ಉಪ್ಪಿ ರಾಜಕೀಯ ಪಕ್ಷವೂ ಬುದ್ಧಿವಂತರು, ಐಡಿಯಾ ಇರುವವರಿಗೆ ಮಾತ್ರ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 12: "ನಮಗೆ ಜನ ನಾಯಕರೂ ಬೇಡ, ಜನ ಸೇವಕರು ಬೇಡ. ಕಾರ್ಮಿಕರು ಬೇಕು. ನಮ್ಮ ಪಾಲಿಗೆ ಒಳ್ಳೆಯದು ಎನಿಸುವಂಥ ಕೆಲಸವನ್ನು ಬೆಳಗ್ಗೆ ಒಂಬತ್ತರಿಂದ ಸಂಜೆ ಆರರವರೆಗೆ ಮಾಡುವಂಥ ಕಾರ್ಮಿಕರು ಬೇಕು" ಎಂದು ಜನ ಪ್ರತಿನಿಧಿಗಳು ಎನಿಸಿಕೊಳ್ಳುವವರ ಬಗ್ಗೆ ಉಪೇಂದ್ರ ಅವರ ನಿರೀಕ್ಷೆ ಇದು.

ದೊಡ್ಡಾಲದಮರಕ್ಕಿಂತ ಮುಂದೆ ಇರುವ ರುಪ್ಪೀಸ್ ರೆಸಾರ್ಟ್ ನಲ್ಲಿ ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿಚಾರವನ್ನು ತೆರೆದಿಟ್ಟರು. ನಿರ್ದೇಶಕ-ನಟ-ನಿರ್ಮಾಪಕ ಹೀಗೆ ಸಿನಿಮಾ ರಂಗದಲ್ಲಿ ಅಗಾಧ ಅನುಭವ ಹೊಂದಿದ ಉಪೇಂದ್ರ ಅವರಿಗೆ ರಾಜಕೀಯ, ರಾಜಕಾರಣ ಬಗ್ಗೆ ಇರುವ ಪರಿಕಲ್ಪನೆ ಸಾಕಾರವಾಗಿ ಬಿಟ್ಟರೆ ಖಂಡಿತಾ ಅತಿ ದೊಡ್ಡ ಬದಲಾವಣೆಯನ್ನು ಎದುರು ನೋಡಬಹುದು.

ಥಿಯೇಟರಲ್ಲಿ ಚಪ್ಪಾಳೆ ಹೊಡೆಯುವ ಜನ ಉಪ್ಪಿಗೆ ಮತ ಹಾಕ್ತಾರಾ?

ಖಾಕಿ ಷರ್ಟು ತೊಟ್ಟು ಕೂತಿದ್ದ ಉಪೇಂದ್ರ, ಜನ ಸಾಮಾನ್ಯರಲ್ಲ, ಜನ 'ಅಸಾಮಾನ್ಯರು' ಇಲ್ಲದಿದ್ದರೆ ಲಕ್ಷಾಂತರ ಕೋಟಿ ತೆರಿಗೆ ಸಂಗ್ರಹವಾಗುತ್ತಿತ್ತಾ? ರಾಜ್ಯಕ್ಕೆ ಸೀಮಿತ ಮಾಡಿ ಹೇಳುವುದಾದರೆ ಆ ಹಣದ ಮೂಲಕವೇ ಪೌರ ಕಾರ್ಮಿಕರಿಂದ ಮುಖ್ಯಮಂತ್ರಿವರೆಗೆ ಸಂಬಳ ಕೊಡಲು ಆಗುತ್ತಿತ್ತಾ? ಇವರೆಲ್ಲರೂ ಕಾರ್ಮಿಕರೇ. ಜನರ ಕೆಲಸ ಮಾಡಿಕೊಡಲು ನೇಮಕ ಆಗಿರುವ ಕಾರ್ಮಿಕರು ಎಂದು ಅವರು ಹೇಳಿದರು.

ತುಂಬು ಪ್ರೀತಿಯಿಂದ ನಮ್ಮ ಉಪೇಂದ್ರರಿಗೊಂದು ಪತ್ರ...

ಅಷ್ಟಕ್ಕೂ ಉಪೇಂದ್ರ ಏನು ಹೇಳಿದರು, ಪತ್ರಕರ್ತರ ಪ್ರಶ್ನೆಗಳಿಗೆ ಹೇಗೆ ಉತ್ತರಿಸಿದರು ಎರಡನ್ನೂ ತಿಳಿಯಲು ಮುಂದೆ ಓದಿ.

