ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ತೇಜೋವಧೆಗೆ ವ್ಯವಸ್ಥಿತ ಪಿತೂರಿ: ಡಿಕೆಶಿ

By Mahesh
|
Google Oneindia Kannada News

ಬೆಂಗಳೂರು, ನ.25: ಟಿವಿ 9 ಸುದ್ದಿ ವಾಹಿನಿ ಪ್ರಸಾರ ಸ್ಥಗಿತಕ್ಕೆ ನಾನಾಗಲಿ, ನಮ್ಮ ಸರ್ಕಾರವಾಗಲಿ ಕಾರಣರಲ್ಲ. ಪ್ರಸಾರ ಸ್ಥಗಿತಗೊಳಿಸುವಂತೆ ನಾನು ಆದೇಶಿಸಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಸಂಜೆಯಿಂದ ಟಿವಿ 9 ಕನ್ನಡ ಹಾಗೂ ನ್ಯೂಸ್ 9 ಇಂಗ್ಲೀಷ್ ಸುದ್ದಿ ವಾಹಿನಿಗಳ ಪ್ರಸಾರವನ್ನು ಕೇಬಲ್ ಆಪರೇಟರ್ ಗಳು ಸ್ಥಗಿತಗೊಳಿಸಿದ್ದಾರೆ. ಟಿವಿ ವಾಹಿನಿಗಳ ಪ್ರಸಾರ ಸ್ಥಗಿತಕ್ಕೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಆದೇಶವೇ ಕಾರಣ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಡಿಕೆ ಶಿವಕುಮಾರ್ ಅವರು ಇಡೀ ಪ್ರಕರಣದ ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.[ರಾಜ್ಯದ ಹಲವೆಡೆ ಟಿವಿ 9, ನ್ಯೂಸ್ 9 ಪ್ರಸಾರ ಇಲ್ಲ]

DK Shivakumar reaction on TV9 Kannada news channel Blackout

ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಕೇಬಲ್ ಆಪರೇಟರ್‌ಗಳ ನಡುವೆ ಸಭೆ ನಡೆದ ನಂತರ ಈ ಬೆಳವಣಿಗೆ ನಡೆದಿದೆ. ಸಭೆಯಲ್ಲಿ ಎರಡೂ ಸುದ್ದಿವಾಹಿನಿಗಳ ಕೇಬಲ್ ಮೂಲಕ ಪ್ರಸಾರವನ್ನು ಸ್ಧಗಿತಗೊಳಿಸುವಂತೆ ಡಿಕೆ ಶಿವಕುಮಾರ್ ಅವರು ಆದೇಶಿಸಿದ್ದರು ಎನ್ನಲಾಗಿತ್ತು. ಈ ಬಗ್ಗೆ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. [ಆಕೆ ನನ್ನ ಮಗಳಿದ್ದಂತೆ. ಹಲ್ಲೆ ನಡೆದಿಲ್ಲ : ಡಿಕೆ ಶಿವಕುಮಾರ್]

ನಾನು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇರಿಸಿಕೊಂಡವನು. ಮಾಧ್ಯಮ ಸ್ವಾತಂತ್ರ್ಯ ಉಳಿಸಲು ರಕ್ಷಿಸಲು ನಾನು ಬದ್ಧ, ನಾನಾಗಲಿ ನನ್ನ ಸರ್ಕಾರವಾಗಲಿ ಖಾಸಗಿ ಸುದ್ದಿ ವಾಹಿನಿಗಳ ಪ್ರಸಾರ ಸ್ಥಗಿತಗೊಳಿಸುವಂತೆ ಕೇಬಲ್ ಆಪರೇಟರ್ ಗಳಿಗೆ ಆದೇಶ ನೀಡಿಲ್ಲ. ವೈಯಕ್ತಿಕ ದ್ವೇಷದಿಂದ ಸತತವಾಗಿ ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಿ ನನ್ನ ತೇಜೋವಧೆ ಮಾಡಿದ್ದಾರೆ. ನಾನು ಈ ಬಗ್ಗೆ ನಾನು ನ್ಯಾಯಾಲಯಕ್ಕೆ ಹೋಗಲು ಸಿದ್ಧ ಎಂದು ಡಿಕೆ ಶಿವಕುಮಾರ್ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ನಡುವೆ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರೊಡನೆ ವಿಕಾಸಸೌಧದಲ್ಲಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಸಂಸ್ಥೆಗಳ ಜೊತೆ ವಾರ್ತಾ ಸಚಿವರು ನಿರಂತರ ಸಂಪರ್ಕದಲ್ಲಿದ್ದಾರೆ. ಮಾಧ್ಯಮಗಳ ಸ್ವಾತಂತ್ರ್ಯ ಹರಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ.

English summary
Karnataka Energy minister DK Shivakumar denied reports that he had ordered Cable operators to blackout TV9 Kannada and News 9 news channel. Minister has issued a press release today(Nov.25)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X