ಇಂದಿರಾನಗರ: ಡಾ. ಅಗರವಾಲ್ ರಿಂದ ಸ್ಮೈಲ್ ಕೇಂದ್ರ ಶುರು

Posted By:
Subscribe to Oneindia Kannada

ಬೆಂಗಳೂರು, ಮೇ 15: ವಿಶ್ವದರ್ಜೆ ಗುಣಮಟ್ಟದ ನೇತ್ರ ಆರೈಕೆ ಸೌಲಭ್ಯವನ್ನು ಒದಗಿಸುವ ತನ್ನ ಬದ್ಧತೆಯನ್ನು ಇನ್ನಷ್ಟು ಬಲಪಡಿಸುವ ಕ್ರಮವಾಗಿ ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆಯು ಅತ್ಯಾಧುನಿಕ ಸೌಲಭ್ಯದ ಮಯೊಪಿಕ್ ರಿಫ್ರ್ಯಾಕ್ಟಿವ್ ದೋಷ ಸರಿಪಡಿಸುವಿಕೆ- ಸ್ಮೈಲ್ (Small Incision Lenticule Extraction) ಮತ್ತು ಅಧುನಿಕ ಕೇಂದ್ರವನ್ನು ಇಂದಿರಾನಗರದಲ್ಲಿ ಆರಂಭಿಸಿde.

ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆಗಳ ಸಮೂಹದ, ವ್ಯವಸ್ಥಾಪಕ ನಿರ್ದೇಶಕರಾದ, ಎಸ್. ರಾಜಗೋಪಾಲನ್ ಅವರು ಹೊಸ ಸೌಲಭ್ಯವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆಗಳ ಸಮೂಹದ ಸಿಇಒ ಡಾ. ಅದಿಲ್ ಅಗರವಾಲ್ ಅವರು ಇದ್ದರು.

ಈ ಸಂದರ್ಭದಲ್ಲಿ ನೇತ್ರದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೂ ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯೂ ಕೈಜೋಡಿಸಿತು. ಕಾರ್ಯಕ್ರಮದ ಭಾಗವಾಗಿ ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆಯು ಮೊಬೈಲ್ ವ್ಯಾನ್ ಹೊಂದಲಿದ್ದು, ನಗರದಾದ್ಯಂತ ಸಂಚರಿಸುವ ಈ ವಾಹನ ನೇತ್ರ ದಾನ ಕುರಿತು ಜಾಗೃತಿ ಮೂಡಿಸಲಿದೆ.

Agarwal’ s Eye Hospital

ಮೇ 14, 2016 ರಿಂದ ಆರಂಭವಾಗಿ, ಒಂದು ತಿಂಗಳ ಕಾಲ ನೇತ್ರದಾನ ಕುರಿತು ದಾನಿಗಳ ಹೆಸರು ನೋಂದಣಿ ಮಾಡಿಸಲಿದೆ. ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯು ಇದರ ಜೊತೆಗೆ ತನ್ನ ನೂತನ ಕೇಂದ್ರದ ಆಸುಪಾಸಿನಲ್ಲಿ 500 ಸಸಿಗಳನ್ನು ನೆಡಲಿದ್ದು, ಪರಿಸರ ರಕ್ಷಣೆಗೆ ಒತ್ತು ನೀಡಲಿದೆ. ಸಸಿಗಳÀನ್ನು ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯು ನಿರ್ವಹಣೆ ಮಾಡಲಿದೆ.

ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆ ಸಮೂಹದ ಸಿಇಒ ಡಾ.ಅದಿಲ್ ಅಗರವಾಲ್ : ನಮ್ಮ ಗುರಿ ಭಾರತದಲ್ಲಿ ಕಣ್ಣಿನ ಚಿಕಿತ್ಸೆ ಪ್ರಕ್ರಿಯೆಗೆ ಹೊಸ ವ್ಯಾಖ್ಯಾನ ಬರೆಯುವುದು. ನೂತನ ಕ್ಲಿನಿಕ್ ಉದ್ಘಾಟನೆಯು ಗುಣಮಟ್ಟದ ನೇತ್ರ ತಪಾಸಣೆ ಚಿಕಿತ್ಸೆಯನ್ನು ನಗರದ ಜನರಿಗೂ ಒದಗಿಸುವುದೇ ಆಗಿದೆ.

ನಮ್ಮ ನೆಟ್‍ವರ್ಕ್ ಜಾಲವನ್ನು ನಾವು ತ್ವರಿತಗತಿಯಲ್ಲಿ ವಿಸ್ತರಿಸುತ್ತಿದ್ದೇವೆ. ರಾಜ್ಯಾದ್ಯಂತ ಇನ್ನೂ ಐದು ಕೇಂದ್ರಗಳನ್ನು ಉದ್ಘಾಟಿಸಲು, ಕೇರಳ, ಒಡಿಶಾ, ಕೋಲ್ಕತ್ತಾದಲ್ಲಿಯೂ ಈ ಹಣಕಾಸು ವರ್ಷದಲ್ಲಿ ಕ್ಲಿನಿಕ್ ಆರಂಭಿಸಲು ನಾವು ಉದ್ದೇಶಿಸಿದ್ದೇವೆ' ಎಂದು ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆ ಸಮೂಹದ ಸಿಇಒ ಡಾ.ಅದಿಲ್ ಅಗರವಾಲ್ ಅವರು ಹೇಳಿದರು.

