ನಾಳೆಯಿಂದ(ಜ.31) ಪಡಿತರದಲ್ಲಿ ಬಿಳಿ ಸೀಮೆಎಣ್ಣೆ, ಹೆಸರುಕಾಳು

Posted By:
Subscribe to Oneindia Kannada

ಬೆಂಗಳೂರು, ಜನವರಿ 30: ರಾಜ್ಯದೆಲ್ಲೆಡೆ ಮುಕ್ತ ಮಾರುಕಟ್ಟೆಯಲ್ಲಿ ಬಿಪಿಎಲ್ ಪಡಿತರ ವ್ಯವಸ್ಥೆಯಡಿ ರಿಯಾಯಿತಿ ದರದಲ್ಲಿ ಬಿಳಿ ಸೀಮೆಎಣ್ಣೆ ಹಾಗೂ ಹೆಸರು ಕಾಳು ವಿತರಣೆಗೆ ನಾಳೆ(ಜ.31) ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ,ಖಾದರ್ ತಿಳಿಸಿದ್ದಾರೆ.

ಜನವರಿ, 31ರಂದು ಬೆಳಗ್ಗೆ 9,30ಕ್ಕೆ ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ವಿನೂತನ ವ್ಯವಸ್ಥೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಮುಕ್ರ ಮಾರುಕಟ್ಟೆಯಲ್ಲಿ ಒಂದು ಲೀ. ಬಿಳಿ ಸೀಮೆಎಣ್ಣೆ ರು.17 ನಂತೆ ಪೂರೈಸುವ ವ್ಯವಸ್ಥೆ ಮಾಡಿದ್ದು, ಪ್ರತಿ ಕುಟುಂಬಕ್ಕೆ ರು.30ನಂತೆ ಒಂದು ತಿಂಗಳು ಹೆಸರುಕಾಳು, ಮತ್ತೊಂದು ತಿಂಗಳು ತೊಗರಿಬೆಳೆ ವಿತರಿಸಲಾಗುವುದು. ಈಗಾಗಲೇ ಅಕ್ಕಿ, ಉಪ್ಪು, ಎಣ್ಣೆ ನೀಡುತ್ತಿದ್ದು ಇದರ ಜೊತೆ ಹೆಸರುಕಾಳು ಸೇರಲಿದೆ ಎಂದು ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.[ಎಪಿಎಲ್ ಪಡಿತರ ಚೀಟಿಗಾಗಿ ಇಂದಿನಿಂದಲೇ(ಜ.9) ಅರ್ಜಿ ಹಾಕಿ]

discounted prices on the open market distribution the white kerosene, green gram

ರಾಜ್ಯದಲ್ಲಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಅಪೌಷ್ಟಿಕತೆಯನ್ನು ತಡೆಯಲು ಪಡಿತರ ವ್ಯವಸ್ಥೆ ದ್ವಿದಳದಾನ್ಯ ವಿತರಣೆಗೆ ಸರಕಾರ ಮುಂದಾಗಿದ್ದು, ಪಡಿತರ ಪಡೆಯಲು ಕೂಪನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಬೆಂಗಳೂರು ಒನ್ ಸೇವಾ ಕೇಂದ್ರ ಮೂಲಕ ಕೂಪನ್ ವಿತರಸಲಾಗಿದೆ ಎಂದರು.

ಇನ್ನು ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಕೆ ಪ್ರಕ್ರಿಯೆಯನ್ನು ಸಕಾಲ ವ್ಯಾಪ್ತಿಗೆ ಸೇರಿಸಿದ್ದು, ಶೀಘ್ರವಾಗಿ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ. ಈ ಸಂಬಂಧ ಅಧ್ಯಯನ ನಡೆಸಲು ಹರಿಯಾನ ರಾಜ್ಯದ 11 ಜನರ ಶಾಸಕರು ಮತ್ತು ಅಧಿಕಾರಿಗಳ ತಂಡ ಆಗಮಿಸಿದ್ದು, ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ ವಿಧಾನ, ಪಡಿತರ ವಿತರಣೆ, ಕೂಪನ್ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸಲಿದೆ ಎಂದರು.

ಏಪ್ರಿಲ್‍ನೊಳಗೆ ರಾಜ್ಯಾದ್ಯಂತ ಕೂಪನ್ ವ್ಯವಸ್ಥೆ : ಹರ್ಷಗುಪ್ತ
ಮೈಸೂರು; ರಾಜ್ಯ ಸರ್ಕಾರ ನೂತನವಾಗಿ ಜಾರಿಗೊಳಿಸಲಿರುವ ಕೂಪನ್ ವ್ಯವಸ್ಥೆಯನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ಆಹಾರ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Harsha gupta

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿ ಜ.31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಡಿತರ ಕೂಪನ್ ಗೆ ಚಾಲನೆ ನೀಡಲಿದ್ದು, ರಾಜ್ಯದಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳೊಳಗೆ ಸಂಪೂರ್ಣವಾಗಿ ಜಾರಿಯಾಗಲಿದ್ದು, ಪಡಿತರ ಸೋರಿಕೆಯನ್ನು ತಡೆಗಟ್ಟವಲ್ಲಿ ಯಶಸ್ವಿಯಾಗಲಿದ್ದು, ಪ್ರಸ್ತುತ ನಗರ ಪ್ರದೇಶಗಳಲ್ಲಿ ಕೆಲವೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕೂಪನ್ ವ್ಯವಸ್ಥೆಯಿದೆ.

ಇದರಿಂದ ಶೇ.15ರಷ್ಟು ಹಣ ಉಳಿತಾಯವಾಗಲಿದೆ. ಕೂಪನ್ ಗಳು ಸೇವಾ ಕೇಂದ್ರ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯವಿದ್ದು, ಮೊಬೈಲ್‍ನಲ್ಲಿ 161ಗೆ ಕರೆ ಮಾಡಿ ಕೂಪನ್ ಪಡೆಯಬಹುದು. ಗ್ಯಾಸ್ ಹಾಗೂ ವಿದ್ಯುತ್ ಸಂಪರ್ಕ ಹೊಂದಿರುವ ಕುಟುಂಬಗಳಿಗೆ ಸೀಮೆ ಎಣ್ಣೆ ಪೂರೈಕೆಯನ್ನು ನಿರ್ಬಂಧಿಸಲಾಗುವುದು, ಆಧಾರ್ ಜೋಡಣೆಯಿಮದ ಸುಮಾರು 70 ಲಕ್ಷ ನಕಲಿ ಪಡಿತರ ಚೀಟಿದಾರರು ಪತ್ತೆಯಾಗಿದ್ದು ಅವುಗಳನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BPL ration system at discounted prices on the open market distribution the white kerosene, green gram says Karnataka Food and civil supplies minister UT Khader. Tomorrow That program inaugurated by CM Siddaramaiah in Bengaluru.
Please Wait while comments are loading...