ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕೆರೆ ಮೇಲೆ ಡ್ರೋನ್ ಜತೆಗೆ ಮೋಟರ್ ಬೋಟ್ ಕಣ್ಗಾವಲು

|
Google Oneindia Kannada News

ಬೆಂಗಳೂರು, ಫೆಬ್ರವರಿ 24 : ಬೆಳ್ಳಂದೂರು ಕೆರೆಯಲ್ಲಿ ಈಗಾಗಲೇ ನಾಲ್ಕೈದು ಬಾರಿ ಬೆಂಕಿ ಕಾಣಿಸಿಕೊಂಡು ಸ್ಥಳೀಯರನ್ನು ಆತಂಕ್ಕೀಡು ಮಾಡಿತ್ತು. ಬಿಬಿಎಂಪಿಯು ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟುವುದರ ಜತೆಗೆ ಕೆರೆಯ ಮೇಲೆ ಕಣ್ಗಾವಲಿಡಲು ಡ್ರೋನ್ ಕ್ಯಾಮೆರಾದ ಜತೆಗೆ ಮೋಟರ್ ಬೋಟ್ ವ್ಯವಸ್ಥೆಯನ್ನು ರೂಪಿಸಲು ಚಿಂತನೆ ನಡೆಸಿದೆ.

ದುಷ್ಕರ್ಮಿಗಳು ಕೆರೆಯ ಸುತ್ತಮುತ್ತಲಿನ ಜಾಗಕ್ಕೆ ತೊಂದರೆ ಮಾಡಲದಂತೆ ನಿಗಾವಹಿಸಲು ನಿವೃತ್ತ ಸೇನಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜತೆಗೆ ಪೈಲಟ್ ಕ್ಯಾಮೆರಾ, ಡ್ರೋನ್ಸ್ ಅದರ ಜತೆಗೆ ಮೋಟಾರ್ ಬೋಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಳ್ಳಂದೂರು ಕೆರೆಯ ದಂಡೆಯಲ್ಲಿ ಎರಡು ವಾಚ್ ಟವರ್ ನಿರ್ಮಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

ಬೆಳ್ಳಂದೂರು ಕೆರೆ ಮೇಲೆ ನಿಗಾ ಇಡಲು ಡ್ರೋನ್ ಕ್ಯಾಮೆರಾ ಬಳಕೆಬೆಳ್ಳಂದೂರು ಕೆರೆ ಮೇಲೆ ನಿಗಾ ಇಡಲು ಡ್ರೋನ್ ಕ್ಯಾಮೆರಾ ಬಳಕೆ

ಡ್ರೋನ್ ಕ್ಯಾಮೆರಾವನ್ನು ಒದಗಿಸುವಂತೆ ಎಚ್.ಎ.ಎಲ್ ಗೆ ಮನವಿ ಮಾಡಲಾಗಿದೆ. ಕ್ಯಾಮೆರಾಕ್ಕೆ 70,80,000 ವೆಚ್ಚವಾಗಲಿದೆ. ಮೋಟಾರ್ ಬೋಟ್ ಮನವಿಗೆ ಬಿಬಿಎಂಪಿ ಆಯುಕ್ತರು ಒಪ್ಪಿಗೆ ಸೂಚಿಸಿದ್ದಾರೆ. 2.5 ಲಕ್ಷ ಬೆಲೆಬಾಳುವ ಮೋಟರ್ ಬೋಟ್ ನ್ನು ಖರೀದಿಸಲಾಗುತ್ತದೆ. ಅದರ ಜತೆಗೆ ಮೋಟರ್ ಗೆ ಪ್ರತ್ಯೇಕವಾಗಿ 2 ಲಕ್ಷ ರೂ ವೆಚ್ಚವಾಗಲಿದೆ.

Drones and Motorboat to up surveillance at Bellandur Lake

ನೀರು ಕಲುಷಿತವಾಗಿರುವುದರ ಜತೆಗೆ ನೊರೆ ತುಂಬಿಕೊಂಡಿರುವುದರಿಂದ ಸಾಮಾನ್ಯ ಚಾಲಕನಿಗೆ ಮೋಟಾರ್ ಬೋಟ್ ಚಲಾವಣೆ ಸಾಧ್ಯವಿಲ್ಲ ಹಾಗಾಗಿ ಆರ್ಮಿಯವರನ್ನೇ ನಿಯೋಜಿಸಬೇಕಾಗುತ್ತದೆ. ಅದರ ಜತೆಗೆ 2 ಡ್ರೋನ್ ಕ್ಯಾಮೆರಾಗಳನ್ನು ಕೂಡ ಸೇನೆಯಿಂದ ನಿವೃತ್ತರಾಗಿರುವ ಆರ್ಮಿಮೆನ್ ಗಳೇ ನೋಡಿಕೊಳ್ಳಲಿದ್ದಾರೆ.

English summary
Following repeated outbreaks of fire in Bellandur lake, which the civic agencies have maintained was caused by miscreants, the BBMP is set to take elaborate measures to increase surveillance in the lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X