ಒಕ್ಕಲಿಗರ ಭಿನ್ನಮತೀಯರ ಚಟುವಟಿಕೆ ಅಕ್ರಮ: ಅಪ್ಪಾಜಿ ಗೌಡ

Posted By:
Subscribe to Oneindia Kannada

ಬೆಂಗಳೂರು, ಜನವರಿ 6: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಅವಾರು ಶುಕ್ರವಾರದಂದು ಭಿನ್ನ ಮತೀಯರ ಗುಂಪು ನಡೆಸಿದ ಸಭೆ 'ಅಕ್ರಮ ಮತ್ತು ಅಸಾಂವಿಧಾನಿಕ' ಎಂದು ಕರೆದಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಅಪ್ಪಾಜಿಗೌಡರು ತಾವೇ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದು ಈಗಲೂ ಬಹುಸಂಖ್ಯೆಯ ನಿರ್ದೇಶಕರ ಬೆಂಬಲ ತನಗೇ ಇದೆ ಎಂದರು. ಕೆಲ ಕಾಲದಿಂದ ಕೆಲ ನಿರ್ದೇಶಕರು ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲು ಪಿತೂರಿ ಮಾಡುತ್ತಿದ್ದಾರೆ. ಅವರು ಅದಕ್ಕಾಗಿ ಎಲ್ಲ ಬಗೆಯ ಕಾನೂನುವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಶುಕ್ರವಾರ ಒಂದು ಹೆಜ್ಜೆ ಮುಂದೆ ಇರಿಸಿ ಪ್ರತ್ಯೇಕ ಸಭೆಯನ್ನು ಕರೆದಿದ್ದಾರೆ. [ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿ ಗೌಡ ಪದಚ್ಯುತಿ]

'Dissidence activity is illegal'': Appaji Gowda Karnataka Vokkaliga Sangha

ಈ ಕುರಿತು ನಾನು ಸ್ಪಷ್ಟಪಡಿಸುವುದೇನೆಂದರೆ ಅಧ್ಯಕ್ಷರನ್ನು ಅವಿಶ್ವಾಸ ಮಂಡನೆ'ಯಿಂದ ತೆಗೆದುಹಾಕಲು ಅಥವಾ ಅಧ್ಯಕ್ಷರಾಗಿ ಆಯ್ಕೆಯಾದ ಆರು ತಿಂಗಳ ಒಳಗೆ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲು ಸಾಧ್ಯವಿಲ್ಲ. ಮೊದಲಿಗೆ ನಾನು ಅಧ್ಯಕ್ಷನಾಗಿ ಆಯ್ಕೆಯಾಹೊ ಕೇವಲ ಐದು ತಿಂಗಳಾಗಿವೆ. ಎರಡನೆಯದಾಗಿ ಸಭೆಯನ್ನು ಕರೆದರೂ ಎಲ್ಲ ಸದಸ್ಯರಿಗೂ ಸಭೆಯ ಸೂಚನೆಯನ್ನು ಏಳು ದಿನಗಳ ಒಳಗಡೆ ಕಳುಹಿಸಬೇಕು.

ಆದ್ದರಿಂದ ಭಿನ್ನಮತೀಯರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಆಕ್ರಮಣದಿಂದ ಅಧಿಕಾರ ಕಿತ್ತುಕೊಳ್ಳಲು ನೋಡುತ್ತಿದ್ದಾರೆ. ಅದು ನಡೆಯಲು ನಾವು ಬಿಡುವುದಿಲ್ಲ. ನಾವು ಕಾನೂನುಬದ್ಧವಾಗಿದ್ದು ನ್ಯಾಯ ಕೋರಿ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧರಾಗಿದ್ದೇವೆ. ತೀರ್ಪು ನನ್ನ ಪರವಾಗಿ ಬರುತ್ತದೆ ಎಂಬ ನಿರೀಕ್ಷೆ ಇದೆ. ಭಿನ್ನಮತೀಯರು ರಾಜ್ಯ ಒಕ್ಕಲಿಗರ ಸಂಘದ ಪ್ರತಿಷ್ಠೆಗೆ ಮಸಿ ಬಳಿಯುತ್ತಿರುವುದಲ್ಲದೆ ಕೀಳಾದ ಚಟುವಟಿಕೆಗಳನ್ನು ನಡೆಸಿ ನಾವು ತಲೆ ತಗ್ಗಿಸುವಂತೆ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rajya Vokkaligara Sangha president Dr Appaji Gowda has termed the meeting called by the rebel group on Friday as "illegal and unconstitutional". In a press release, Dr Appaji Gowda said that he is the president of the Rajya Vokkaligara Sangha and still enjoyed the majority of the directors.
Please Wait while comments are loading...