ಮದ್ಯ ಸೇವಿಸಿ ಟೈಟ್ ಆದ ಕೋತಿ, ಬಾರ್ ನಲ್ಲಿ ಕೀಟಲೆ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 14 : ಮದ್ಯ ಸೇವಿಸಿದ ಮಂಗ ಸಾರ್ವಜನಿಕರ ಬಳಿ ಕೀಟಲೆ ಮಾಡಿರುವ ಘಟನೆ ಬಾಣಸವಾಡಿ ಬಳಿಯ ಕಮ್ಮನಹಳ್ಳಿಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ವೊಂದರಲ್ಲಿ ನಡೆದಿದೆ.

ಅಳಿದುಳಿದ ತಿಂಡಿಗಳು ಸುಲಭವಾಗಿ ಸಿಗುತ್ತಿದ್ದ ಕಾರಣ ಕಮ್ಮನಹಳ್ಳಿಯ ದಿವಾಕರ್ ಬಾರ್‌ಗೆ ಆಗಾಗ್ಗೆ ಮಂಗವೊಂದು ಬರುತ್ತಿತ್ತು. ಕುಡುಕರು ಸೇವಿಸಿ ಬಿಟ್ಟಿರುವ ಮದ್ಯದ ಗ್ಲಾಸ್ ಹಾಗೂ ಬಾಟಲಿಗಳಲ್ಲಿನ ಅಳಿದುಳಿದ ಮದ್ಯವನ್ನು ಸೇವಿಸುವ ಅಭ್ಯಾಸ ಮಾಡಿಕೊಂಡಿತ್ತು.

ಸ್ವಚ್ಛ ಭಾರತ ಅಭಿಯಾನಕ್ಕೆ ಮಾಡೆಲ್ ನಂತಿದೆ ನೋಡಿ ಈ ಮಂಗ...

ಸ್ವಲ್ಪ ಹೆಚ್ಚಾಗಿಯೇ ಮದ್ಯ ಸಿಕ್ಕಿದ್ದರಿಂದಲೋ ಅಥವಾ ಕಿಡಿಗೇಡಿಗಳು ಮದ್ಯ ಕುಡಿಸಿದ್ದರಿಂದಲೋ ಏನೋ ಸೋಮವಾರ ರಾತ್ರಿ ಕೋತಿಗೆ ಅಮಲು ಏರಿ ಬಿಟ್ಟಿತ್ತು. ತೂರಾಡುತ್ತಿದ್ದ ಮಂಗ, ಅತ್ತಿಂದಿತ್ತ ಜಿಗಿದು ಕೀಟಲೆ ಮಾಡಿದೆ. ಈ ವೇಳೆ ಕೆಲವು ಗ್ರಾಹಕರು ಗಾಬರಿಗೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮತ್ತೆ ಕೆಲವರು ಕೋತಿ ಕೀಟಲೆಯನ್ನು ಮೊಬೈಲ್‌ ಫೋನ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

Drunken monkey made trouble for bar owner

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Drunken monkey made trouble for bar owner. Earlier some drunk people are make a habit to give alcohol for this monkey.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