ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೊಮ್ಮಲೂರು ಬಿಡಿಎ ಕಾಂಪ್ಲೆಕ್ಸ್‌ ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 01: ವರ್ಷಗಳಿಂದ ನೀರನ್ನೇ ಕಾಣದ ಶೌಚಾಲಯ, ಆ ಗಬ್ಬು ಶೌಚಾಲಯಕ್ಕೆ ಬಾಗಿಲುಗಳೂ ಇಲ್ಲ, ಶೌಚಾಲಯಕ್ಕೆ ಹೋಗುವ ದಾರಿಯಲ್ಲಿ ಬೆಳೆದ ಕಳೆ ಗಿಡಗಳು ಇದು ಯಾವುದೋ ಹಳೆ ಕಟ್ಟಡದ ವರ್ಷಣೆಯಲ್ಲ. ದೊಮ್ಮಲೂರು ಬಿಡಿಎ ಕಾಂಪ್ಲೆಕ್ಸ್‌ನ ಸ್ಥಿತಿ.

ದೊಮ್ಮಲೂರಿನ ಬಿಡಿಎ ಕಾಂಪ್ಲೆಕ್ಸ್‌ನ ಶೌಚಾಲಯ ಅತಿಧಾರುಣ ಸ್ಥಿತಿಯಲ್ಲಿದೆ. ಮೂಗು ಮುಚ್ಚಿಕೊಂಡೂ ಒಳ ಹೋಗಲು ಅಸಾಧ್ಯವಾದ ಪರಿಸ್ಥಿತಿ. ಹಾಳು ಸುರಿದಿರುವ ಈ ಕಟ್ಟಡಕ್ಕೆ ಕಾವಲುಗಾರರೂ ಯಾರೂ ಇಲ್ಲ.

ಸರಕಾರ, ಬಿಡಿಎ ಸೇರಿಕೊಂಡು ಬೆಂಗ್ಳೂರನ್ನು ಹಾಳು ಮಾಡ್ತಿವೆ: ಸುಪ್ರೀಂಸರಕಾರ, ಬಿಡಿಎ ಸೇರಿಕೊಂಡು ಬೆಂಗ್ಳೂರನ್ನು ಹಾಳು ಮಾಡ್ತಿವೆ: ಸುಪ್ರೀಂ

ಈ ಬಾಗಿಲಿಲ್ಲದ ಶೌಚಾಲಯವನ್ನೇ ಮಹಿಳೆಯರು ಬಳಸಬಹುದಾದ ಪರಿಸ್ಥಿತಿ ಇಲ್ಲಿದೆ. ಬೆಂಗಳೂರನ್ನು ಅಭಿವೃದ್ಧಿ ಮಾಡಲೆಂದು ಸ್ಥಾಪಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಟ್ಟಡದಲ್ಲಿಯೇ ಈ ಗತಿಯಾದರೆ ಇವರು ಬೆಂಗಳೂರನ್ನು ಉದ್ಧಾರ ಮಾಡುವುದಾದರೂ ಹೇಗೆ?

Domlur BDA complex is in worst situation, toilets has no doors

'ಒನ್‌ಇಂಡಿಯಾ ಕನ್ನಡ' ಓದುಗರೊಬ್ಬರು ಈ ವಿಷಯವನ್ನು ನಮ್ಮ ಸುದ್ದಿಮನೆಗೆ ತಲುಪಿಸಿದ್ದಾರೆ. 'ಅಧಿಕಾರ ಕುರ್ಚಿ ಉಳಿಸುವುದೆ ಅವರ ದೊಡ್ಡ ಸಾಧನೆ ಯಾವ ರಾಜಕೀಯ ಪಕ್ಷಗಳು ಅವರ ಸ್ವಾರ್ಥ ಬಿಟ್ಟು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕೊಡುವ ಪದ್ಧತಿ ಇಲ್ಲ' ಎಂದು ಆಕ್ರೋಶವನ್ನೂ ಹೊರಹಾಕಿದ್ದಾರೆ.

ಬಿಡಿಎ ಅಧ್ಯಕ್ಷರಾದ ಪರಮೇಶ್ವರ, ಸಿದ್ದರಾಮಯ್ಯಗೆ ಹಿನ್ನಡೆ!ಬಿಡಿಎ ಅಧ್ಯಕ್ಷರಾದ ಪರಮೇಶ್ವರ, ಸಿದ್ದರಾಮಯ್ಯಗೆ ಹಿನ್ನಡೆ!

ತನ್ನನ್ನು ತಾನು ಬೆಂಗಳೂರಿನ ಉದ್ದಾರಕ ಎಂದು ಕರೆದುಕೊಳ್ಳುವ ಬಿಡಿಎ ತನ್ನದೇ ಕಾಂಪ್ಲೆಕ್ಸ್‌ ಬಗ್ಗೆ ಗಮನಿಸಿಲ್ಲ. ಇನ್ನಾದರೂ ಬಿಡಿಎ ಕಣ್ಣು ತೆರೆದುಕೊಳ್ಳಲಿ. ಸಾರ್ವಜನಿಕರ ಆಕ್ರೋಶ ಕಟ್ಟೆ ಒಡೆಯುವ ಮುನ್ನಾ ಎಚ್ಚೆತ್ತುಕೊಳ್ಳಲಿ ಎಂಬುದೇ ನಮ್ಮ ಆಶಯ.

English summary
Domlur BDA complex has worst maintenance. Toilet does not have doors. Toilets are very dirty that no one can go in there to use them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X