ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದಿ ನಾಯಿ ದತ್ತು ಪಡೆವ ಅಭಿಯಾನಕ್ಕೆ ಭಾರೀ ಸ್ಪಂದನೆ

By Prasad
|
Google Oneindia Kannada News

ಬೆಂಗಳೂರು, ಜುಲೈ 11 : ಬೀದಿ ನಾಯಿಗಳೆಂದರೆ ಹಲವರಿಗೆ ತಾತ್ಸಾರ. ಇರಲು ನೆಲೆಯಿಲ್ಲದೆ, ಕಸದ ರಾಶಿ, ಚರಂಡಿ ತೂತಿನಲ್ಲಿ ಮಳೆ ಗಾಳಿ ಚಳಿಯೆನ್ನದೆ, ಸಿಕ್ಕಿದ್ದನ್ನು ತಿಂದು, ಒಂದಕ್ಕೊಂದು ಕಚ್ಚಾಡುತ್ತಾ ಹಗಲು ರಾತ್ರಿಗಳನ್ನು ತಳ್ಳುವ ನಾಯಿಗಳಿಗೂ ಒಂದು ಬದುಕು ಕಲ್ಪಿಸಿಕೊಡಬೇಕು ಎಂದು ಚಿಂತಿಸುವವರು ಕಡಿಮೆಯೆ.

ಇಂಥ ವಾರಸುದಾರರಿಲ್ಲದ ಬೀದಿ ನಾಯಿಗಳಿಗೆ ಒಂದು ನೆಲೆ ಕಲ್ಪಿಸಿಕೊಡಬೇಕು, ಅವುಗಳಿಗೂ ಮಾಲಿಕರ ಪ್ರೀತಿ ದೊರಕುವಂತಾಗಬೇಕು ಎಂಬ ಉದ್ದೇಶದಿಂದ ಟ್ವಿಟ್ಟರಿನಲ್ಲಿ #BengaluruOptsToAdopt ಎಂಬ ವಿನೂತನ ಅಭಿಯಾನವನ್ನು ಶುರು ಮಾಡಿದ್ದು ಡಾಗ್ಸಿ ಚ್ಯೂ ಎಂಬ ಸಾಕುಪ್ರಾಣಿಗಳಿಗಾಗಿ ಅಂಗಡಿಯನ್ನು ತೆರೆದಿರುವ ಬೆಂಗಳೂರು ಮೂಲದ ಕಂಪನಿ.

ಬರೀ ವಿದೇಶಿ ತಳಿಯ ನಾಯಿಯನ್ನು ಏಕೆ ಹುಡುಕುತ್ತೀರಿ? ದೇಶಿ ನಾಯಿಗಳು ಯಾರಿಗಿಂತ ಕಮ್ಮಿ? ಭಾರತೀಯ ನಾಯಿಗಳನ್ನೂ ದತ್ತು ತೆಗೆದುಕೊಂಡು ಅವುಗಳಿಗೂ ಪ್ರೀತಿ ನೀಡಿ ಎಂದು ನೀಡಿದ ಕರೆಗೆ ಭಾರೀ ಪ್ರತಿಸ್ಪಂದನೆ ವ್ಯಕ್ತವಾಗಿದೆ. ಕೇವಲ 5 ಗಂಟೆಗಳಲ್ಲಿ #BengaluruOptsToAdopt ಟ್ವಿಟ್ಟರಲ್ಲಿ ಟ್ರೆಂಡ್ ಆಗಿದ್ದಲ್ಲದೆ, ಹತ್ತು ನಾಯಿಗಳನ್ನು ದತ್ತು ತೆಗೆದುಕೊಂಡ ಮಾಲಿಕರಿಗೆ ಒಪ್ಪಿಸಲಾಯಿತು. [ಬೆಕ್ಕಿನ ಮರಿಗೆ ಹಾಲೂಡಿಸಿ ವಾತ್ಸಲ್ಯ ಮೆರೆದ ಬೀದಿ ನಾಯಿ!]

