಯಾಗಿತ್ತು, ಈಗ ಗರಿಷ್ಠ ತಾಪಮಾನ ಏರುತ್ತಿದೆ. ಆದರೆ ಮಾರ್ಚ್ ಆರಂಭದಿಂದ ಮೇ ಅಂತ್ಯದೊರೆಗಿನ ದಿನಗಳನ್ನು ಮಾತ್ರ ಬೇಸಿಗೆ ಕಾಲ ಎಂದು ಪರಿಗಣನಿಸಲಾಗುತ್ತದೆ. ಇನ್ನು ಎರಡು ದಿನಗಳಲ್ಲಿ ಇದು ಇನ್ನೂ ಅಧಿಕವಾಗಲಿದೆ.

ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 30.8 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ 30 ಡಿಗ್ರಿ ಹಾಗೂ ಕನಿಷ್ಠ 17.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ30 ಹಾಗೂ ಕನಿಷ್ಠ 16.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

English summary
Gradually increasing minimum and maximum temperature in Bengaluru and Karnataka as well. Dry wind continued in last three days after depression in Bay of Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X