ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್ 4 ರಂದು ನಡೆಯಲಿರುವ ನಂದಿ ಹಬ್ಬಕ್ಕೆ ಭಾರಿ ಸಿದ್ಧತೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 22 : ರಾಜ್ಯ ಪ್ರವಾಸೋದ್ಯಮ ಇಲಾಖೆಯು ನಂದಿ ಬೆಟ್ಟದ ವೈಶಿಷ್ಟ್ಯತೆ, ಇತಿಹಾಸವನ್ನು ಇನ್ನಷ್ಟು ಪ್ರಚುರಪಡಿಸಲು ಹಾಗೂ ಯುವ ಪೀಳಿಗೆಗೆ ಈ ಬಗ್ಗೆ ತಿಳಿಸಿಕೊಡಲು ನಂದಿ ಹಬ್ಬವನ್ನು ನಂದಿ ಬೆಟ್ಟದಲ್ಲಿ ಆಯೋಜಿಸಿದೆ.

ಯುನೈಟೆಡ್ ವೇ ಬೆಂಗಳೂರು ಹಾಗೂ ನಮ್ಮ ನಿಮ್ಮ ಸೈಕಲ್ ಪ್ರತಿಷ್ಠಾನ ಸಹಯೋಗದಲ್ಲಿ ಮಾರ್ಚ್4 ರಂದು ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ.

ನಡಿಗೆ, ಮ್ಯಾರಥಾನ್, ಸೈಕ್ಲಿಂಗ್ ಹೀಗೆ ನಾನಾ ಚಟುವಟಿಕೆಗಳನ್ನು ನಡೆಸುವುದರ ಜತೆಗೆ ನಂದಿ ಬೆಟ್ಟದ ಪುರಾತನ ಕಟ್ಟಡ, ಸಸ್ಯರಾಶಿಗಳು, ಜೀವಸಂಕುಲ, ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿಯ ಸಮಗ್ರ ಪರಿಚಯ ಮಾಡಿಕೊಡುವುದು ಈ ಹಬ್ಬದ ವಿಶೇಷತೆಯಾಗಿದೆ.

Diversity of Nandi hills: Nandi Habba on March 4

ನಂದಿ ಬೆಟ್ಟದ ಸ್ವಚ್ಛತೆಗೂ ಒತ್ತು ನೀಡಲಾಗಿದ್ದು, ಬೆಟ್ಟ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ. ಕಳೆದ ಸೆಪ್ಟೆಂಬರ್ ಆರಂಭದಲ್ಲೇ ನಡೆಯಬೇಕಿದ್ದ ಈ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು.

ಪಾರಂಪರಿಕ ತಾಣಗಳ ಪರಿಚಯ: ನಂದಿ ಬೆಟ್ಟದ ಬಳಿಯ ವ್ಯಾಲಿ ಆಫ್ ವಿಂಡ್ ನಿಂದ ಆರಂಭವಾಗುವ ಅನೇಕ ಬಗೆಯ ನಡಿಗೆ ಹಾಗೂ ಮ್ಯಾರಥಾನ್ ಬೆಟ್ಟದ ಸುತ್ತಮುತ್ತಲ ಪ್ರದೇಶದಲ್ಲಿ ಸಾಗಲಿದೆ. ಈ ವೇಳೆ ನಂದಿಯ ನಂದಿಯ ಸುತ್ತಮುತ್ತ ಪ್ರದೇಶದಲ್ಲಿ ಸಾಗಲಿದೆ.

ಈ ವೇಳೆ ನಂದಿಯ ಸುತ್ತಮುತ್ತ ಗಿರಿಗಳು, ಚೋಳರ ಕಾಲದ ಭೋಗ ನಂದೀಶ್ವರ ದೇವಾಲಯ, ಕಲ್ಯಾಣಿ, ಟಿಪ್ಪು ಡ್ರಾಪ್, ಬೊಟಾನಿಕಲ್ ಗಾರ್ಡನ್, ಬ್ರಿಟಿಷ್ ಅಧಿಕಾರಿಗಳ ಸಮಾಧಿ ಸ್ಥಳ, ವಿಶ್ವೇಶ್ವರಯ್ಯನವರ ಜನ್ಮ ಸ್ಥಳ ಸೇರಿದಂತೆ ಸುತ್ತಮುತ್ತಲ ಪಾರಂಪರಿಕ ತಾಣಗಳ ಪರಿಚಯಮಾಡಿಕೊಡಲಾಗುತ್ತದೆ.

English summary
To promote the history and diversity of Nandi hills, Department of Tourism is organising Nandi Habba on March 4 at Nandi hill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X