Dogsee Chew's #BengaluruOptsToAdopt campaign

ಒಂದು ಎನ್‌ಜಿಓ ಅಥವಾ ಸಾಕುಪ್ರಾಣಿಗಳ ಆಹಾರ ಸಂಸ್ಥೆಯೊಂದು ಸಾಮಾಜಿಕ ತಾಣದಲ್ಲಿ ನಡೆಸಿದ ಅತೀದೊಡ್ಡ ಕ್ಯಾಂಪೇನ್ ಇದು ಎಂಬುದು ಅಭಿಯಾನವನ್ನು ಆಯೋಜಿಸಿದ ಡಾಗ್ಸಿ ಚ್ಯೂ ಕಂಪನಿಯ ಅಭಿಪ್ರಾಯ. ಇದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಟ್ವಿಟ್ಟಿಗರು ಭಾಗವಹಿಸಿ, ನಾಯಿಗಳ ಬಗ್ಗೆ ಅನುಕಂಪ ತೋರಿದ್ದಾರೆ. ಅವರಲ್ಲಿ ಶೇ.67ರಷ್ಟು ಪುರುಷರಾದರೆ, ಶೇ.33ರಷ್ಟು ಮಹಿಳೆಯರು ಎಂಬುದು ವಿಶೇಷ.

ಇದರಲ್ಲಿ ಬೆಂಗಳೂರಿನವರು ಮಾತ್ರವಲ್ಲ, ಹೊರ ರಾಜ್ಯಗಳ ಪ್ರಾಣಿ ಪ್ರೇಮಿಗಳು ಕೂಡ ಭಾಗವಹಿಸಿ, ಶ್ವಾನಗಳ ಬಗ್ಗೆ ಕಾಳಜಿ ತೋರಿದ್ದಾರೆ. ಇವರಲ್ಲಿ ಶೇ.64ರಷ್ಟು ಬೆಂಗಳೂರಿನ ನಾಗರಿಕರಾಗಿದ್ದರೆ, ಶೇ.17ರಷ್ಟು ದೆಹಲಿಯಿಂದ ಮತ್ತು ಶೇ.6ರಷ್ಟು ಪುಣೆ ಮತ್ತು ಮುಂಬಯಿಯಿಂದ ಟ್ವೀಟ್ ಮಾಡಿದ್ದಾರೆ. [ಸುಂದರಿ ಯುವತಿ ಮತ್ತು ಆಕೆಯ ಜಾಣ ನಾಯಿ!]

ಮನುಜನ ಅತ್ಯಂತ ನಿಷ್ಠಾವಂತ ಸ್ನೇಹಿತನನ್ನು ದತ್ತು ತೆಗೆದುಕೊಳ್ಳುವ ಅಭಿಯಾನವನ್ನು ಮತ್ತಷ್ಟು ಸ್ವಾರಸ್ಯಕರವಾಗಿಸಲು, ಒಂದು ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ನಾಯಿ ಪ್ರೇಮಿಗಳು ತಮ್ಮ ಚಿತ್ರವನ್ನು ಕಳಿಸಬೇಕು. ಅವರ ಚಿತ್ರದೊಂದಿಗೆ ಹೋಲುವಂಥ ಅಥವಾ ಹೊಂದುವಂಥ ಬೀದಿ ನಾಯಿಯ ಚಿತ್ರವನ್ನು ಹುಡುಕಲಾಗುವುದು. ಇದೂ ಕೂಡ ಭಾರೀ ಜನಪ್ರಿಯತೆಯನ್ನು ಗಳಿಸಿತು ಎನ್ನುತ್ತದೆ ಡಾಗ್ಸಿ ಚ್ಯೂ.

ಇದರ ಬಗ್ಗೆ ಪ್ರೀತಿ ವ್ಯಕ್ತಪಡಿಸಿ ಬಾಲಿವುಡ್ ನಾಯಕಿ ಈಶಾ ಗುಪ್ತಾ ಕೂಡ ಟ್ವೀಟ್ ಮಾಡಿದ್ದರು. ಕುಳಿತಲ್ಲಿಂದಲೇ #BengaluruOptsToAdopt ಟ್ವಿಟ್ಟರಲ್ಲಿ ಟ್ರೆಂಡಿಂಗ್ ಆಗುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಅವರು ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. [ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?]

English summary
India's first Twitter trend related to Pet Industry, How Dogsee Chew got it right? Dogsee Chew, a Bengaluru based pet care shop company took a proactive lead towards finding homes for abandoned Indies. More than 10 dogs were adopted by Bengalureans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X