ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ: ಡಾ.ಸಿ.ಎನ್.ಮಂಜುನಾಥ್

Posted By:
Subscribe to Oneindia Kannada

ಬೆಂಗಳೂರು, ಡಿ. 26: ಬೆಂಗಳೂರು ಪ್ರೆಸ್‌ಕ್ಲಬ್‌ನಿಂದ ನೀಡುವ ವಾರ್ಷಿಕ ಪ್ರತಿಷ್ಠಿತ ‘ವರ್ಷದ ವ್ಯಕ್ತಿ ಪ್ರಶಸ್ತಿ'ಗೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಡಾ.ಸಿ.ಎನ್.ಮಂಜುನಾಥ್ ಆಯ್ಕೆಯಾಗಿದ್ದಾರೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ಹೇಳಿದ್ದಾರೆ.

ಡಿಸೆಂಬರ್ 31 ರಂದು ಬೆಳಗ್ಗೆ 11 ಗಂಟೆಗೆ ಪ್ರೆಸ್‌ಕ್ಲಬ್ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದು, ಜೊತೆಗೆ 2016ರ ವರ್ಷದ ಪ್ರೆಸ್ ಕ್ಲಬ್ ಡೈರಿ ಲೋಕಾರ್ಪಣೆಗೊಳ್ಳಲಿದೆ.

Dr C N Manjunath Man of the Year 2015 Award

‘ಜೀವಮಾನ ಸಾಧನೆ' ಪ್ರಶಸ್ತಿ: ಹಿರಿಯ ಛಾಯಾಗ್ರಾಹಕರಾದ ಮುಹಮ್ಮದ್ ಅಸದ್, ಕೇಶವ ವಿಟ್ಲ ಹಾಗೂ ಹಿರಿಯ ಪತ್ರಕರ್ತರಾದ ಡಿ.ವಿ.ರಾಜಶೇಖರ್, ವಸಂತ ನಾಡಿಗೇರ್, ಎಸ್.ಆರ್.ಆರಾಧ್ಯ, ಬಿ.ಪಿ.ಮಲ್ಲಪ್ಪ, ಶಶಿಧರ್ ಭಟ್, ಕೆ.ಎಂ. ಶಿವರಾಜ್, ಆರ್.ಟಿ.ವಿಠ್ಠಲಮೂರ್ತಿ, ರುದ್ರಣ್ಣ ಹರ್ತಿಕೋಟೆ, ವಿ.ನಾಗರಾಜು, ಜಿ.ಎಂ. ಕುಮಾರ್ ಆಯ್ಕೆಗೊಂಡಿದ್ದಾರೆ.

‘ಸಾಧಕಿ' ಪ್ರಶಸ್ತಿ: ಹಿರಿಯ ಪತ್ರಕರ್ತೆಯರಾದ ನಹೀದಾ ಅತಾವುಲ್ಲಾ ಮತ್ತು ಕೆ.ಜಿ.ನಾಗಲಕ್ಷ್ಮೀ ಬಾಯಿ
‘ಕೃಷಿ ಸಾಧಕ' ಪ್ರಶಸ್ತಿ: ಮಂಡ್ಯ ಜಿಲ್ಲೆಯ ಕಿರುಗಾವಲಿನ ಸಾವಯವ ಕೃಷಿ ತಜ್ಞ ಸೈಯದ್ ಘನಿಖಾನ್ ಆಯ್ಕೆಯಾಗಿದ್ದಾರೆ

ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಶ್ರೀಧರ್ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಕಾಶ್ ತಿಳಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dr C N Manjunath, director of Sri Jayadeva Institute of Cardiovascular Sciences and Research chosen as Person of the Year 2015 by Press Club of Bangalore. The award ceremony will be held at club premises on Dec 31.
Please Wait while comments are loading...