ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ದನ ರೆಡ್ಡಿಗೆ ಆಲ್ ದ ಬೆಸ್ಟ್ ಹೇಳಿದ ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ನವೆಂಬರ್ 15: ಇನ್ನುಮುಂದೆ ನಾನು ಸುಮ್ಮನಿರುವುದಿಲ್ಲ ಎಂದು ಗುಡುಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಿಕೆ ಶಿವಕುಮಾರ್ ಆಲ್‌ ದ ಬೆಸ್ಟ್ ಹೇಳಿದ್ದಾರೆ.

ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆಯಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆಯಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಚಿವ ಜನಾರ್ದನ ರೆಡ್ಡಿ ಕಳೆದ ರಾತ್ರಿ ಜೈಲಿನಿಂದ ಹೊರಬಂದು ತಮ್ಮ ರಾಜಕೀಯ ವೈರಿಗಳ ವಿರುದ್ಧ ಅಬ್ಬರಿಸಿದ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜನಾರ್ದನ ರೆಡ್ಡಿಗೆ ಆಲ್‌ದ ಬೆಸ್ಟ್ ಎಂದರು.

ಆಂಬಿಡೆಂಟ್ ಪ್ರಕರಣ ಸಿಐಡಿಗೆ?, ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ ಆಂಬಿಡೆಂಟ್ ಪ್ರಕರಣ ಸಿಐಡಿಗೆ?, ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ

ಯಾರು ಏನು ಬೇಕಾದರೂ ಮಾಡಿಕೊಳ್ಳಲಿ ಅವರವರ ಕೆಲಸ ಅವರು ಮಾಡುತ್ತಾರೆ, ನನಗೆ ಸಾಕಷ್ಟು ಕೆಲಸಗಳಿವೆ, ನಾನು ಯಾರ ತಂಟೆಗೂ ಹೋಗುವುದಿಲ್ಲ ಯಾರೂ ನನ್ನ ತಂಟೆಗೆ ಬರುವುದು ಬೇಡ ಎಂದು ರೆಡ್ಡಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

DKS wishes all the best to Janardhana Reddy

ಇದೇ ವೇಳೆ ಬಳ್ಳಾರಿ ಉಪ ಚುನಾವಣೆ ಸಂದರ್ಭದಲ್ಲಿ ನಾನು ಶ್ರೀರಾಮುಲು ಸೇರಿದಂತೆ ಎಲ್ಲರಿಗೆ ಅಣ್ಣ, ಅಕ್ಕ ಎಂದು ಮಾತನಾಡಿ ಮನವಿ ಮಾಡಿರುವೆ, ಯಾವ ಹಂತದಲ್ಲೂ ಸಂಘರ್ಷಕ್ಕೆ ಬೀಳುವ ಇರಾದೆ ನನ್ನದಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಜನಾರ್ದನ ರೆಡ್ಡಿ ಪರೋಕ್ಷ ಉತ್ತರ ನೀಡಿದರು.

ಜನಾರ್ದನ ರೆಡ್ಡಿಗೆ ಇನ್ನೂ ಒಂದು ದಿನ ಜೈಲೇ ಗತಿ ಜನಾರ್ದನ ರೆಡ್ಡಿಗೆ ಇನ್ನೂ ಒಂದು ದಿನ ಜೈಲೇ ಗತಿ

ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯನ್ನು ನಾವು ಆರಂಭಿಸಿದ್ದೇವೆ, ಕಳೆದ ಹತ್ತು ದಿನಗಳ ಹಿಂದೆ ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಎರಡು ಸಾವಿರಕ್ಕೂ ಅಧಿಕ ಆಪರೇಷನ್ ನ್ನು ಈ ಹತ್ತು ದಿನಗಳ ಅವಧಿಯಲ್ಲಿ ಮಾಡಿದ್ದೇವೆ ಎಂದರು.

ಜನಾರ್ದನ ರೆಡ್ಡಿಗೆ ಮತ್ತೆ ಜೈಲುವಾಸ ಶುರು, ಖೈದಿ ನಂ 10902 ಜನಾರ್ದನ ರೆಡ್ಡಿಗೆ ಮತ್ತೆ ಜೈಲುವಾಸ ಶುರು, ಖೈದಿ ನಂ 10902

ಎಲ್ಲಾ ಬಿಪಿಎಲ್ ಕಾರ್ಡುದಾರರು ಈ ಯೋಜನೆ ಪಲಾನುಭವಿಗಳಾಗಿರುತ್ತಾರೆ. ಯಾರೇ ಆದರು ಕಾರ್ಡು ಇಲ್ಲದಿದ್ದರೂ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಹೇಳಿದ್ದೇವೆ‌ ಬೆಂಗಳೂರು ಒನ್ ಕೇಂದ್ರದಲ್ಲಿ 30 ರೂ.ಗೆ ಈ ಕಾರ್ಡು ದೊರೆಯುತ್ತದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ಆದೇಶ ನೀಡಲಾಗಿದೆ ಎಂದು ಹೇಳಿದರು.

English summary
Congress leader and minister D.K. Shivakumar has complimented the former minister Janardhana Reddy who came out from prison yesterday and dared his political enemies including the former.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X