ಹಣ ವಾಹನ ಅಪಹರಿಸಿದ್ದ ಡೊಮಿನಿಕ್ ರಾಯ್ ಬಂಧನ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 29: ಹಣದ ವಾಹನವನ್ನು ಅಪಹರಿಸಿದ್ದ ಚಾಲಕ ಡೊಮಿನಿಕ್ ರಾಯ್ ನನ್ನು ಕೆ.ಆರ್.ಪುರಂ ಟಿನ್ ಫ್ಯಾಕ್ಟರಿ ಬಳಿ ಸೋಮವಾರ ರಾತ್ರಿ ಬಂಧಿಸಲಾಗಿದೆ. ಬಾಣಸವಾಡಿಯ ಮನೆಯೊಂದರಲ್ಲಿ ಆತನ ಹೆಂಡತಿ ಎಲ್ವಿನ್ ಮೇರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಆದರೆ ಆಕೆಯೇ ಶರಣಾಗಿದ್ದಳು ಎಂದು ಮೂಲಗಳು ತಿಳಿಸಿದ್ದವು.

ಹೆಂಡತಿಯು ಪೊಲೀಸರ ವಶದಲ್ಲಿದ್ದಾಳೆ ಎಂಬ ಸುದ್ದಿ ತಿಳಿದ ಮೇಲೆ ಕೊಯಮತ್ತೂರಿನಿಂದ ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಾಗ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಡೊಮಿನಿಕ್ ರಾಯ್ ಪತ್ನಿ ಎಲ್ವಿನ್ ನಿಂದ 79.08 ಲಕ್ಷ ವಶಪಡಿಸಿಕೊಳ್ಳಲಾಗಿತ್ತು. ಆದರೆ ಬಾಕಿ ಹಣವಾದ ಹನ್ನೆರಡು ಲಕ್ಷ ರುಪಾಯಿ ಡೊಮಿನಿಕ್ ರಾಯ್ ಬಳಿ ಪತ್ತೆಯಾಗಿಲ್ಲ.[ಡಾಮಿನಿಕ್ ಪತ್ನಿ ಪೊಲೀಸರಿಗೆ ಶರಣಾಗತಿ, 79.8 ಲಕ್ಷ ವಶಕ್ಕೆ!]

Dominic Roy

ನವೆಂಬರ್ 23ರಂದು ಚಿಕ್ಕಪೇಟೆ ಬಳಿ 1.37 ಕೋಟಿ ಹಣವಿದ್ದ ವಾಹನ ಅಪಹರಿಸಿದ್ದ ಡೊಮಿನಿಕ್ ರಾಯ್. ಮರು ದಿನ ನಲವತ್ತೈದು ಲಕ್ಷ ಹಣ, ಗನ್ ಹಾಗೂ ವಾಹನ ಮೌಂಟ್ ಕಾರ್ಮಲ್ ಕಾಲೇಜು ಬಳಿ ಪತ್ತೆಯಾಗಿತ್ತು. ಡೊಮಿನಿಕ್, ಆತನ ಪತ್ನಿ ಹಾಗೂ ಮಗು ಪರಾರಿಯಾಗಿದ್ದರು. ಇದೀಗ ಹೆಂಡತಿ ಎಲ್ವಿನ್ ಬಂಧನವಾದ ನಂತರ ಡೊಮಿನಿಕ್ ತಾನಾಗಿಯೇ ಬೆಂಗಳೂರಿಗೆ ಬಂದು, ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dominic roy, van driver who fled away with 92 lakhs recently in Bengaluru arrested by Upparapet police on Monday night.
Please Wait while comments are loading...