ದ್ವಾರಕೀಶ್ ಉದ್ಘಾಟಿಸಿದ ಮುತ್ತಹಳ್ಳಿ ವೆಜ್ ಹೋಟೆಲ್ ನ ವಿಶೇಷ ಗೊತ್ತೆ?

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್ 18: ಈ ಹೋಟೆಲ್ ನ ಹೆಸರು ಮುತ್ತಹಳ್ಳಿ ವೆಜ್. ಮುಂಚೆ ಚಿಕ್ಕದಾಗಿದ್ದ ಹೊಟೆಲ್ ನ ಒಂದಿಷ್ಟು ದೊಡ್ಡದು ಮಾಡಿದ್ದು, ಶುಕ್ರವಾರ ನಟ-ನಿರ್ದೇಶಕ-ನಿರ್ಮಾಪಕ ದ್ವಾರಕೀಶ್ ಉದ್ಘಾಟಿಸಿದ್ದಾರೆ. ಸ್ವತಃ ದ್ವಾರಕೀಶ್ ಇಲ್ಲಿನ ರಾಗಿ ಮುದ್ದೆ-ಸೊಪ್ಪಿನ ಸಾರನ್ನು ಸವಿದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಈ ಹೋಟೆಲಿನ ವಿಶೇಷ ಏನೆಂದರೆ, ಕೃತಕ ಬಣ್ಣಗಳನ್ನು ಬಳಸುವುದಿಲ್ಲ. ರಾಗಿಯಲ್ಲಿ ತಯಾರಾದ ಆಹಾರ ಪದಾರ್ಥಗಳಿಗೆ ಆದ್ಯತೆ. ಜತೆಗೆ ದಿನಕ್ಕೊಂದು ವಿಶೇಷ ಖಾದ್ಯ ಇದ್ದೇ ಇರುತ್ತದೆ. ಹಾಗಂತ ಬೆಲೆ ಕೂಡ ದುಬಾರಿಯಲ್ಲ. 60 ರುಪಾಯಿಗೆ ಊಟ ಸಿಗುತ್ತದೆ. ಈ ಬಗ್ಗೆ ಹೋಟೆಲಿನ ಮಾಲೀಕರಾದ ಪ್ರಶಾಂತ್ ಒನ್ಇಂಡಿಯಾ ಕನ್ನಡದ ಜತೆಗೆ ಮಾತನಾಡಿದರು.[ಉಮಾ ಥಿಯೇಟರ್ ಎದುರಿನ ಸಂತೋಷ್ ಸಾಗರ್ ಚಾಟ್ಸ್ ತಿಂದಿದ್ದೀರಾ?]

Do you know the specialities of Mutthahalli veg hotel?

"ಮುಂಚೆ ನಮ್ಮ ಹೋಟೆಲ್ ಚಿಕ್ಕದಾಗಿತ್ತು. ಅದನ್ನೀಗ ದೊಡ್ಡದಾಗಿ ಮಾಡಿದ್ದೀವಿ. ನಾವು ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ, ರಾಸಾಯನಿಕಗಳನ್ನು ಬಳಸುವುದಿಲ್ಲ. ಬೆಲೆ ಕೂಡ ದುಬಾರಿಯಲ್ಲ. ಬೆಳಗ್ಗೆ 6.30ಕ್ಕೆ ಹೋಟೆಲ್ ತೆರೆದರೆ ರಾತ್ರಿ 10ರವರೆಗೆ ಇರುತ್ತದೆ. ನಮ್ಮಲ್ಲಿನ ಪಡ್ಡು, ರಾಗಿ ರೊಟ್ಟಿ, ಮುದ್ದೆ ಇವುಗಳನ್ನು ನೀವೊಮ್ಮೆ ರುಚಿ ನೋಡಬೇಕು" ಎಂದು ಅವರು ಹೇಳಿದರು.[ಜಯನಗರ ಸಬ್ಜ್ ಹೋಟೆಲ್ ನ ಬೊಂಬಾಟ್ ಊಟ ಇನ್ನೂ ಮಾಡಿಲ್ವ!]

ಹೋಟೆಲಿನ ವಿಳಾಸ: 'ಮುತ್ತಳ್ಳಿ ವೆಜ್', 19ನೇ ಮುಖ್ಯರಸ್ತೆ, ನೀಲಗಿರೀಸ್ ಹತ್ತಿರ, ಎಚ್ ಎಸ್ ಆರ್ ಲೇಔಟ್, ಬೆಂಗಳೂರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mutthahalli veg hotel at Bengaluru HSR Layout inaugurated by actor-producer-director of Kannada movies Dwarakish on Friday. Here is the complete details of Mutthahalli veg. Bengaluru, Food Talk, Food Culture, District News, ಬೆಂಗಳೂರು, ಆಹಾರ ಸಂಸ್ಕೃತಿ, ಆಹಾರ ಪದ್ಧತಿ, ಜಿಲ್ಲಾಸುದ್ದಿ
Please Wait while comments are loading...