ಜನ ಸೇರಿಸೋದೇ ರಾಜಕಾರಣ ಅಲ್ಲ

ಜನ ಸೇರಿಸೋದೇ ರಾಜಕಾರಣ ಅಲ್ಲ

ರಾಜಕೀಯ, ರಾಜಕಾರಣ ಅಂದರೆ ಜನರನ್ನು ಸೇರಿಸೋದು, ಅವರೆದುರು ತಾವು ಮಾಡಿದ ಕೆಲಸಗಳ ಬಗ್ಗೆ ಹೇಳಿಕೊಳ್ಳುವುದು ಅಂತ ಮನಸ್ಸಿನಲ್ಲಿ ಕೂತುಬಿಟ್ಟಿದೆ. ಈ ಹಿಂದೆಲ್ಲ ಇಷ್ಟು ತಂತ್ರಜ್ಞಾನ ಬೆಳೆದಿರಲಿಲ್ಲ. ಆದರೆ ಈಗಲೂ ಅದೇ ಥರ ಮಾಡಿದರೆ ಏನರ್ಥ? ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಇವೆಲ್ಲ ಯಾಕೆ ಬೇಕು? ಮತ್ತೆ ಅದನ್ನೇ ಟಿವಿಯಲ್ಲಿ ನೋಡಿ ಅದೇನು ಜನ ಸೇರಿದಾರೆ ಅಂತ ಆಶ್ಚರ್ಯ ಪಡ್ತೀವಿ. ನಮಗೆ ಗೊತ್ತು ಆ ಜನ ಹೇಗೆ ಸೇರಿರ್ತಾರೆ ಅಂತ.

ಒಳ್ಳೇದು ಮಾಡೋಕೆ ಜಾತಿ ಯಾಕೆ ಬೇಕು?

ಒಳ್ಳೇದು ಮಾಡೋಕೆ ಜಾತಿ ಯಾಕೆ ಬೇಕು?

ನಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ ಸಿಗಬೇಕು, ವಯಸ್ಸಾದವರಿಗೆ ಆರೋಗ್ಯಕ್ಕೆ ಒಳ್ಳೆ ಆಸ್ಪತ್ರೆ ಬೇಕು ಇಂಥದ್ದೇ ಅಲ್ಲವಾ ನಮ್ಮ ಬೇಡಿಕೆ. ಇವೆಲ್ಲ ಮಾಡೋಕೆ ಜಾತಿ-ಧರ್ಮ- ಖ್ಯಾತಿ ಇರುವ ವ್ಯಕ್ತಿ ಯಾಕೆ ಬೇಕು? ನಾನೊಂದು ಸಿನಿಮಾ ಮಾಡ್ತೀನಿ ಅಂದರೆ ಆ ಕೆಲಸಕ್ಕೆ ಸೂಕ್ತವಾದ ವ್ಯಕ್ತಿಯನ್ನು ನೋಡ್ತೀನಿ ಹೊರತು ಜಾತಿಯನ್ನಲ್ಲ.

ಪಾರ್ಟಿ ಫಂಡ್ ಅಂತಲೇ ಇರಬಾರದು

ಪಾರ್ಟಿ ಫಂಡ್ ಅಂತಲೇ ಇರಬಾರದು

ಪಕ್ಷ ಅಂತ ಮಾಡಿದ ಮೇಲೆ ಪಾರ್ಟಿ ಫಂಡ್ ಅಂತ ಇರಲೇಬಾರದು. ಭ್ರಷ್ಟಾಚಾರ ಶುರುವಾಗೋದೇ ಅಲ್ಲಿಂದ. ಹಣ ಹಾಕಿದ ವ್ಯಕ್ತಿ ಅದಕ್ಕೆ ಬದಲಿಯಾಗಿ ತನಗೆ ಏನು ಸಿಗುತ್ತೆ ಅಂತ ಯೋಚನೆ ಮಾಡ್ತಾನೆ. ಹಾಕಿದ ಬಂಡವಾಳಕ್ಕೆ ಲಾಭ ಸಹಿತ ಪಡೆಯಬೇಕು ಅಂದುಕೊಳ್ತಾನೆ. ಅವನ ಜತೆಗೆ ಇರುವ ಜನಕ್ಕೆ ಅಧಿಕಾರ, ಹಣ ಕೊಡಬೇಕಾಗುತ್ತದೆ.

ಐಡಿಯಾ ಪಡೆದು ಜಾರಿ ಮಾಡೋದೇ ಗ್ರೇಟೆಸ್ಟ್ ಐಡಿಯಾ

ಐಡಿಯಾ ಪಡೆದು ಜಾರಿ ಮಾಡೋದೇ ಗ್ರೇಟೆಸ್ಟ್ ಐಡಿಯಾ

ಪ್ರಶ್ನೆ: ಹಾಗಿದ್ದರೆ ನಿಮಗೆ ರಾಜಕಾರಣದ ಬಗ್ಗೆ, ಈ ವ್ಯವಸ್ಥೆ ಬದಲಾಯಿಸುವ ಬಗ್ಗೆ ಇರುವ ಐಡಿಯಾ ಏನು?

