ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್‌ ಸಮಸ್ಯೆ ರಸ್ತೆಯಲ್ಲಿಲ್ಲ, ನಮ್ಮಲ್ಲೇ ಇದೆ! ಪರಿಹಾರವೇನು?

By Nayana
|
Google Oneindia Kannada News

ಬೆಂಗಳೂರು, ಜು.7: ಬೆಂಗಳೂರಿನ ಟ್ರಾಫಿಕ್‌ ಎಂದರೆ ಅದೊಂದು ಸಮುದ್ರವೇ ಸರಿ ಎಷ್ಟೊಂದು ಏರಿಳಿತಗಳು , ಎಷ್ಟೊಂದು ಗಂಡಾಂತರಗಳು, ಎಷ್ಟೊಂದು ಹರಿದಾಟಗಳು ಹೀಗೆ ಬೆಂಗಳೂರಿಗರನ್ನು ಟ್ರಾಫಿಕ್‌ ಅರ್ಧ ಆಯಸ್ಸು ಕಸಿದುಬಿಡುತ್ತದೆ.

ಒಂದೂ ಕಾಲು ಕೋಟಿ ಜನ ಮುಕ್ಕಾಲು ಕೋಟಿ ವಾಹನಗಳು ನಿತ್ಯ ಬೆಂಗಳೂರಿನ ರಸ್ತೆಗಳಲ್ಲಿ ಸೆಣೆಸಬೇಕು. ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳಿಗಾದರೂ ಯಾರು ಕಾರಣ ಎಂದು ಹುಡುಕಹೊರಟರೆ ಅದಕ್ಕೆ ನಾವೇ ಕಾರಣ ಎಂಬುದು ಮಾತ್ರ ಸುಸ್ಪಷ್ಟ.

ಈ ಕುರಿತಂತೆ ಸಾಮಾಜಿಕ ಜಾಲತಾಣ ಯೂಟ್ಯೂಬ್‌ನಲ್ಲಿ ಕಳೆದೆರೆಡು ವರ್ಷಗಳಿಂದ ಎ ಥರ್ಡ್‌ ಐ ಡ್ಯೂಡ್‌ ಎಂಬ ಖಾತೆಯಲ್ಲಿ ಬೆಂಗಳೂರಿನ ಟ್ರಾಫಿಕ್‌ನ ಸಮಸ್ಯೆಯ ಹಲವಾರು ಮಗ್ಗಲುಗಳನ್ನು ವಿಡಿಯೋ ಸಹಿತ ಜನತೆಗೆ ತಿಳಿ ಹೇಳಿ ಅಪಘಾತ ನಿಯಂತ್ರಿಸಲು ಸಂಚಾರಿ ನಿಯಮಗಳನ್ನು ಪಾಲಿಸಲು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.

ಸಂಚಾರ ಸೂಚನಾ ಫಲಕಗಳಿಗೆ ಅಡ್ಡವಾಗಿದ್ದ ಫ್ಲೆಕ್ಸ್‌ಗಳ ತೆರವುಸಂಚಾರ ಸೂಚನಾ ಫಲಕಗಳಿಗೆ ಅಡ್ಡವಾಗಿದ್ದ ಫ್ಲೆಕ್ಸ್‌ಗಳ ತೆರವು

ಮನೆಯಿಂದ ಹೊರಡುವಾಗ ನಮ್ಮ ವಾಹನ ಯಾವ ದಿಕ್ಕಿನಲ್ಲಿ ಚಲಿಸಬೇಕು ಎಂಬುದಕ್ಕಿಂತ ನಮಗೆ ಯಾವುದು ಸಮೀಪ ಎಂಬ ಕಾರಣದಿಂದ ಸಂಚಾರಿ ನಿಯಮಮಗಳನ್ನು ಉಲ್ಲಂಘಿಸುತ್ತಲೇ ನಾವು ಸಂಚಾರವನ್ನು ಆರಂಭಿಸುತ್ತೇವೆ. ಬೆಂಗಳೂರಿಗರು ಬೆಳಬೆಳಗ್ಗೆಯೇ ಫುಟ್‌ಪಾತ್‌ಗಳಲ್ಲಿ ಪೇವ್‌ಮೆಂಟ್‌ಗಳ ಮೇಲೆ ಅಥವಾ ನೋ ಪಾರ್ಕಿಂಗ್‌ ಜಾಗದಲ್ಲಿ ಅಥವಾ ವಾಹನಗಳ ಪಾರ್ಕಿಂಗ್‌ ಸ್ಥಳದ ಮೂಲಕ ವಾಹನಗಳನ್ನು ಓಡಿಸಲು ಆರಂಭಿಸುತ್ತೇವೆ.

 ನಿಯಮ ಉಲ್ಲಂಘನೆ ಬೆಳಗ್ಗೆಯಿಂದಲೇ ಆರಂಭ

ನಿಯಮ ಉಲ್ಲಂಘನೆ ಬೆಳಗ್ಗೆಯಿಂದಲೇ ಆರಂಭ

ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಬೆಳಗ್ಗೆಯಿಂದಲೇ ನಾವು ಕಚೇರಿ ಅಥವಾ ಉದ್ಯೋಗಕ್ಕೆ ಹೊರಟ ಸಮಯದಿಂದಲೇ ಆರಂಭವಾಗುತ್ತದೆ. ಮನೆಯಿಂದ ಹೊರಟಿದ್ದು ಎರಡು ನಿಮಿಷ ತಡವಾಗಿ ಎನ್ನುವ ಕಾರಣಕ್ಕೆ ಅಡ್ಡಾದಿಡ್ಡಿಯಾಗಿ ಬೈಕ್‌ ಅಥವಾ ಕಾರುಗಳನ್ನು ಓಡಿಸುತ್ತೇವೆ. ನಮ್ಮ ಮೊದಲ ಉಲ್ಲಂಘನೆಯಾಗುವುದೇ ಮನೆಯಿಂದ ಹೊರಬೀಳುವಾಗ.

