ಗೂಗಲ್ 2016: ಡೊನಾಲ್ಡ್ ಟ್ರಂಪ್ ಬಗ್ಗೆ ಭಾರತೀಯರಿಂದ ಹೆಚ್ಚು ಸರ್ಚ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 23: ಪ್ರತಿ ವರ್ಷದಂತೆ ಈ ವರ್ಷ ಕೂಡಾ ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ತನ್ನ ಟಾಪ್ 10 ಪಟ್ಟಿಯನ್ನು ಪ್ರಕಟಿಸಿದೆ. ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪೈಕಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂ.1ಸ್ಥಾನ ಪಡೆದುಕೊಂಡಿದ್ದಾರೆ.

ವ್ಯಕ್ತಿ, ಸ್ಥಳ, ವಸ್ತು ಹಾಗೂ ವಿಷಯಾಧಾರಿತ ಸರ್ಚ್ ಮೇಲೆ ಈ ಫಲಿತಾಂಶ ನೀಡಲಾಗಿದೆ. ಜನವರಿಯಿಂದ ನವೆಂಬರ್ ತನಕ ತಿಂಗಳ ಆಧಾರ ಮೇಲೆ ಯಾವ ವಿಷಯ ಹೆಚ್ಚು ಸರ್ಚ್ ಆಗಿದೆ ಎಂಬುದನ್ನು ತಿಳಿಯಬಹುದು. ಸುದ್ದಿ ಸಮಾಚಾರವಲ್ಲದೆ ಬಾಲಿವುಡ್ ನಟ, ನಟಿಯರ ಪೈಕಿ ಯಾರನ್ನು ಹೆಚ್ಚು ಹುಡುಕಲಾಗಿದೆ ಎಂಬುದು ಗೊತ್ತಾಗಿದೆ.

Donald Trump tops the Google India Top Search 2016 People Personality

ವ್ಯಕ್ತಿಗಳ ಪೈಕಿ ಡೊನಾಲ್ಡ್ ಟ್ರಂಪ್ ಅವರು ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಭಾರತದ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಇದ್ದಾರೆ. ಮಿಕ್ಕಂತೆ ನೋಟಿನ ಮೇಲೆ ಹೆಸರು ಕಂಡ ಸೋನಮ್ ಗುಪ್ತ, ಜಿಮ್ನಾಸ್ಟ್ ದೀಪಾ ಕರ್ಮಾಕರ್, ಧೋನಿ ಚಿತ್ರದ ದಿಶಾ ಪಟಾಣಿ ಟಾಪ್ 5 ಸ್ಥಾನದಲ್ಲಿದ್ದಾರೆ. ಮಿಕ್ಕಂತೆ ಯಾರು ಟಾಪ್ 10ನಲ್ಲಿದ್ದಾರೆ ಮುಂದೆ ನೋಡಿ

6ನೇ ಸ್ಥಾನದಲ್ಲಿ ದರ್ಶನ್ ತೂಗುದೀಪ ಜತೆ ನಟಿಸಿದ್ದ ನಟಿ ಊರ್ವಶಿ ರೌಟೆಲಾ, ನಂತರ ಉದ್ಯಮಿ ವಿಜಯ್ ಮಲ್ಯ, ಪೂಜಾ ಹೆಗ್ಡೆ, ಕುಸ್ತಿಪಟು ಸಾಕ್ಷಿ ಮಲಿಕ್ ಹಾಗೂ 10ನೇ ಸ್ಥಾನದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಇದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Donald Trump tops the Google India Top Search 2016 People Personality category.
Please Wait while comments are loading...