ಡಿಕೆ ಶಿವಕುಮಾರ್ ಅವರಿಂದ 'ಬೆಸ್ಕಾಂ ಮಿತ್ರ' ಅಪ್ಲಿಕೇಷನ್ ಬಿಡುಗಡೆ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 20 : ' ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಬುಧವಾರ ನಗರದ ಖಾಸಗಿ ಹೋಟೆಲ್ ವೊಂದರಲ್ಲಿ 'ಬೆಸ್ಕಾಂ ಮಿತ್ರ' ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದರು. ಅಲ್ಲದೇ ಜಾಗ್ರತಾದಳ ಗ್ರಾಹಕರ ಸಂವಾದ ಸಭೆಯನ್ನು ಉದ್ಘಾಟಿಸಿದರು.

ಸಮಸ್ಯೆಗೆ ಸ್ಪಂದಿಸಲು ಬಿಬಿಎಂಪಿಯಿಂದ 'Fix My Street' ಅಪ್ಲಿಕೇಷನ್

ಬೆಸ್ಕಾಂ ಮಿತ್ರ ಅಪ್ಲಿಕೇಷನ್ ನಲ್ಲಿ ಗ್ರಾಹಕರಿಗೆ ಬೆಸ್ಕಾಂ ಕುರಿತು ಬೇಕಾದಂತಹ ಎಲ್ಲ ಮಾಹಿತಿ ಲಭ್ಯವಿರುತ್ತದೆ. ಆನ್ ಲೈನ್ ಬಿಲ್ ಪೇಮೆಂಟ್, ಬಿಲ್ಲಿಂಗ್ ಮಾಹಿತಿ, ಬೆಸ್ಕಾಂ ಸಂಬಂಧಿಸಿದ ದೂರು ದಾಖಲಾತಿ, ಕನ್ಸಂಪ್ಷನ್ ಟ್ರಾಕಿಂಗ್ ಹೀಗೆ ವಿವಿಧ ರೀತಿಯ ಅನುಕೂಲತೆಗಳನ್ನು ಒಳಗೊಂಡಿರುತ್ತದೆ.

DKS launched new app called 'BESCOM Mitra'

ಈ ಮೊಬೈಲ್ ಆಪ್ ನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಇಲಾಖೆಯು ಕೂಡ ತಮ್ಮದೇ ಆದ ಅಪ್ಲಿಕೇಷನ್ ಗಳನ್ನು ಹೊಂದಿರುತ್ತದೆ. ಬೆಸ್ಕಾಂ ತನ್ನ ಗ್ರಾಹಕರಿಗಾಗಿ ಇದೇ ಮೊದಲ ಬಾರಿಗೆ ಇಂತಹ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.

ಇಷ್ಟು ದಿನ ಬೆಂಗಳೂರು ಒನ್ ಅಥವಾ ಇನ್ಯಾವುದೋ ಅಪ್ಲಿಕೇಷನ್ ಬಳಸಿ ವಿದ್ಯುತ್ ಶುಲ್ಕವನ್ನು ಪಾವತಿ ಮಾಡಬೇಕಿತ್ತು. ಆದರೆ ಇನ್ನುಮುಂದೆ ಗ್ರಾಹಕರಿಗೆ ಆ ಸಮಸ್ಯೆ ಇರುವುದಿಲ್ಲ.

ಬೆಸ್ಕಾಂ ಮಿತ್ರ ಮೊಬೈಲ್ ಆಪ್ ನ ಉಪಯೋಗಗಳು
1) ಬೆಸ್ಕಾಂ ಶುಲ್ಕದರ, ನೀತಿ, ಯೋಜನೆಗಳು, ಕಚೇರಿಗಳು ಮಾಹಿತಿ
2)ನಿರ್ದಿಷ್ಟ ಹಾಗೂ ಅನಿರ್ದಿಷ್ಟಾವಧಿ ವಿದ್ಯುತ್ ಕಡಿತ ಬಗ್ಗೆ ಮಾಹಿತಿ
3)ಪಂದು ಅಥವಾ ಹೆಚ್ಚು ಖಾತೆ/ಸ್ಥಾವರಗಳ ನೋಂದಣಿ ಬಳಕೆ, ಬಿಲ್ ಹಾಗೂ ಪಾವತಿ ವಿವರಗಳು
4)ಆನ್ ಲೈನ್ ಬಿಲ್ ಪಾವತಿ
5) ಪುನರ್ ಸ್ಥಾಪನಾ ತಂಡದಿಂದ ವಸ್ತುಸ್ಥಿತಿ ಟ್ರ್ಯಾಕಿಂಗ್ ಹಾಗೂ ಜಿಪಿಎಸ್ ದೂರುಗಳ ನೋಂದಣಿ
6)ಸರ್ವೆಗಳಲ್ಲಿ ಭಾಗವಹಿಸುವ ಮೂಲಕ ವ್ಯಕ್ತೀಕೃತ ಶಿಫಾರಸ್ಸು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State energy minister DK Shivakumar launched new app called 'BESCOM Mitra' which enabled bescom users to file complaint and it is a single point of contact for all of consumer needs including Online Bill Payment, Billing Details, Complaint Registration, Consumption tracking etc.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