 ಸಿಗ್ನಲ್‌ ಇರುವುದು ಯಾರಿಗಾಗಿ, ವಾಹನ ಓಡಿಸುವ ನಿಮಗಾಗಿ

ಸಿಗ್ನಲ್‌ ಇರುವುದು ಯಾರಿಗಾಗಿ, ವಾಹನ ಓಡಿಸುವ ನಿಮಗಾಗಿ

ಬೆಂಗಳೂರಿನ ರಸ್ತೆಗಳಿಗಿಳಿದರೆ ಹೆಜ್ಜೆಗೊಂದೊಂದು ಸಿಗ್ನಲ್‌ ಇರುವುದು ಅನಿವಾರ್ಯ, ಆ ಸಿಗ್ನಲ್‌ ಇರುವುದಾದರೂ ಏತಕ್ಕೆ, ರಸ್ತೆಯಲ್ಲಿ ಸಂಚರಿಸುವ ನಮ್ಮ ಸುರಕ್ಷತೆಗಾಗಿಯೇ ಇರುವುದೆಂದು ಮರೆತು ನಮಗೆ ಅಡ್ಡಿಯಾಗಿ ಸಿಗ್ನಲ್‌ ಬರುತ್ತಿದೆ ಎಂಬಂತೆ ಭಾವಿಸುತ್ತೇವೆ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘಟನೆಯಾಗುವುದು ಸಿಗ್ನಲ್‌ಗಳಲ್ಲಿ.

 ಫುಟ್‌ಪಾತ್ ಮತ್ತು ಪೇವ್‌ಮೆಂಟ್‌ಗಳು ನಮಗಲ್ಲ

ಫುಟ್‌ಪಾತ್ ಮತ್ತು ಪೇವ್‌ಮೆಂಟ್‌ಗಳು ನಮಗಲ್ಲ

ನಗರದ ಟ್ರಾಫಿಕ್‌ನಲ್ಲಿ ರಸ್ತೆಗಳು ಸಾಕಾಗುತ್ತಿಲ್ಲ, ರಸ್ತೆಗಳಿಗೆ ಹೊಂದಿಕೊಂಡಿರುವ ಫುಟ್‌ಪಾತ್ ಮತ್ತು ಪೇವ್‌ಮೆಂಟ್‌ಗಳ ಮೇಲೆ ದ್ವಿಚಕ್ರ ವಾಹನ ಸವಾರರು ಮನಬಂದಂತೆ ಓಡಿಸಿ ಇತರರಿಗೂ ತೊಂದರೆ ಉಂಟು ಮಾಡುವುದು ಸರ್ವೇ ಸಾಮಾನ್ಯ, ಬೆಂಗಳೂರಿನಲ್ಲಿರುವ ಒಂದು ಲಕ್ಷ ಕಿಲೋಮೀಟರ್‌ ಒಳ ರಸ್ತೆಗಳ ವ್ಯಾಪ್ತಿಯಲ್ಲಿ ಸರಿಸುಮಾರು 70 ಸಾವಿರ ಕಿಲೋಮೀಟರ್‌ನಷ್ಟು ಫುಟ್‌ಪಾತ್‌ಗಳು, ಪೇವ್‌ಮೆಂಟ್‌ಗಳಿವೆ.

 ರಾತ್ರಿ ವಾಹನ ಚಾಲಕರಿಗೆ ನಿಯಮ ಉಲ್ಲಂಘನೆ ಹೊತ್ತು

ರಾತ್ರಿ ವಾಹನ ಚಾಲಕರಿಗೆ ನಿಯಮ ಉಲ್ಲಂಘನೆ ಹೊತ್ತು

ಬೆಂಗಳೂರಿನಲ್ಲಿ ಟ್ರಾಫಿಕ್‌ ಉಲ್ಲಂಘನೆ ಹಗಲಿಗಿಂತಲೂ ರಾತ್ರಿಯೇ ಹೆಚ್ಚು ಸಂಭವಿಸುತ್ತದೆ. ಹೀಗಾಗಿ ಅಪಘಾತಗಳು ಕೂಡ ರಾತ್ರಿ ವೇಳೆ ಹೆಚ್ಚುತ್ತಿದೆ. ಬಹುಮುಖ್ಯವಾಗಿ ರಾತ್ರಿ ವೇಳೆ ಜನ ಸಂಚಾರ ಹಾಹನ ಸಂಚಾರ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ವಿಪರೀತ ವೇಗದಲ್ಲಿ ಹೋಗುತ್ತೇವೆ ಅಲ್ಲದೆ, ಟ್ರಾಫಿಕ್‌ ಸಿಗ್ನಲ್‌ ತೋರಿಸುವ ಹಳದಿ ದೀಪವು ನಮಗೆ ಎಚ್ಚರಿಕೆ ಗಂಟೆ ಅಲ್ಲವೇ ಅಲ್ಲ ಎಂದು ಭಾವಿಸುತ್ತೇವೆ. ಆದರೆ ಕೆಂಪು ದೀಪದಂತೆ ಹಳದಿ ದೀಪ ಕೂಡ ನಮ್ಮನ್ನು ಎಚ್ಚರಿಸುವ ಗಂಟೆಯೇ ಆಗಿರುತ್ತದೆ.

English summary
Bengaluru is notorious for traffic jam. Every one can blame authorities and easily escape from our responsibilities. But do you know how we only reasoning for the problem violating traffic rules by many ways. Here is the story about.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X