ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದು ಸಂಧಾನ ವಿಫಲ? ಇಂದು ರಮೇಶ್ ಜಾರಕಿಹೊಳಿ ರಾಜೀನಾಮೆ?

|
Google Oneindia Kannada News

Recommended Video

ಸಿದ್ದರಾಮಯ್ಯ ಸಂಧಾನ ವಿಫಲ | ರಮೇಶ್ ಜಾರಕಿಹೊಳಿ ರಾಜೀನಾಮೆ ಸಾಧ್ಯತೆ | Oneindia Kannada

ಬೆಂಗಳೂರು, ಸೆಪ್ಟೆಂಬರ್ 17: ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಇಂದು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರೂ, ಆ ಮಾತುಕತೆ ಫಲ ನೀಡಿದ ಲಕ್ಷಣ ಕಂಡುಬರುತ್ತಿಲ್ಲ! ಕಾಂಗ್ರೆಸ್ ನಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸಿಕ್ಕರೆಮಾತ್ರ ಇರುತ್ತೇನೆ ಎಂದು ತಮ್ಮ ಗುರುವಾದ ಸಿದ್ದರಾಮಯ್ಯ ಅವರಿಗೇ ಜಾರಕಿಹೊಳಿ ಷರತ್ತು ಹಾಕಿದ್ದಾರೆ ಎಂಬ ವದಂತಿಯೂ ಕೇಳಿಬರುತ್ತಿದೆ.

ಸಿದ್ದರಾಮಯ್ಯ ಎದುರು ರಮೇಶ್ ಜಾರಕಿಹೊಳಿ ಇರಿಸಿದ ಮೂರು ಬೇಡಿಕೆಗಳುಸಿದ್ದರಾಮಯ್ಯ ಎದುರು ರಮೇಶ್ ಜಾರಕಿಹೊಳಿ ಇರಿಸಿದ ಮೂರು ಬೇಡಿಕೆಗಳು

ಬೆಳಗಾವಿ ರಾಜಕೀಯದಲ್ಲಿ ಮೂಗುತೂರಿಸುತ್ತಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಬಗ್ಗೆ ಜಾರಕಿಹೊಳಿ ಸಹೋದರರಲ್ಲಿ ಸಾಕಷ್ಟು ಅಸಮಾಧಾನವಿದೆ. ಈ ಕುರಿತೂ ಸಿದ್ದರಾಮಯ್ಯ ಆವರೊಂದಿಗೆ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿ, ಬಿಜೆಪಿಯಿಂದ ಡಿ ಸಿಎಂ ಹುದ್ದೆಯ ಆಫರ್ ಇದೆ ಎಂಬ ಹೊಸ ಬಾಂಬ್ ಅನ್ನೂ ಸಿದ್ದರಾಮಯ್ಯ ಅವರೆದುರು ಸಿಡಿಸಿದ್ದಾರೆ ಎನ್ನಲಾಗುತ್ತಿದೆ.

Does Congress leader Ramesh Jarkiholi resign today?

ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ 5 ಪ್ರಶ್ನೆಗಳುಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ 5 ಪ್ರಶ್ನೆಗಳು

ಈ ಎಲ್ಲವೂ ನಿಜವೇ ಆದಲ್ಲಿ ರಮೇಶ್ ಜಾರಕಿಹೊಳಿ ಇಂದು ರಾಜೀನಾಮೆ ನೀಡಿದರು ಅಚ್ಚರಿಯಿಲ್ಲ ಎಂದು ರಾಜಕೀಯ ಬೆಳವಣಿಗೆಗಳು ಹೇಳುತ್ತಿವೆ. ಅಕಸ್ಮಾತ್ ರಮೇಶ್ ಜಾರಕಿಹೊಳಿ ಅವರು ಇಂದು ರಾಜೀನಾಮೆ ನೀಡಿದ್ದೇ ಆದಲ್ಲಿ ಅವರೊಂದಿಗೆ ಅವರ ಬಣದ 18 ಶಾಸಕರೂ ರಾಜೀನಾಮೆ ನೀಡುತ್ತಾರಾ ಎಂಬುದು ಸದ್ಯಕ್ಕೆ ಕುತೂಹಲ ಕೆರಳಿಸಿರುವ ಸಂಗತಿ.

{document1}

English summary
Karnataka politics: Minister from Belagavi, Ramesh Jarkiholi may resign to his post today if Congress will not fulfill his demands, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X