ಉಪ್ಪಿ: ಜನರ ಐಡಿಯಾಗಳನ್ನು ಪಡೆದು ಅದನ್ನು ಜಾರಿ ಮಾಡಬೇಕು ಅನ್ನೋದೇ ಗ್ರೇಟೆಸ್ಟ್ ಐಡಿಯಾ ಅಲ್ಲವಾ?

ಗುರಿ-ಉದ್ದೇಶ-ಸಿದ್ಧಾಂತ

ಗುರಿ-ಉದ್ದೇಶ-ಸಿದ್ಧಾಂತ

ಪ್ರಶ್ನೆ: ನಿಮ್ಮ ಪಕ್ಷದ ಹೆಸರೇನು, ಅದರ ಗುರಿ-ಉದ್ದೇಶ-ಸಿದ್ಧಾಂತಗಳೇನು?

ಉಪ್ಪಿ: ಅದಕ್ಕಾಗಿಯೇ ಜನರಿಂದ ಮೇಲ್, ಪತ್ರಗಳನ್ನು ಆಹ್ವಾನ ಮಾಡಿದ್ದೀನಿ. ಒಳ್ಳೆ ಐಡಿಯಾ ಇರುವ ಪ್ರತಿಯೊಬ್ಬರ ಜತೆಗೂ ಮಾತನಾಡಿ, ಆ ನಂತರ ಇವೆಲ್ಲ ಘೋಷಣೆ ಮಾಡ್ತೀನಿ.

ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ?

ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ?

ಪ್ರಶ್ನೆ: ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡ್ತೀರಾ? ಮಾಡುವುದಾದರೆ ಯಾವ ಕ್ಷೇತ್ರದಿಂದ?

ಉತ್ತರ: ಆ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿರೋದು. ಆದರೆ ಯಾವ ಕ್ಷೇತ್ರ ಅಂತ ತೀರ್ಮಾನ ಮಾಡಬೇಕಿದೆ.

ನಿಮ್ಮನ್ನು ನಂಬುವುದು ಹೇಗೆ?

ನಿಮ್ಮನ್ನು ನಂಬುವುದು ಹೇಗೆ?

ಪ್ರಶ್ನೆ: ನಮಗೆ ಒಳ್ಳೆಯದನ್ನು ಮಾಡ್ತೀನಿ ಅಂತ ಹೇಳಿಕೊಂಡು ಬಂದವರು ಬಹಳ ಜನ ಮೋಸ ಮಾಡಿದ್ದಾರೆ. ನಿಮ್ಮನ್ನ ಹೇಗೆ ನಂಬೋದು?

ಉತ್ತರ: ಎದೆ ಬಗೆದು ನನ್ನ ನಿಯತ್ತು ತೋರಿಸುವ ಟೆಕ್ನಾಲಜಿ ಯಾವುದಾದರೂ ಇದ್ದಿದ್ದರೆ ಎದೆ ಬಗೆದು ತೋರಿಸ್ತಿದ್ದೆ.

ಮಧ್ಯದಲ್ಲೆ ಬೇರೆ ಪಕ್ಷ ಸೇರಿದರೆ...

ಮಧ್ಯದಲ್ಲೆ ಬೇರೆ ಪಕ್ಷ ಸೇರಿದರೆ...

ಪ್ರಶ್ನೆ: ನೀವು ಪಕ್ಷವನ್ನು ಮಧ್ಯದಲ್ಲೇ ಕೈ ಬಿಟ್ಟು ಬೇರೆ ಪಕ್ಷ ಸೇರಿಬಿಟ್ಟರೆ?

ಉಪ್ಪಿ: ಭರವಸೆಯೇ ಜೀವನ. ಈಗಿನ್ನೂ ಹೆಜ್ಜೆ ಇಡ್ತಿದೀನಿ. ಸ್ವಂತ ಪಕ್ಷ ಶುರು ಮಾಡಬೇಕು ಅಂತಿದೀನಿ. ಈಗ ಅಂತಹ ಪ್ರಶ್ನೆಗೆ ಹೇಗೆ ಉತ್ತರ ಹೇಳೋದು?

ಜನರ ಕೈಗೆ ನೀವು ಸಿಗ್ತಿರಾ..

ಜನರ ಕೈಗೆ ನೀವು ಸಿಗ್ತಿರಾ..

