ಭಿನ್ನಮತಿಯರ ವಿಚಾರದಲ್ಲಿ ಕಾರ್ಯಕರ್ತರ ಅಭಿಪ್ರಾಯ ಮುಖ್ಯ: ಎಚ್ಡಿಕೆ

Posted By:
Subscribe to Oneindia Kannada

ಬೆಂಗಳೂರು, ಜನವರಿ, 19: ಭಿನ್ನಮತಿಯ ಶಾಸಕರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಆದರೆ ಶಾಸಕರ ವಿಚಾರದಲ್ಲಿ ಕಾರ್ಯಕರ್ತರ ಅಭಿಪ್ರಾಯ ಮುಖ್ಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಭಿನ್ನಮತೀಯರ ವಿಚಾರದಲ್ಲಿ ಕಾರ್ಯಕರ್ತರ ತೀರ್ಮಾನವೇ ಅಂತಿಮ. ಅವರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಅವರ ವಿಚಾರ ಮಾತನಾಡಿದರೆ ನಮ್ಮ ಸುದ್ದಿಗೆ ಏಕೆ ಬರುತ್ತೀರಾ ಎಂದು ಅವರು ಹೇಳುತ್ತಾರೆ. ಮುಂದಿನ ವಿಧಾನಸಭೆ ಚುನಾವಣೆಯಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನು ಸಿದ್ಧಪಡಿಸಿಲ್ಲ. ಪಟ್ಟಿ ಸಿದ್ದ ಪಡಿಸಲು ಅಭ್ಯರ್ಥಿಗಳು ಮತ್ತು ಸದಸ್ಯರೊಂದಿಗೆ ಚರ್ಚೆಯಾಗಬೇಕಿದೆ ಮಾಧ್ಯಮದಲ್ಲಿ ಬಂದಿರುವ ಪಟ್ಟಿ ಅಧಿಕೃತವಲ್ಲ, ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.[ಲೋಕಾಯುಕ್ತ ಕೋರ್ಟಿನಿಂದ ಕುಮಾರಸ್ವಾಮಿ ದಂಪತಿಗೆ ಸಮನ್ಸ್]

Dissidents Councillor terms of feel it is important to party workers: HDK

ಶಾಸಕಸ್ಥಾನ ಶಾಶ್ವತವಲ್ಲ. ಶಾಸಕರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದು ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ. ಬೆಂಬಲಿಗರು ಶಾಸಕರೊಂದಿಗೆ ಹೋಗಿ ಅಧಿಕಾರಿಗಳ ಮೇಲೆ ಬೆದರಿಕೆ ಹಾಕಿದರೆ ದೊಡ್ಡಸ್ಥಿಕೆ ಬರುತ್ತದೆ ಎಂದು ಇದು ಸರಿಯಲ್ಲ. ಮಾಗಡಿ ಶಾಸಕರು ಅನುಭವಿ ಶಾಸಕರು ಅವರು ತಗ್ಗಿ ಬಗ್ಗಿ ನಡೆದರೆ ಸೂಕ್ತ ಎಂದರು.

ರಾಜ್ಯದ ರಾಜಕಾರಣದಲ್ಲಿ ಜೆಡಿಎಸ್ ನಲ್ಲಿ ಬಲ ತುಂಬಲು ಮಾಜಿ ಮುಖ್ಯಮಂತ್ರಿ ಎಲ್ಲ ವಿಷಯಗಳಿಗೂ ಸ್ಪಂಧಿಸಿ ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂಬುದು ಚಿಂತರಕ ಮಾತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dissidents Councillor terms of feel it is important to party workers says H.D.KumaraSwamy
Please Wait while comments are loading...