ನೇತ್ರದಾನ ಆಭಿಯಾನ: ದೇಶದಲ್ಲಿ ನೇತ್ರದಾನದ ಪ್ರಮಾಣ ಕಡಿಮೆ ಇದೆ. ನೇತ್ರದಾನದಿಂದ 2.5 ಲಕ್ಷ ಜನರು ಅನುಕೂಲ ಪಡೆಯಬಹುದು. ಆದರೆ ಕೆಲವೇ ಜನರು ನೇತ್ರದಾನ ಮಾಡಲು ಮುಂದೆ ಬರುತ್ತಿದ್ದಾರೆ.

2013-14ನೇ ಸಾಲಿನಲ್ಲಿ 51,354 ಜನರು ನೇತ್ರದಾನ ಮಾಡಿದ್ದರೂ, ಶೇ 50ರಷ್ಟು ನೇತ್ರವು ಸಂಗ್ರಹ ಮಾಡುವಲ್ಲಿ ವಿಳಂಬ ಆಗು ಸೋಂಕಿನಿಂದಾಗಿ ಬಳಕೆಯಾಗಲಿಲ್ಲ. ಮೊಬೈಲ್ ವ್ಯಾನ್ ಜಾಗೃತಿ ಅಭಿಯಾನವು ನೇತ್ರದಾನಿಗಳಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
|

Agarwal’ s Eye Hospital

ಇಂದಿರಾನಗರದ ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯ ಡಾ.ರಾಜೇಶ್ : ಕಂಪ್ಯೂಟರ್ ಎದುರು ಹೆಚ್ಚಿನ ಸಮಯ ಕೆಲಸ ಮಾಡುವುದರಿಂದ ನಗರ ಪ್ರದೇಶದಲ್ಲಿ ಸಾಕಷ್ಟು ದೃಷ್ಟಿದೋಷ ಸಮಸ್ಯೆಗಳು ಕಂಡುಬರುತ್ತಿವೆ.

ಇದರ ಪರಿಣಾಮ ರೋಗಿಗಳು ಕನ್ನಡಕಗಳ ಮೊರೆ ಹೋಗಬೇಕಾಗಿದೆ. ಸ್ಮೈಲ್-ಸ್ಮಾಲ್ ಇನ್‍ಸಿಷನ್ ಲೆಂಟಿಕ್ಯುಲ್ ಎಕ್ಸಟ್ರಾಕ್ಷನ್ ಪ್ರೊಸಿಡ್ಯೂರ್ ಎಂಉದು ನಾಲ್ಕನೇ ಪೀಳಿಗೆಯ ಲೇಸರ್ ಪ್ರಕ್ರಿಯೆಯಾಗಿದ್ದು, ಮಯೊಪಿಕ್ ದೃಷ್ಟಿದೋಷವನ್ನು-10ಡಿಎಸ್ ವರೆಗೂ ಗುರುತಿಸಿ ಸರಿಪಡಿಸಲಿದೆ. ಸ್ಮೈಲ್ ಪ್ರಕ್ರಿಯೆಯಲ್ಲಿ ನೋವುರಹಿತ ಶಸ್ತ್ರಚಿಕಿತ್ಸೆ ನೆರವೇರಿಸಲು ಅವಕಾಶವಿದೆ. ಅರ್ಹ ಎಲ್ಲ ವಯೋಮಾನದವರಿಗೆ ಚಿಕಿತ್ಸೆ ನಿಡಲು ಅವಕಾಶವಿದೆ. ಮುಖ್ಯವಾಗಿ ರೋಗಿಯು ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ.

'3275, 12ನೇ ಮುಖ್ಯರಸ್ತೆ, ಎಚ್‍ಎಎಲ್ 2ನೇ ಹಂತ' ವಿಳಾಸದಲ್ಲಿ ಸ್ಥಾಪನೆಯಾಗಿರುವ ಆಸ್ಪತ್ರೆಯು ಒಟ್ಟು 6,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿದ್ದು, ಅರ್ಹ, ಪರಿಣಿತ ನೇತ್ರತಜ್ಞರು ಇದ್ದಾರೆ. ಅತ್ಯಾದುನಿಕ ತಂತಜ್ಞಾನವನ್ನು ಬಳಕೆ ಆಡಲಾಗುತ್ತದೆ. ಆಸ್ಪತ್ರೆಯಲ್ಲಿ ಆಧುನಿಕವಾದ ಅಪರೇಷನ್ ಥಿಯೇಟರ್, ಕ್ಯಾಟರಾಕ್ಟ್, ರೆಟಿನಾ ಆಪರೇಷನ್ ಥಿಯೇಟರ್ ಕೂಡಾ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dr. Agarwal' s Eye Hospital launched its latest myopic refractive error correction procedure- SMILE (Small Incision Lenticule Extraction) and the state-of-the art centre at Indira Nagar.
Please Wait while comments are loading...