ಪ್ರಶ್ನೆ: ನೀವು ಪತ್ರಕರ್ತರಿಗೇ ಫೋನಿಗೆ ಸಿಗಲ್ಲ. ಇನ್ನು ಜನರಿಗೆ ಎಲ್ಲಿ ಸಿಗ್ತೀರಿ? ಐವತ್ತನೇ ಸಿನಿಮಾ ಮಾಡಬೇಕು ಅಂತ ಇದ್ದೀರಂತೆ

ಉಪ್ಪಿ: ನಾನು ನಿರ್ಮಾಪಕರೊಬ್ಬರಿಗೆ ಕಾಲ್ ಶೀಟ್ ಕೊಟ್ಟಿದ್ದೆ. ಆ ಜವಾಬ್ದಾರಿ ಎಲ್ಲ ಮುಗಿದಿದೆ. ಈಗ ಪೂರ್ಣ ಪ್ರಮಾಣದಲ್ಲಿ ಇದೇ ಕೆಲಸ. ಬಹುಶಃ ಈ ರಾಜಕೀಯ ಜೀವನವೇ ನನ್ನ ಐವತ್ತನೇ ಸಿನಿಮಾ ಆಗಬಹುದು.

ಅಹಂಕಾರ, ಭಯ ಇಲ್ಲ

ಅಹಂಕಾರ, ಭಯ ಇಲ್ಲ

ಪ್ರಶ್ನೆ: ನೀವು ಈ ಪ್ರಯತ್ನದಲ್ಲಿ ಗೆಲ್ತೀರಾ?

ಉಪ್ಪಿ: ನಾನು ಪ್ರಯತ್ನ ಅಂತ ಮಾಡಿದಾಗಲೇ ಗೆದ್ದಾಗಿದೆ. ಇನ್ನು ಜನರ ಸರದಿ. ಅವರ ಸ್ಪಂದನೆ ಹೇಗಿದೆ ಅಂತ ಗೊತ್ತಾಗಬೇಕು. ನನಗೆ ಗೆಲ್ತೀನಿ ಅನ್ನೋ ಅಹಂಕಾರವೂ ಇಲ್ಲ, ಸೋಲ್ತೀನಿ ಅನ್ನೋ ಭಯವೂ ಇಲ್ಲ.

ಉಪೇಂದ್ರ ಪಕ್ಷವೂ ಬುದ್ಧಿವಂತರಿಗೆ ಮಾತ್ರ

ಉಪೇಂದ್ರ ಪಕ್ಷವೂ ಬುದ್ಧಿವಂತರಿಗೆ ಮಾತ್ರ

ಉಪೇಂದ್ರ ಅವರ ಪರಿಕಲ್ಪನೆ ರುಪ್ಪೀಸ್ ರೆಸಾರ್ಟ್ ಇದ್ದಂತೆಯೇ. ತುಂಬ ಸುಂದರವಾಗಿದೆ. ಆದರೆ ಬಹಳ ದೂರ. ಸದ್ಯಕ್ಕೆ ಈ ಥರವೇ ಯೋಚನೆ ಮಾಡುವಂತಹವರು ಇರಬಹುದು. ಎಂದೋ ಒಂದು ದಿನ ಇಂಥವರ ಸಂಖ್ಯೆ ಹೆಚ್ಚಾಗಬಹುದು. ಚಳವಳಿ, ಹೋರಾಟ, ಸಿದ್ಧಾಂತಗಳ ಮೂಲಕ ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಇಲ್ಲಿ ಆ ಥರದ್ದು ಏನೂ ಇಲ್ಲ.

ಇನ್ನು ಆರೆಂಟು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇದ್ದು, ಈಗ ಜನರ ಅಭಿಪ್ರಾಯ ಸಂಗ್ರಹಿಸಿ, ಪಕ್ಷಕ್ಕೆ ಹೆಸರಿಟ್ಟು, ಅದು ನೋಂದಣಿಯಾಗಿ, ಒಳ್ಳೆ ಅಭ್ಯರ್ಥಿಗಳನ್ನೇ ಅಯ್ಕೆ ಮಾಡಿ, ದುಡ್ಡು ಖರ್ಚು ಮಾಡದೆ, ಫೇಸ್ ಬುಕ್-ಟ್ವಿಟ್ಟರ್, ವಾಟ್ಸಪ್ ನಲ್ಲಿ ಪ್ರಚಾರ ಮಾಡಿ...ಉಫ್ ಇದೆಲ್ಲ ಸಾಧ್ಯವಾ? ಉಪೇಂದ್ರ ಪಕ್ಷವೂ ಬುದ್ಧಿವಂತರು, ಐಡಿಯಾ ಇರುವವರಿಗೆ ಮಾತ್ರ. ನಮಗೆ ಅರ್ಥವಾಗಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Director-actor Upendra political party too for Intelligent. There are lot of questions about political party launch. He invites ideas from people.
Please Wait while comments are loading...