ಗಾಂಧಿ ಜಯಂತಿಯಂದು ಕರ್ನಾಟಕದಾದ್ಯಂತ ವೈದ್ಯರ ಮುಷ್ಕರ

Posted By:
Subscribe to Oneindia Kannada
   Doctors Strike In Karnataka On Oct 2nd Gandhi Jayanthi | Oneindia Kannada

   ಬೆಂಗಳೂರು, ಸೆಪ್ಟೆಂಬರ್ 11: ವೈದ್ಯಕೀಯ ರಂಗದ ಕಾರ್ಯದಕ್ಷತೆಯ ಕುರಿತು ಸಾರ್ವಜನಿಕವಾಗಿ ಅಸಾಮಾಧಾನ ಬುಗಿಲೆದ್ದಿದೆ. ವೈದ್ಯರ ನಿರ್ಲಕ್ಷ್ಯದಿಂದ ಹಲವು ಪ್ರಾಣಹಾನಿ ಸಂಭವಿಸಿದ ಉದಾಹರಣೆಗಳು ಇರುವುದರಿಂದ ವೈದ್ಯರಂಗದ ಮೇಲೆ ಪ್ರಹಾರ ಆರಂಭವಾಗಿದೆ.

   ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಮೋದಿಗೆ ಪತ್ರ ಬರೆದ ಐಎಂಎ

   ಸಾರ್ವಜನಿಕರು ಸಣ್ಣ ಪುಟ್ಟ ವಿಷಯಕ್ಕೂ ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದರಿಂದ ಕರ್ತವ್ಯ ನಿರ್ವಹಣೆ ಕಷ್ಟವಾಗಿದೆ ಎಂದು ಅಕ್ಟೋಬರ್ 2 ರಂದು ರಾಜ್ಯದಾದ್ಯಂತ ಮುಷ್ಕರ ಕೈಗೊಳ್ಳಲು ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ)ಯ ಕರ್ನಾಟಕ ಘಟಕ ನಿರ್ಧರಿಸಿದೆ.

   Doctors' strike on Oct 2nd Gnadhi Jayanthi in Karnataka

   ಈ ಗಂಭೀರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಈ ಮುಷ್ಕರ ಕೈಗೊಳ್ಳಲಾಗಿದೆ ಎಂದು ಐಎಂಎ ಕರ್ನಾಟಕ ಘಟಕದ ಅಧ್ಯಕ್ಷ ಡಾ.ರಾಜಶೇಖರ ಬಳ್ಳಾರಿ ತಿಳಿಸಿದ್ದಾರೆ.

   ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಶ್ ಮೆಂಟ್ ಆಕ್ಟ್-2007 ನ್ನು ತಿದ್ದುಪಡಿ ಮಾಡುವ ಸರ್ಕಾರದ ನಿರ್ಧಾರದ ಕುರಿತು ವೈದ್ಯ ಸಂಘ ಕಳೆದ ಜೂನ್ ನಲ್ಲೇ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು.

   ವೈದ್ಯಕೀಯ ಕ್ಷೇತ್ರಕ್ಕೆ ಕಡಿವಾಣ ಹಾಕುವ ಖಾಸಗಿ ವೈದ್ಯರ ನಿಯಂತ್ರಣ ಮಸೂದೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ರಮೇಶ ಕುಮಾರ್ ಹೇಳಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   "To oppose atrocities against doctors and the hospitals, Doctors and staff of various hospital in Karnataka have decided to protest on Oct 2nd," Indian medical association's president of Karnataka unit Dr.Rajashekhar Ballari told to media.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