ಬೆಂಗಳೂರಿನ ದೇವಾಲಯದಲ್ಲಿ ಮೊಟ್ಟಮೊದಲ ಬಾರಿಗೆ ಡ್ರೆಸ್ ಕೋಡ್ ಜಾರಿ

Posted By:
Subscribe to Oneindia Kannada
   ಬೆಂಗಳೂರಿನ ರಾಜರಾಜೇಶ್ವರಿನಗರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಡ್ರೆಸ್ ಕೋಡ್ | Oneindia Kannada

   ಬೆಂಗಳೂರು, ಏ 11: ಬೆಂಗಳೂರು ನಗರ, ಗ್ರಾಮೀಣ ಭಾಗದ ಮುಜರಾಯಿ ವ್ಯಾಪ್ತಿಯಿಂದ ಹೊರಗಿರುವ ಅಂದರೆ ಖಾಸಗಿ ದೇವಾಲಯವೊಂದರಲ್ಲಿ ಇದೇ ಮೊದಲಬಾರಿಗೆ ವಸ್ತಸಂಹಿತೆ ಜಾರಿಗೆ ತರಲಾಗಿದೆ.

   ಮೈಸೂರು ರಸ್ತೆ, ರಾಜರಾಜೇಶ್ವರಿ ನಗರದಲ್ಲಿರುವ ಪುರಾಣಪ್ರಸಿದ್ದ ರಾಜರಾಜೇಶ್ವರಿ ದೇವಾಲಯದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ, ದೇವಾಲಯದೊಳಗೆ ಪ್ರವೇಶಿಸುವ ಭಕ್ತಾದಿಗಳು ಆಡಳಿತ ಮಂಡಳಿ ಸೂಚಿಸಿರುವ ವಸ್ತ್ರ ಸಂಹಿತೆ ಪಾಲಿಸಬೇಕಿದೆ.

   ದೇವಾಲಯದ ಆವರಣದಲ್ಲಿ ಈ ಬಗ್ಗೆ ಸೂಚನಾ ಫಲಕ ಹಾಕಲಾಗಿದ್ದು, ಲೋವೇಸ್ಟ್ ಜೀನ್ಸ್, ಬರ್ಮುಡಾ, ಟಿ-ಶರ್ಟ್ಸ್, ಜೀನ್ಸ್ ಮುಂತಾದ ಬಟ್ಟೆಗಳನ್ನು ಹಾಕಿಕೊಂಡು ಹೋದರೆ ಪ್ರವೇಶ ನಿಷಿದ್ದ ಎಂದು ಹೇಳಿದೆ.

   Dress code has been implemented in Rajarajeshwari temple in Bengaluru

   ಬೆಂಗಳೂರಿನ ಅತ್ಯಂತ ಪುರಾತನ ಮತ್ತು ಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿರುವ ರಾಜರಾಜೇಶ್ವರಿ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ಪ್ರಮುಖವಾಗಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಭಾರೀ ಜನಸಂದಣಿಯಿರುತ್ತದೆ.

   ಈ ಹಿಂದೆ ಹಲವು ಬಾರಿ ಅರೆಬರೆ ಬಟ್ಟೆ ಹಾಕಿಕೊಂಡು ಜನರು ಬಂದಾಗ ಬಹಳ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಹಿಂದೂ ಧರ್ಮ ಸಂಸ್ಕೃತಿಗೆ ಒಪ್ಪುವಂತೆ ವಸ್ತ್ರ ಸಂಹಿತೆ ಜಾರಿಗೆ ತರಲು ಆಡಳಿತ ಮಂಡಳಿ ನಿರ್ಧರಿಸಿದೆ.

   ಯಾವ ಬಟ್ಟೆ ಧರಿಸಿಕೊಂಡು ಬರಬಹುದು (ಪುರುಷರು): ಧೋತಿ ಅಥವಾ ಪಂಚೆ, ಶಲ್ಯ ಅಥವಾ ಅಂಗವಸ್ತ್ರ, ಪ್ಯಾಂಟ್, ಶರ್ಟ್ಸ್
   ಯಾವ ಬಟ್ಟೆ ಧರಿಸಿಕೊಂಡು ಬರಬಹುದು (ಮಹಿಳೆಯರು): ಸೀರೆ, ಪೂರ್ಣಪ್ರಮಾಣದ ಚೂಡಿದಾರ, ವಯಸ್ಸಿಗನುಗುಣವಾಗಿ ದುಪ್ಪಟ್ಟ. ಜೊತೆಗೆ, ಕೂದಲನ್ನು ಜಡೆ ಅಥವಾ ಪೂರ್ತಿಯಾಗಿ ಕಟ್ಟಿಕೊಂಡು ಬರಬೇಕು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Never befor earlier, dress code has been implemented in Rajarajeshwari temple in, Raja Rajeshwari Nagar, Bengaluru. This is the first private temple started dress code system in Bengaluru

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