ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವ್ಯಕ್ತಿ ಬೇಡ, ಪಕ್ಷದ ಪೂಜೆ ಮಾಡಿ: ಸ್ವಪಕ್ಷೀಯರಿಗೆ ಡಿಕೆಶಿ ಟಾಂಗ್

By Nayana
|
Google Oneindia Kannada News

ಬೆಂಗಳೂರು, ಜೂನ್‌ 27: ಪಕ್ಷದ ವಿರುದ್ಧ ಯಾರೂ ಕೂಡ ಮಾತನಾಡಬಾರದು ಇದು ಡಿಕೆ ಶಿವಕುಮಾರ್‌ಗೂ ಅನ್ವಯಿಸುತ್ತೆ, ಎಲ್ಲರೂ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಬೇಕು ಎಂದು ಸಚಿವ ಡಿಕೆ ಶಿವಕುಮಾರ್‌ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಬುಧವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ಐದು ವರ್ಷಗಳ ಕಾಲ ಸರ್ಕಾರ ನಡೆಸುವುದಾಗಿ ಸಹಿ ಹಾಕಿದ್ದೇವೆ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಆಗಿರುವ ಕರಾರಿನಂತೆ ನಾವು ಸಹಬಾಳ್ವೆಯಿಂದ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗಬೇಕಾಗಿದೆ.

ತಪ್ಪು ಮಾಡಿದ್ರೆ ಜೈಲಿಗೆ ಹೋಗೋಣ, ಇಲ್ಲದಿದ್ರೆ ಏಕೆ ಹೆದರಿಕೆ?: ಡಿಕೆಶಿ ತಪ್ಪು ಮಾಡಿದ್ರೆ ಜೈಲಿಗೆ ಹೋಗೋಣ, ಇಲ್ಲದಿದ್ರೆ ಏಕೆ ಹೆದರಿಕೆ?: ಡಿಕೆಶಿ

ಯಾವುದೋ ಒಂದು ಕಾರಣದಿಂದ ಯಾರ ವಯಕ್ತಿಕ ಪೂಜೆಯನ್ನು ಮಾಡಬಾರದು ಪಕ್ಷವೇ ಎಲ್ಲರಿಗೂ ಅಂತಿಮ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

D.K.Shivakumar says love your party not person

ಇತ್ತೀಚೆಗೆ ಧರ್ಮಸ್ಥಳದ ನಿಸರ್ಗ ಚಿಕಿತ್ಸಾ ತಾಣದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವರ್ಷದ ಬಳಿಕ ಪಾರ್ಲಿಮೆಂಟ್ ಚುನಾವಣೆ ಬಳಿಕ ಸಮ್ಮಿಶ್ರ ಉಳಿಯುತ್ತದೆಯೇ ಎನ್ನುವುದನ್ನು ನೋಡಬೇಕು ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಡಿಕೆ ಶಿವಕುಮಾರ್‌ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ಗುಪ್ತ 'ಡೈರಿ' ರಹಸ್ಯ: ಡಿಕೆಶಿಗೆ ಯಡಿಯೂರಪ್ಪ ಬಹಿರಂಗ ಸವಾಲು ಗುಪ್ತ 'ಡೈರಿ' ರಹಸ್ಯ: ಡಿಕೆಶಿಗೆ ಯಡಿಯೂರಪ್ಪ ಬಹಿರಂಗ ಸವಾಲು

37 ಸ್ಥಾನ ಲೆಕ್ಕಿಸದೇ 224 ಸ್ಥಾನ ಗಳನ್ನ ಮನಸಿನಲ್ಲಿ ಇಟ್ಕೊಂಡು ಮೈತ್ರಿ ರಚನೆ ಆಗಿದೆ. ಯಾರೊ ಕಿಡಿಗೇಡಿಗಳು ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ.ಇದ್ಯಾವುದು ಅಧಿಕೃತ ಅಲ್ಲ..ರಾಹುಲ್ ಮತ್ತು ವೇಣುಗೋಪಾಲ್ ಅಧಿಕೃತ ವಾಗಿ ಒಪ್ಪಿಗೆ ಕೊಟ್ಟಿರುವುದು ಮಾತ್ರ ಅಧಿಕೃತ ಎಂದರು.

ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸಾಧ್ಯವಿಲ್ಲ ಅಂತ ಚಲುವರಾಯಸ್ವಾಮಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಮೈತ್ರಿ ವಿಚಾರದಲ್ಲಿ ಯಾರು ಮಾತನಾಡುವುದು ಬೇಡ. ನಾನು ನೀನು ಅನ್ನೋದು ಬೇಡ.. ಪಕ್ಷದ ವಿರುದ್ಧ ಯಾರೇ ಹೇಳಿಕೆ ಕೊಟ್ಟರು ಸಹಿಸಲು ಸಾಧ್ಯವಿಲ್ಲ. ಇದು ಎಲ್ಲರಿಗೂ ಅನ್ವಯ ಆಗುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಮಾತಿನಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಆಗಲ್ಲ. ಸರ್ಕಾರ ನಡೆಯುತ್ತೆ. ಸರ್ಕಾರಿ ನೌಕರರ ವರ್ಗಾವಣೆ ಗಳಲ್ಲಿ ಯಾವುದೇ ತೊಂದರೆ ಆಗಿಲ್ಲ.. ಕೇಳಿದ ಅಧಿಕಾರಿಯನ್ನು ಸಿಎಂ ಹಾಕಿಕೊಟ್ಟಿದ್ದಾರೆ ಎಂದು ತಿಳಿಸಿದರು.

English summary
Minister D.K.Shivakumar has said every body should love their party not any person. He also said the collation government will complete its five years of tenure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X