ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ನನ್ನ ಬ್ಯಾಂಕ್ ಖಾತೆ ಜಪ್ತಿ ಮಾಡಿಲ್ಲ : ಡಿಕೆ ಶಿವಕುಮಾರ್ ಸ್ಪಷ್ಟನೆ

By Sachhidananda Acharya
|
Google Oneindia Kannada News

ಬೆಂಗಳೂರು, ಆಗಸ್ಟ್ 10: ಆದಾಯ ತೆರಿಗೆ ಅಧಿಕಾರಿಗಳು ನನ್ನ ಯಾವುದೇ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

'ಆಗಸ್ಟ್ ತಿಂಗಳ ಆರಂಭದಲ್ಲಿ ನಮ್ಮ ಪಕ್ಷಕ್ಕೆ ಗ್ರಹಣ ಆವರಿಸಿತ್ತು''ಆಗಸ್ಟ್ ತಿಂಗಳ ಆರಂಭದಲ್ಲಿ ನಮ್ಮ ಪಕ್ಷಕ್ಕೆ ಗ್ರಹಣ ಆವರಿಸಿತ್ತು'

ಸದಾಶಿವ ನಗರದಲ್ಲಿರುವ ತಮ್ಮ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ನನ್ನ ವೈಯಕ್ತಿಕ ಖಾತೆಗಳನ್ನಾಗಲಿ, ನನ್ನ ಸಂಸ್ಥೆಗೆ ಸೇರಿದ ಯಾವುದೇ ಖಾತೆಗಳನ್ನಾಗಲೀ ಐಟಿ ಅಧಿಕಾರಿಗಳು ಸೀಜ್ ಮಾಡಿಲ್ಲ," ಎಂದರು.

DK Shivakumar clarified that IT does not sized his bank accounts

"ನನಗೆ ಹಲವಾರು ವೈಯಕ್ತಿಕ ಬ್ಯಾಂಕ್ ಖಾತೆಗಳಿವೆ. ಜತೆಗೆ ನನಗೆ ಸೇರಿದ ಸಂಸ್ಥೆಗಳದ್ದೂ ಹಲವಾರು ಖಾತೆಗಳಿವೆ. ಆದರೆ ಯಾವೊಂದು ಖಾತೆಗಳೂ ಇಲ್ಲಿಯವರೆಗೆ ಜಪ್ತಿಯಾಗಿಲ್ಲ. ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ ಎಂಬ ವರದಿಗಳು ಸುಳ್ಳು," ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ತಮ್ಮ ದೈನಂದಿನ ವ್ಯವಹಾರ, ಉದ್ಯಮಗಳು ಎಂದಿನಂತೆ ನಡೆಯುತ್ತಿವೆ ಎಂದು ಡಿ.ಕೆ.ಶಿವಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.

ಇಂಧನ ಸಚಿವ ಡಿಕೆ ಶಿವಕುಮಾರ್ ವಿಚಾರಣೆ ನಂತರ ಮುಂದೇನು?ಇಂಧನ ಸಚಿವ ಡಿಕೆ ಶಿವಕುಮಾರ್ ವಿಚಾರಣೆ ನಂತರ ಮುಂದೇನು?

ನೋಟಿಸ್ ನೀಡಿಲ್ಲ, ನಾನೇ ಹೋಗುತ್ತಿದ್ದೇನೆ

ಇನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಲು ವಿಚಾರಣೆಗೆ ಹಾಜರಾಗುವಂತೆ ನನಗೆ ನೋಟಿಸ್ ನೀಡಿಲ್ಲ ಎಂದೂ ಡಿಕೆ ಶಿವಕುಮಾರ್ ಹೇಳಿದರು. ಆದರೆ, "ನಾನೇ ಖುದ್ದು ಹೋಗಿ ಒಂದಷ್ಟು ಸ್ಪಷ್ಟನೆಗಳನ್ನು ನೀಡಬೇಕಾಗಿದೆ. ಈ ಕಾರಣಕ್ಕೆ ಐಟಿ ಕಚೇರಿಗೆ ಇಂದು ತೆರಳುತ್ತಿದ್ದೇನೆ," ಎಂದು ಅವರು ತಮ್ಮ ಭೇಟಿಯ ಉದ್ದೇಶವನ್ನು ಬಹಿರಂಗಗೊಳಿಸಿದರು.

English summary
Income Tax officials have not seized any of my accounts, said power minister DK Shivakumar. Speaking to media representatives at his home in Sadashivanagar, he said, "My personal accounts or any of accounts belongs to my istitutions have not been seized by IT officials."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X