ಡ್ರಗ್ ಸೇವಿಸುವ ವಿದ್ಯಾರ್ಥಿಗಳನ್ನು ಜೈಲಿಗಟ್ಟಿ: ಪಿಯು ಇಲಾಖೆ ಸೂಚನೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 22: ಕಾಲೇಜುಗಳಲ್ಲಿ ಪತ್ತೆಯಾಗುವ ಡ್ರಗ್ ಸೇವನೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಇಲಾಖೆ ಹೊರಡಿಸಿರುವ ಸುತ್ತೋಲೆ ಕುರಿತು ಬ್ಯಾಂಗ್ಲೂರ್ ಮಿರರ್ ಪತ್ರಿಕೆ ವರದಿ ಮಾಡಿದೆ, ಅಷ್ಟೇ ಅಲ್ಲದೆ ನ್ಯೂಸ್ ಮಿನಿಟ್ ಸಹ ತನ್ನ ವೆಬೈಸೈಟ್ ನಲ್ಲಿ ಈ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿದೆ.

ಕಾಲೇಜುಗಳಲ್ಲಿ ಮಾದಕ ದ್ರವ್ಯ ಹಾಗು ಮಾನಸಿಕ ಸ್ಥಿರತೆಯನ್ನು ಹಾಳುಮಾಡುವಂತಹ ಪದಾರ್ಥಗಳನ್ನು ಸೇವಿಸುತ್ತಿರುವ ವಿದ್ಯಾರ್ಥಿಗಳ ಕುರಿತು ಕೂಡಲೇ ಪೊಲೀಸ್ ಇಲಾಖೆಗೆ ವರದಿ ನೀಡುವಂತೆ ರಾಜ್ಯದ ಎಲ್ಲ ಕಾಲೇಜುಗಳಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಅಷ್ಟೇ ಅಲ್ಲದೆ ಕ್ಯಾಂಪಸ್ ಗಳಲ್ಲಿ ಈ ಕುರಿತು ಆಗಾಗ್ಗೆ ಪರಿಶೀಲನೆ ನಡೆಸುವಂತೆ ಕಾಲೇಜುಗಳಿಗೆ ಸೂಚಿಸಿದೆ.

Drug abuse: Karnataka PU department issued a new directive

ತನಿಖೆ ವೇಳೆ ಕಾಲೇಜು ಕ್ಯಾಂಪಸ್ ಗಳಲ್ಲಿ ಮಾದಕ ದ್ರವ್ಯಗಳು ಪತ್ತೆಯಾದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲು ಮತ್ತು ಮಾದಕ ಪದಾರ್ಥಗಳನ್ನು ಸೇವಿಸುತ್ತಿರುವ ವಿದ್ಯಾರ್ಥಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ಸಂಪೂರ್ಣ ಸ್ವತಂತ್ರ್ಯ ಎಂದು ಇಲಾಖೆ ಸುತ್ತೋಲೆಯಲ್ಲಿ ಸೂಚಿಸಿದೆ.

ಕೊಕೆನ್, ಮಾರ್ಫೈನ್, ಅಫೀಮ್, ಗಾಂಜಾ, ಹಾಗು ಮಾನಸಿಕ ಸ್ಥಿರತೆಯನ್ನು ಹಾಳುಮಾಡುವಂತಹ ಪದಾರ್ಥಗಳನ್ನು ಸೇವಿಸುವ ವಿದ್ಯಾರ್ಥಿ ಅಥವಾ ಕಾಲೇಜು ಸಿಬ್ಬಂದಿ ಯಾರಾದರೂ ಪತ್ತೆಯಾದಲ್ಲಿ ಅವರನ್ನು ಕೂಡಲೇ ಪೊಲೀಸ್ ವಶಕ್ಕೆ ಒಪ್ಪಿಸಬೇಕು.

ಮತ್ತು ಅಂತಹವರ ವಿರುದ್ಧ ಎನ್ ಡಿ ಪಿ ಎಸ್ (ಮಾದಕ ಪದಾರ್ಥ ಮತ್ತು ಮಾನಸಿಕ ಸ್ಥಿರತೆ ಹಾಳು ಮಾಡುವ ಪದಾರ್ಥ ಸೇವನೆ) ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ಅಷ್ಟೇ ಅಲ್ಲದೆ ಅಂತಹವರಿಗೆ 1 ವರ್ಷ ಜೈಲು ಮತ್ತು 20ಸಾವಿರ ರೂ. ದಂಡ ವಿಧಿಸುಬಹುದು ಎಂದು ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಡ್ರಗ್ ಸೇವನೆ ಮಾಡಿರುವ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಕಾಲೇಜು ಆಡಳಿತ ಸಿಬ್ಬಂದಿ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಶಿಕಲಾ ತಿಳಿಸಿದ್ದಾರೆ.

ಹಲವು ಶ್ರೀಮಂತ ವಿದ್ಯಾರ್ಥಿಗಳು ಡ್ರಗ್ ಸೇವನೆ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದರು. ಇಲಾಖೆಯ ಈ ಕ್ರಮದಿಂದ ಇನ್ನು ಮುಂದೆ ಅಂತಹ ಅವಕಾಶ ಇರುವುದಿಲ್ಲ ಎಂದು ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕೇವಲ ಬೆಂಗಳೂರು ನಗರವೊಂದರಲ್ಲೇ 93 ಡ್ರಗ್ ಸೇವನೆ ಪ್ರಕರಣಗಳು 2016 ವರ್ಷದಲ್ಲಿ ವರದಿಯಾಗಿವೆ. ಬಂಧಿತರಿಂದ ಅಪಾಯಕಾರಿ ಮಾದಕ ಪದಾರ್ಥಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಂದು ನ್ಯೂಸ್ ಮಿನಿಟ್ ವರದಿಯಲ್ಲಿ ಉಲ್ಲೇಖಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka Pre-University Department has decided to take stringent action against instances of drug abuse among students, The department has issued a new directive to colleges
Please Wait while comments are loading...