ಎರಡೂವರೆ ತಿಂಗಳಲ್ಲೇ ತುಂಬಿತು ದೊಡ್ಡಗಣಪತಿ ಹುಂಡಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್.23: ನೋಟ್ ರದ್ದು ಹಿನ್ನೆಲೆ ನಗರದ ವಿವಿಧ ದೇವಾಲಯಗಳ ಹುಂಡಿಗಳಿಗೆ ರು 500, ರು1000 ನೋಟುಗಳು ಹರಿದು ಬಂದಿದೆ.

ಬಸವನಗುಡಿಯ ದೊಡ್ಡಗಣಪತಿ ದೇವಾಲಯದಲ್ಲಿ ಮಂಗಳವಾರ ಎಣಿಕೆ ಕಾರ್ಯ ನಡೆದಿದ್ದು ಎರಡೂವರೆ ತಿಂಗಳಲ್ಲೇ ಹುಂಡಿ ತುಂಬಿಕೊಂಡಿದ್ದು ಒಟ್ಟು ರು 25.95 ಲಕ್ಷ ಸಂಗ್ರಹವಾಗಿದೆ.

ಮೊದಲು ಆರು ತಿಂಗಳಿಗೊಮ್ಮೆ ತುಂಬುತ್ತಿದ್ದ ಹುಂಡಿ ಎರಡೂವರೆ ತಿಂಗಳಲ್ಲೇ ತುಂಬಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

money

ಹಣದ ವಿವರ

2000 x 7 = 14,000
1000 x 751= 7,51.000
500 x 1,379= 6,89,500
100 x 6,693= 6,69,300
50 x 2,145= 1,07,250
10 x 23,140= 2,31,400
5 x 349 = 1,745
ನಾಣ್ಯಗಳು= 60,040
ಒಟ್ಟು= 25,92,705 ಹಣ ಸಂಗ್ರಹವಾಗಿದೆ.


ಹುಂಡಿಯಲ್ಲಿ ಸಿಕ್ಕಿರುವ ಹಣ ಬಹುತೇಕ ಬ್ಯಾಂಕ್ ರದ್ದು ಪಡಿಸಿರುವ ರು 500, 1000 ಸಾವಿರ ಮುಖ ಬೆಲೆಯ ಹಣವಾಗಿದೆ.

ಎಣಿಕೆ ಕಾರ್ಯವು ಶ್ರೀ ದೊಡ್ಡಗಣಪತಿ ಹಾಗೂ ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ, ಮುಜರಾಯಿ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಸಮ್ಮುಖದಲ್ಲಿ ನಡೆದಿತ್ತು. ಬುಧವಾರ ನಗರದ ಬನಶಂಕರಿ ದೇಗುಲದಲ್ಲಿ ಎಣಿಕೆ ಕಾರ್ಯ ನಡೆಯಲಿದೆ.

ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಹುಂಡಿಗಳಲ್ಲಿ ಜಮೆ ಆಗಿರುವ ರು 500 ಹಾಗೂ 1,000 ನೋಟುಗಳನ್ನು ಮಾರ್ಚ್ ಬದಲಿಗೆ ಡಿಸೆಂಬರ್ 31 ಒಳಗೆ ಬ್ಯಾಂಕ್‍ ಗಳಿಗೆ ಜಮಾ ಮಾಡಲು ಮುಜರಾಯಿ ಹಾಗೂ ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Demonetisation: Bengaluru Dodda Ganesha Temple Hundi Counting in two and off month collection 25.92 lakh above.
Please Wait while comments are loading...