ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸಿಎಂ ಆಗಿ ಬಿಎಸ್ವೈ ಅಲ್ಲ, ಎಚ್ಡಿಕೆ ಪ್ರಮಾಣ ವಚನ' : ರಮ್ಯಾ ಟ್ವೀಟ್

By Mahesh
|
Google Oneindia Kannada News

ಬೆಂಗಳೂರು, ಮೇ 16: ಕರ್ನಾಟಕದ ಸಿಎಂ ಆಗಿ ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದರ ಬಗ್ಗೆ ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಟ್ವೀಟ್ ಮಾಡುವ ಮೂಲಕ ಗೊಂದಲ, ಕುತೂಹಲ ಮೂಡಿಸಿದ್ದರು.

ಗುಜರಾತಿ ಉದ್ಯಮಿಯಿಂದ ಶಾಸಕರ 'ಕುದುರೆ ವ್ಯಾಪಾರ' ಗುಜರಾತಿ ಉದ್ಯಮಿಯಿಂದ ಶಾಸಕರ 'ಕುದುರೆ ವ್ಯಾಪಾರ'

ಭಾರತೀಯ ಜನತಾ ಪಕ್ಷ (ಬಿಜೆಪಿ) ದವರು ಗುಜರಾತಿ ಉದ್ಯಮಿಯೊಬ್ಬರ ಮೂಲಕ ಶಾಸಕರ ಖರೀದಿಗೆ ಇಳಿದಿದ್ದು, ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಈ ಮುಂಚೆ ಟ್ವೀಟ್ ಮಾಡಿದ್ದರು.

ರಾತ್ರಿ 8.30 ರ ಸುಮಾರಿಗೆ ಬಿಜೆಪಿ ಕರ್ನಾಟಕ ಟ್ವಿಟ್ಟರ್ ಖಾತೆಯಿಂದ ಬಂದ ಟ್ವೀಟ್ ಗೆ ಪ್ರತಿಯಾಗಿ ರಮ್ಯಾ ಟ್ವೀಟ್ ಮಾಡಿದ್ದು ಕುತೂಹಲಕಾರಿಯಾಗಿತ್ತು.

ಬಿಜೆಪಿ ವಾಮಮಾರ್ಗದಿಂದ ಸರ್ಕಾರ ರಚನೆಗೆ ಬಿಜೆಪಿ ಮುಂದಾಗಿದೆ. ಬಹುಮತ ಸಾಬೀತುಪಡಿಸಲು ಬೇಕಾದ ಸಂಖ್ಯೆ ಇಲ್ಲದಿದ್ದರೂ ಬಿಜೆಪಿ ಯತ್ನ ಸರಿಯಿಲ್ಲ ಎನ್ನುತ್ತಿದ್ದ ವೇಳೆಯಲ್ಲೇ ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗಿ ನಾಳೆ 9.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸುವರ್ಣ ಕರ್ನಾಟಕ ನಿರ್ಮಾಣ ಆರಂಭ ಎಂಬ ಟ್ವೀಟ್ ಬಂದಿತ್ತು.

Divya Spandana alias Ramya Tweets about CM oath Taking creats Chaos

ಇದಕ್ಕೆ ಪೂರಕವಾಗಿ ಬಿಜೆಪಿ ನಾಯಕರಾದ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಸುರೇಶ್ ಕುಮಾರ್, ಸಿಟಿ ರವಿ ಕೂಡಾ ಬಿಎಸ್ ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದ್ದರು.

ಆದರೆ, ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ರಮ್ಯಾ ಅವರು ಇಂಡಿಯಾ ಟುಡೇ ಮುಖ್ಯಸ್ಥ ರಾಹುಲ್ ಕನ್ವಲ್ ಅವರನ್ನು ಉಲ್ಲೇಖಿಸಿ, ರಮ್ಯಾ ಟ್ವೀಟ್ ಮಾಡಿ, ಬಿಎಸ್ ಯಡಿಯೂರಪ್ಪ ಅಲ್ಲ, ಕುಮಾರಸ್ವಾಮಿ ಅವರು ಸಿಎಂ ಆಗಿ ನಾಳೆ 9.30ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದಿದ್ದರು.

ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ, ಈ ರೀತಿ ಅನೇಕ ವಾಟ್ಸಾಪ್ ಸಂದೇಶಗಳು ಹರಿದಾಡುತ್ತಿವೆ. ಮೂಲಗಳಿಂದ ತಿಳಿದು ಬಂದ ಮಾಹಿತಿ ಎಂದು ಟಿವಿಗಳನ್ನು ಅರಚಾಡುತ್ತಾರೆ. ಏನು ನಂಬುವುದು? ಏನು ಬಿಡುವುದು? ಎಂದು ಪ್ರಶ್ನಿಸಿದ್ದಾರೆ.

English summary
Congress Social media head Divya Spandana alias Ramya Tweets about CM oath Taking created Chaos as she tweeted instead of BS Yeddyurappa , HD Kumraswamy will take oath as CM. Later clarified about her tweet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X