ಪುರುಷತ್ವ ಹರಣ ಮಾಡುವ ಕಾಯಿಲೆ ಪ್ರಾಣಿಗಳನ್ನ ಕೊಲ್ಲಲ್ಲ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 9: ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ರುಸೆಲ್ಲೋಸಿಸ್ ಪ್ರಾಣ ತೆಗೆಯುವಂಥ ರೋಗ ಅಲ್ಲ, ರೋಗಪೀಡಿತ ಜಾನುವಾರುಗಳನ್ನು ಕೊಲ್ಲಬೇಡಿ ಎಂದು ಪಶುಸಂಗೋಪನಾ ಸಚಿವ ಎ.ಮಂಜು ಹೇಳಿದ್ದಾರೆ.

'ಈ ಬಗ್ಗೆ ಸಾರ್ವಜನಿಕರು ಗಾಬರಿಯಾಗಬೇಡಿ. ಕಾಯಿಲೆ ಬಂದಿರುವ ಜಾನುವಾರುಗಳ ಹಾಲನ್ನೋ, ಹಾಲಿನ ಇತರ ಪ್ರಾಡಕ್ಟ್ ಗಳನ್ನೋ ಸೇವಿಸುವುದರಿಂದ ಯಾವುದೇ ತೊಂದರೆ ಇಲ್ಲ' ಎಂದು ಅವರು ಹೇಳಿದ್ದಾರೆ.['ಪುರುಷ' ಶಕ್ತಿ ಕೊಲ್ಲುವ ಬ್ರೂಸೆಲ್ಲೋಸಿಸ್ ಕೋಲಾರಕ್ಕೆ ಬಂತು]

Don't kill brucellosis affected cows: Minister A.Manju

ಕೋಲಾರದ ಶಾಸಕ ವರ್ತೂರ್ ಪ್ರಕಾಶ ಅವರ ಫಾರಂನಲ್ಲಿ ಇದ್ದ ರೋಗಾಣು ಸೋಂಕಿತ ಹಸುಗಳದೂ ಸೇರಿದ ಹಾಗೆ ರಾಜ್ಯದ ಬೇರೆ ಕಡೆಯ ರೋಗಪೀಡಿತ ಹಸುಗಳ ರಕ್ತದ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದೀವಿ. ಒಂದು ವಿಚಾರ ಏನೆಂದರೆ ಇತರ ಆರೋಗ್ಯವಂತ ಜಾನುವಾರುಗಳಿಂದ ದೂರ ಇಟ್ಟು, ಚಿಕಿತ್ಸೆ ಕೊಟ್ಟರೆ ಸಾಕು ಎಂದು ಸಚಿವರು ಹೇಳಿದ್ದಾರೆ.

ಕಾಯಿಲೆ ಬಗ್ಗೆ ರೈತರು ಹುಷಾರಾಗಿರಬೇಕು. ಕರುಗಳನ್ನು ಹಾಕಿದ ಬಳಿಕ ಬರುವ ಸಾಮಾನ್ಯ ಕಾಯಿಲೆ ಇದು. ರೋಗಪೀಡಿತ ಹಸುಗಳನ್ನ ದಯಾ ಮರಣ ಬೇಕಾಗಿಲ್ಲ. ಈ ಬಗ್ಗೆ ಅಪಪ್ರಚಾರ ನಡೀತಾ ಇದೆ. ಕುರಿಗಳು ಬ್ರುಸೆಲ್ಲಾ ಸೋಂಕಿಗೆ ಗುರಿಯಾದರೆ, ಅದರ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬಹುದು. ಇಲ್ಲದಿದ್ದರೆ ಮನುಷ್ಯರಿಗೂ ಕಾಯಿಲೆ ಹರಡುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Don't kill brucellosis affected cows, said by minister A.Manju in Bangalore. Blood samples of brucellosis affected cows blood samples sent for test, need not to panic, he added in press meet.
Please Wait while comments are loading...