ನಾಳೆ(ಜ.18) ಸೊಗಡು ಶಿವಣ್ಣ ನಿವಾಸದಲ್ಲಿ ಬಿಜೆಪಿ ಅತೃಪ್ತರ ಸಭೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 17: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂಪ್ಪನವರ ಜೊತೆ ಭಿನ್ನಮತೀಯರು ಸಭೆ ಗುರುವಾರ ನಡೆಸುವ ಹಿನ್ನೆಲೆ ಜಿಜೆಪಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮಾಜಿ ಶಾಸಕ ಸೊಗಡು ಶಿವಣ್ಣ ನಿವಾಸದಲ್ಲಿ ಅತೃಪ್ತ ಬಣದ ಬುಧವಾರ ಸಭೆ ನಡೆಸಲು ಮುಂದಾಗಿದ್ದಾರೆ.

ನಾಳೆ(ಜ.18) ಸೊಗಡು ಶಿವಣ್ಣ ನಿವಾಸದಲ್ಲಿ ನಡೆಯಲಿರುವ ಅತೃಪ್ತ ಬಣದ ಸಭೆಯಲ್ಲಿ 25ಕ್ಕೂ ಹೆಚ್ಚು ಅತೃಪ್ತರು ಭಾಗವಹಿಸುವ ನಿರೀಕ್ಷೆಯಿದೆ. ಅವರಲ್ಲಿ ರಘನಾಥ್ ಮಲ್ಕಾಪುರೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಪ ಸದಸ್ಯ ಭಾನುಪ್ರಕಾಶ್, ಸೋಮಣ್ಣ ಬೇವಿನಮರದ, ವಿಪ ಮಾಜಿ ಸದಸ್ಯ ಡಾ.ಶಿವಯೋಗ ಸ್ವಾಮಿ, ಅಶ್ವಥ್ ನಾರಾಯಣ ಭಾಗವಹಿಸಬಹುದು ಎನ್ನಲಾಗಿದೆ.[ಬಿಜೆಪಿ ಅಸಮಾಧಾನ ಸ್ಫೋಟ, ಬಿಎಸ್ವೈ ಬಗ್ಗೆ 2 ಪುಟಗಳ ಪತ್ರ ಬರೆದ ನಾಯಕರು]

disgruntled leaders will be meeting in the house of sogadu shivanna Jan 18

ಗುರುವಾರ ನಡೆಯಲಿರುವ ಭಿನಮತಿಯರ ಸಭೆಯಲ್ಲಿ ಬಿಎಸ್ ವೈ ಹತ್ತು ಮಂದಿ ಪ್ರಮುಖರು ಬರುವಂತೆ ಸೂಚನೆ ನೀಡಿದ್ದು, ಈ ಸಂಬಂಧ ಅತೃಪ್ತ ಯಾವ ಯಾವ ವಿಷಯದ ಬಗ್ಗೆ ಚರ್ಚಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆ ಬಿಜೆಪಿ ಪಾಳಯದಲ್ಲಿ ಮಹತ್ವದ ಸಭೆಯಾಗಿದ್ದು ಈಶ್ವಯಪ್ಪ ಸಭೆಯಲ್ಲಿ ರಾಯಣ್ಣ ಬ್ರಿಗೇಡ್ ನ ಪ್ರಾಮುಖ್ಯತೆ ಮತ್ತು ಬಿಜೆಪಿ ಇದನ್ನು ಕಡೆಗಣಿಸುತ್ತಿರುವ ಬಗ್ಗೆ ಮಾತನಾಡಲಿದ್ದಾರೆ. ಹಾಗೆ ಯಡಿಯೂರಪ್ಪ ಅವರ ಧೋರಣೆಯನ್ನು ಖಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಈ ಸಭೆಯ ಪರಿಣಾಮ ಬಿ.ಎಸ್.ಯಡಿಯೂರಪ್ಪ ನಡೆಸಲಿರುವ ಸಭೆಯ ಮೇಲೆ ಬೀಳಲಿದ್ದು ಯಾವ ರೀತಿಯ ನಿರ್ಣಯಗಳು ಹೊರ ಬೀಳಲಿವೆಯೋ ನೋಡಬೇಕಿದೆ. ಹೀಗಾಗಿ ಗುರುವಾರದ ಸಭೆ ಸಾರ್ವಜನಿಕವಾಗಿ ಬಾರಿ ಮಹತ್ವ ಪಡೆದುಕೊಳ್ಳಲಿದ್ದು, ಯಾವ ಭಿನ್ನಮತ ಭುಗಿಲೇಳಲಿದೆಯೋ ತಿಳಿಯಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
disgruntled leaders will be meeting in the house of former Councillor sogadu shivanna (Jan 18)tomorrow. BJP State President B.S.Yeddyrappa hold meeting on Thursday, tommorrow meeting is well rehearsed.
Please Wait while comments are loading...