ಯಾತ್ರೆಯೇ ತಂತ್ರವಲ್ಲ, ನಮ್ಮದು ರಣತಂತ್ರ ಬೇರೆ ಇದೆ: ಪರಮೇಶ್ವರ್

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 1 : ಬಿಜೆಪಿಯವರು ಯಾತ್ರೆ ಮಾಡಿದಾಕ್ಷಣ ನಾವೇಕೆ ಮಾಡಬೇಕು ಎಂದು 2018 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಯಾತ್ರೆ ಬಗ್ಗೆ ಇರುವ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದಾರೆ.

ಛೇ..ಛೇ... ಸಿಎಂ, ನನ್ನ ನಡುವೆ ಭಿನ್ನಾಭಿಪ್ರಾಯವಿಲ್ಲ: ಪರಂ

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಯಾವುದೇ ರೀತಿಯ ಗೊಂದಲವಿಲ್ಲ ಬಿಜೆಪಿಯವರು ಯಾತ್ರೆ ಮಾಡಿದರೆ ನಾವೇಕೆ ಮಾಡಬೇಕು ಎಂದಿದ್ದಾರೆ. ಯಾತ್ರೆ ಮಾಡಿದಾಕ್ಷಣ ಚುನಾವಣೆ ತಯಾರಿ ಅಂತ ಏನಿಲ್ಲ. ನಮಗೆ ನಮ್ಮದೇ ಆದ ರಣತಂತ್ರವಿದೆ.

Don't know Ramya contesting or not: KPCC Prez

ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ನಾವು ಯಾರನ್ನೂ ಹಿಂಬಾಲಿಸುವುದಿಲ್ಲ. ಸಿದ್ದರಾಮಯ್ಯ ನಾವೆಲ್ಲರೂ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಮಾಜಿ ಸಂಸದೆ ರಮ್ಯಾ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಎಲ್ಲಿಯೂ ಹೇಳಿಲ್ಲ. ನಾವು ಕೂಡ ಎಲ್ಲೂ ಹೇಳಿಲ್ಲ. ರಮ್ಯಾ ಯಾರ ಸಂಪರ್ಕದಲ್ಲಿದ್ದಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ ನಾನು ಅವರ ಹುಟ್ಟುಹಬ್ಬದ ದಿನ ಕರೆ ಮಾಡಿ ಶುಭಾಶಯ ತಿಳಿಸಿದ್ದೇನೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KPCC President Dr. G Parmeshwar clarified that he does not know that whether former MP and film actress Ramya contesting for upcoming assembly election or not.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