ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈಕಮಾಂಡ್‌ಗೆ ಹಣ ನೀಡಿಲ್ಲ, ಹವಾಲಾ ಬಗ್ಗೆ ಗೊತ್ತೇ ಇಲ್ಲ: ಡಿಕೆಶಿ

By Manjunatha
|
Google Oneindia Kannada News

ಬೆಂಗಳೂರು, ಜೂನ್ 22: ಹವಾಲಾ ದಂಧೆಯಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಬಗ್ಗೆ ಸಿಟ್ಟಾಗಿರುವ ಡಿ.ಕೆ.ಶಿವಕುಮಾರ್ ಹವಾಲಾ ಹಾಗೂ ಹೈಕಮಾಂಡ್‌ಗೆ ಕಪ್ಪ ನೀಡಿರುವ ಆರೋಪವನ್ನು ಸಾರಾ ಸಗಟಾಗಿ ಸಚಿವ ನಿರಾಕರಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಆದ ಐಟಿ ರೇಡ್‌ನಲ್ಲಿ ಡೈರಿಯೊಂದು ಪತ್ತೆಯಾಗಿತ್ತು ಹಾಗೂ ಅವರ ಆಪ್ತರ ಅಪಾರ್ಟ್‌ಮೆಂಟ್‌ನಲ್ಲಿ ಡಿಕೆಶಿ ಅವರದ್ದೇ ಎನ್ನಲಾದ ಕೋಟ್ಯಂತರ ರೂಪಾಯಿ ಹಣ ಸಹ ದೊರೆತಿದೆ ಎಂದು ಆರೋಪಿಸಲಾಗಿತ್ತು.

ಏನಿದು ಹವಾಲ ವ್ಯವಹಾರ, ಇದು ಯಾಕಿಷ್ಟು ಕುಖ್ಯಾತಿ?ಏನಿದು ಹವಾಲ ವ್ಯವಹಾರ, ಇದು ಯಾಕಿಷ್ಟು ಕುಖ್ಯಾತಿ?

ಆದರೆ ಈ ಎಲ್ಲಾ ಆರೋಪಗಳನ್ನು ಸಾರಾಸಗಟು ನಿರಾಕರಿಸಿರುವ ಡಿ.ಕೆ.ಶಿವಕುಮಾರ್ ಅವರು 'ನಾನು ಹೈಕಮಾಂಡ್‌ಗೆ ಹಣ ನೀಡಿಲ್ಲ ಹಾಗೂ ಹವಾಲಾ ದಂದೆಯ ಬಗ್ಗೆಯೂ ನನಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ.

DK Shivakumar denies all allegations made upon him

ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಇದು ಎಂದಿರುವ ಡಿಕೆಶಿ ನಾನು ಯಾವುದೇ ತಪ್ಪು ಮಾಡಿಲ್ಲ, ಬೇಕೆಂದೇ ನನ್ನ ರಾಜಕೀಯ ಜೀವನ ಮುಗಿಸಲು ಮಾಡುತ್ತಿರುವ ಹುನ್ನಾರವಿದು ಎಂದು ಅವರು ಹೇಳಿದ್ದಾರೆ.

ನನ್ನ ಬಳಿಯೂ ಸಾಕಷ್ಟು ಡೈರಿಗಳಿವೆ,ಈಗ ಓಪನ್ ಮಾಡಲ್ಲ : ಡಿಕೆಶಿನನ್ನ ಬಳಿಯೂ ಸಾಕಷ್ಟು ಡೈರಿಗಳಿವೆ,ಈಗ ಓಪನ್ ಮಾಡಲ್ಲ : ಡಿಕೆಶಿ

ಇತ್ತೀಚೆಗಷ್ಟೆ ಬಿಜೆಪಿಯವರು ರಾಜಿನಾಮೆ ಕೇಳಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ್ದ ಡಿಕೆಶಿ ಬಿಜೆಪಿಯವರ ಅವ್ಯವಹಾರಗಳ ಬಗ್ಗೆ ನನಗೆ ಗೊತ್ತಿದೆ. ಇಂಥಹಾ ಡೈರಿಗಳು ನನ್ನ ಬಳಿಯೂ ಇದೆ ಸಮಯ ಬಂದಾಗ ಹೊರಗಿಡುತ್ತೇನೆ ಎಂದಿದ್ದರು.

English summary
DK Shivakumar said 'I have neither given any money to Congress party nor used 'hawala network'. I have not done anything wrong'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X