ಬೆಂಗಳೂರು : ಸೊಸೆಯಿಂದ ಅತ್ತೆ, ಮಾವನ ಕೊಲೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 05 : ಪ್ರಿಯಕರನ ಜೊತೆ ಸೇರಿ ಸೊಸೆ ಅತ್ತೆ ಮತ್ತು ಮಾವನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸೊಸೆಯನ್ನು ಬಂಧಿಸಲಾಗಿದೆ.

ಕಾಡುಗೋಡಿ ಸಮೀಪದ ಎಕೆಜೆ ಕಾಲೋನಿಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಕೊಲೆಯಾದವರನ್ನು ಕಣ್ಣನ್ (70), ಮನೋರಮಾ (65) ಎಂದು ಗುರುತಿಸಲಾಗಿದೆ. ಎಕೆಜೆ ಕಾಲೋನಿಯ ನಿವಾಸಿ ಮಣಿಕಂಠನ್ ಪತ್ನಿ ದುರ್ಗಾ (28) ಪ್ರಿಯಕರ ಆಂಜಿ ಜೊತೆ ಸೇರಿ ಅತ್ತೆ ಮತ್ತು ಮಾವನ ಕೊಲೆ ಮಾಡಿದ್ದಾಳೆ. [ಕಲಬುರ್ಗಿ ಹತ್ಯೆ ಕೇಸ್ : ಸಿಐಡಿ ವರದಿಯಲ್ಲೇನಿದೆ?]

murder

ದುರ್ಗಾ ಆಂಜಿ ಎಂಬುವವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ. ಸೋಮವಾರ ರಾತ್ರಿ ಮಣಿಕಂಠನ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆಂಜಿ ಮನೆಗೆ ಬಂದಿದ್ದ. ಇದನ್ನು ಕಣ್ಣನ್ ಮತ್ತು ಮನೋರಮಾ ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ದುರ್ಗಾ ಮತ್ತು ಆಂಜಿ ಸುತ್ತಿಗೆ, ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. [ಮುಂಬೈ ಜೋಡಿ ಕೊಲೆ: ವಾರಣಾಸಿಯಲ್ಲಿ ಸಿಕ್ಕ ಸಾಧು, ಕೊಲೆ ಪಾತಕ!]

ಕೆಲವು ಸಮಯದ ಬಳಿಕ ಮನೆಗೆ ಆಗಮಿಸಿದ ಮಣಿಕಂಠನ್ ಮೇಲೆಯೂ ಇಬ್ಬರು ಹಲ್ಲೆ ಮಾಡಿದ್ದಾರೆ. ಅವರಿಂದ ತಪ್ಪಿಸಿಕೊಂಡು ಹೋದ ಆತ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಗಾಯಗೊಂಡಿರುವ ಮಣಿಕಂಠನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ದುರ್ಗಾ ಮತ್ತು ಆಂಜಿಯನ್ನು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a shocking incident women brutally murdered her father and mother-in-law at Kadugodi, Bengaluru on Monday, January 4th night. Kadugodi police visited the spot.
Please Wait while comments are loading...