ಗುಡುಗು, ಸಿಡಿಲು, ಚಂಡಮಾರುತದ ಬಗ್ಗೆ ಮುನ್ನೆಚ್ಚರಿಕೆ ನೀಡುವ ಆ್ಯಪ್

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 12: ಗುಡುಗು, ಸಿಡಿಲು ಹಾಗೂ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆಯ ವೆಬ್‌ಸೈಟ್ ಅಥವಾ ಹವಾಮಾನ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕೆಂದಿಲ್ಲ. ನೀವಿರುವ ಜಾಗದಿಂದಲೇ ಮಾಹಿತಿ ಪಡೆಯಬಹುದು.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು 'ಸಿಡಿಲು' ಮೊಬೈಲ್ ಅಪ್ಲಿಕೇಷನ್ ನಲ್ಲಿ ಮಿಂಚು ಹಾಗೂ ಚಂಡಮಾರುತದ ಮುನ್ಸೂಚನೆ ಪಡೆಯಬಹುದು. ಅಂತರ್ಜಾಲ ಆಧಾರಿತ ಈ ಅಪ್ಲಿಕೇಷನ್ , ಗೂಗಲ್ ಮ್ಯಾಪ್, ಜಿಪಿಎಸ್ ಬಳಸಿಕೊಂಡು ಗ್ರಾಹಕನ ಸ್ಥಳ ಪತ್ತೆ ಮಾಡಿಕೊಳ್ಳುತ್ತದೆ.

ಈ ಬಾರಿ ದೇಶದಲ್ಲಿ ಸಾಮಾನ್ಯ ಮಾನ್ಸೂನ್ ಮುನ್ಸೂಚನೆ

ಬಳಿಕ ಆ ಜಾಗದಲ್ಲಿ ಮಿಂಚು ಅಥವಾ ಚಂಡಮಾರುತ ಬರುವ ಸಾಧ್ಯತೆ ಇದೆಯೇ ಎಂಬುದನ್ನು ತಿಳಿಸುತ್ತದೆ. ಮಿಂಚು, ಗುಡುಗು ಬರಲಿದ್ದರೆ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನೂ ತಿಳಿಸುತ್ತದೆ. ಇದರಿಂದಾಗಿ ಜನರು, ಮಿಂಚು, ಸಿಡಿಲು ಬರುವ ಮುನ್ನವೇ ಜಾಗೃತರಾಗಬಹುದು. ರಾಜ್ಯದಲ್ಲಿ ಸಿಡಿಲು ಬಡಿದು ಮರಣ ಹೊಂದುವ ಹಾಗೂ ಹಾನಿಯಾಗುವ ಘಟನೆಗಳು ಹೆಚ್ಚಾಗುತ್ತಿದೆ.

Disaster Management Board Launches new app on weather info

ಪ್ರತಿ ವರ್ಷ ರಾಜ್ಯದಲ್ಲಿ 60-70 ಜನರು ಸಾವಗೀಡಾಗುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಇದನ್ನು ತಪ್ಪಿಸಬಹುದು. ಅಪ್ಲಿಕೇಷನ್ ನಲ್ಲಿ ಹಿಂದಿ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಯ ಆಯ್ಕೆ ಇದೆ.
ಮೋಡ ಹಾಗೂ ಮಳೆ ಬರುವ ಚಿತ್ರ ಹೊಂದಿರುವ ಡಿಟಿವಿ( ಅಪಾಯಕಾರಿ ಚಂಡಮಾರುತ ಸೂಚನೆ) ಮಳೆ, ಚಂಡಮಾರುತ, ಬಿರುಗಾಳಿಯ ಮುನ್ಸೂಚನೆ ನೀಡುತ್ತದೆ. ಎಲ್‌1 ಡಿಟಿವಿ ಎಂದರೆ ಕಡಿಮೆ, ಎಲ್‌2 ಡಿಟಿವಿ ಎಂದರೆ ಸಾಧಾರಣ ಹಾಗೂ ಎಲ್3 ಡಿಟಿವಿ ಎಂದರೆ ವೇಗವಾದ ಚಂಡಮಾರುತ ಎಂದು ಪರಿಗಣಿಸಬೇಕು. ಈ ಅಪ್ಲಿಕೇಷನ್ ಬಣ್ಣಗಳ ಮೂಲಕವೂ ಮುನ್ಸೂಚನೆ ನೀಡುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Natural Disaster Management Board has launched an application in Google play store for general public which will provide weather information including thunderbolt, thunderstorm, cyclone and any situation of Changes in the weather based on GPS indication.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