ಬೆಂಗಳೂರಿನಲ್ಲಿ ಮುರುಘಾಶ್ರೀಗಳ ಅರ್ಥಪೂರ್ಣ ನಾಗರಪಂಚಮಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 27: ನಾಗರ ಪಂಚಮಿಯಂದು ಹುತ್ತಕ್ಕೆ ಹಾಲು ಎರೆಯುವ ಬದಲು ಅದೇ ಹಾಲನ್ನು ಮಕ್ಕಳಿಗೆ, ರೋಗಿಗಳಿಗೆ ನೀಡಿದರೆ ಅದೇ ಸಾರ್ಥಕವಾದ ಪೂಜೆ ಎಂದು ಮುರುಘಾ ಶರಣರು ಅಭಿಪ್ರಾಯಪಟ್ಟರು.

ಲಿಂಗಾಯತ ಧರ್ಮ: 'ಒನ್ ಇಂಡಿಯಾ'ಕ್ಕೆ ಮುರುಘಾ ಶರಣರ ವಿಶೇಷ ಸಂದರ್ಶನ

ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು, ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

Don't pour milk on idols on Nagarapanchami, give it to patients or children: Murugha Shree

ನಮ್ಮಲ್ಲಿ ತಲತಲಾಂತರಗಳಿಂದಲೂ ನಾಗರ ಪಂಚಮಿಯಂದು ಹುತ್ತಕ್ಕೆ, ನಾಗರ ಕಟ್ಟೆಗಳಿಗೆ ಹಾಲೆರೆಯುವ ಪದ್ಧತಿಯಿದೆ. ಅಸಲಿಗೆ ಹುತ್ತದಲ್ಲಿರುವ ಹಾವು ಹಾಲು ಕುಡಿಯುವುದಿಲ್ಲ. ಇನ್ನು, ನಾಗರ ಕಟ್ಟೆಗೆ ಸುರಿವ ಹಾಲು ಚರಂಡಿ ಹೋಗುತ್ತದೆ. ಇದು ಮೌಢ್ಯ.

Don't pour milk on idols on Nagarapanchami, give it to patients or children: Murugha Shree

ಹಾಗೆ, ವ್ಯರ್ಥಗೊಳಿಸುವ ಹಾಲನ್ನು ಮಕ್ಕಳಿಗೆ, ರೋಗಿಗಳಿಗೆ ಅಥವಾ ಹಾಲಿನ ಅವಶ್ಯಕತೆಯಿರುವ ದುರ್ಬಲರಿಗೆ ಕೊಟ್ಟರೆ ಅವರಿಗೆ ಅದು ಅನುಕೂಲವಾಗುತ್ತದೆ. ನಾಗರ ಪಂಚಮಿ ಆಚರಣೆಯನ್ನು ಅರ್ಥಗರ್ಭಿತವಾಗಿಸಿದಂತಾಗುತ್ತದೆ.

ನಾಗರ ಪಂಚಮಿ ವೈಶಿಷ್ಟ್ಯ: ತಿಳಿಯಬೇಕಾದ 6 ಸಂಗತಿ

ನಾನು ಕಳೆದ 15 ವರ್ಷಗಳಿಂದಲೂ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನಾಗರ ಪಂಚಮಿಯಂದು ಹಾಲು, ಹಣ್ಣು ವಿತರಿಸುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ ಎಂದು ಶರಣರು ತಿಳಿಸಿದರು.

Don't pour milk on idols on Nagarapanchami, give it to patients or children: Murugha Shree

ಆಸ್ಪತ್ರೆಯಲ್ಲಿ ಹೀಗೆ ರೋಗಿಗಳಿಗೆ, ಮಕ್ಕಳಿಗೆ ಹಾಲು ವಿತರಿಸಿ ಶತಮಾನಗಳ ಮೌಢ್ಯತೆಯಿಂದ ಹೊರಬರಬೇಕು ಎಂದು ಶರಣರು ಇದೇ ವೇಳೆ ಕರೆ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rather than pouring milk upon idols, that milk should be distributed to those who really need it. They only the celebration of Nagara Panchami becomes meaningfull says Shivamurthi Murugha Sharana of Chitradurga.
Please Wait while comments are loading...