ಗಾಯಕಿಯಾಗಿ ರೂಪಾ ಮೌದ್ಗಿಲ್, ವಿಡಿಯೋ ಆಲ್ಬಂ ನೋಡಿದ್ರಾ?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 8: "ನನಗೆ ಸಂಗೀತ ಕಲಿಯಬೇಕೆಂಬ ಆಸೆ ಬಹಳ ಇತ್ತು. ಆದರೆ ನನ್ನ ಅಮ್ಮ ಭರತನಾಟ್ಯಕ್ಕೆ ಸೇರಿಸಿಬಿಟ್ಟರು. ಆದರೆ ಸಂಗೀತ ಕಲಿಯಬೇಕೆಂಬ ಆಸೆ ಹಾಗೇ ಉಳಿದಿತ್ತು. ಯಾದಗಿರಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಾಗ ಚಂದ್ರಶೇಖರ ಗೋವಿ ಅವರಿಂದ ಸಂಗೀತ ಕಲಿತೆ. ಹಾಗೂ ಸಂಗೀತದ ಪರೀಕ್ಷೆಯೊಂದನ್ನು ತೆಗೆದುಕೊಂಡು, ಡಿಸ್ಟಿಂಕ್ಷನ್ ನಲ್ಲಿ ಪಾಸಾದೆ"

-ಹೀಗೆ ಹೇಳುವ ಮೂಲಕ ಅಚ್ಚರಿಗೆ ಕಾರಣರಾದವರು ರೂಪಾ ಡಿ. ಮೌದ್ಗಿಲ್. ಡಿಐಜಿ ರೂಪಾ ಅವರ ಹೆಸರು ಕೇಳಿದಾಕ್ಷಣ ನೆನಪಾಗುವುದು ಖಡಕ್ ಪೊಲೀಸ್ ಅಧಿಕಾರಿಯ ಚಿತ್ರ. ಆದರೆ ಅವರು ಸೊಗಸಾಗಿ ಹಾಡು ಹೇಳುತ್ತಾರೆ ಎಂಬುದು ತೀರಾ ಇತ್ತೀಚಿನವರೆಗೆ ಹಲವರಿಗೆ ತಿಳಿದಿರಲಿಲ್ಲ.

ದೇಶದ ಟಾಪ್ 10 ಕಾಪ್ ಗಳಲ್ಲಿ ಕನ್ನಡತಿ ಡಿ ರೂಪಾ

ವಿಶ್ವ ಮಹಿಳಾ ದಿನಾಚರಣೆಯ ಹಿಂದಿನ ದಿನ ಅಂದರೆ ಬುಧವಾರದಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಹಾಡಿನ ವಿಡಿಯೋ 'ಮಹತ್' ಬಿಡುಗಡೆ ಆಯಿತು. ಹಿಂದಿ ಹಾಡೊಂದಕ್ಕೆ ಸ್ವತಃ ರೂಪಾ ಡಿ ಮೌದ್ಗಿಲ್ ಧ್ವನಿಯಾಗಿದ್ದಾರೆ. ಆ ಹಾಡಿನ ವಿಡಿಯೋ ಲಾಂಚ್ ಕಾರ್ಯಕ್ರಮ ಹಾಗೂ ಸಾಧಕಿಯರ ಅನುಭವವನ್ನು ಹಂಚಿಕೊಳ್ಳುವ ವೇದಿಕೆ ಅದಾಗಿತ್ತು.

DIG Roopa Moudgil sung a song for video album

ರೂಪಾ ಅವರು ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿ, ಒಂದು ವಾರದ ಹಿಂದೆ ಈ ಹಾಡಿನ ರೆಕಾರ್ಡಿಂಗ್ ಮಾಡಿದೆವು. "ನಿನ್ನ ಮನಸು ನಿನ್ನ ಕನ್ನಡಿ. ಕೆಟ್ಟದ್ದು- ಒಳ್ಳೆಯದು ಎಲ್ಲವೂ ಅದರಲ್ಲಿ ಪ್ರತಿಫಲನ ಆಗುತ್ತದೆ. ಮನಸೇ ನಿನ್ನ ಶಿವ" ಹೀಗೆ ಅರ್ಥ ಧ್ವನಿಸುವ ಹಿಂದಿ ಹಾಡು ನನಗೆ ಬಹಳ ಪ್ರಿಯವಾದದ್ದು. ಅದನ್ನು ಹಾಡಿದ್ದೀನಿ. ಸದ್ಯಕ್ಕೆ ಈ ಹಾಡಿನಿಂದ ಯಾವುದೇ ದೇಣಿಗೆ ಸಂಗ್ರಹದಂಥ ಉದ್ದೇಶ ಇಲ್ಲ ಎಂದರು.

"ಅಂತರರಾಷ್ಟ್ರೀಯ ಮಹಿಳಾ ದಿನಕ್ಕಾಗಿ ಈ ಹಾಡನ್ನು ಹಾಡಿದ್ದೀನಿ. ಈ ಹಾಡಿನ ಸಾಹಿತ್ಯ ಯಾವಾಗಲೂ ನನಗೆ ಸ್ಫೂರ್ತಿ. ನಿನ್ನ ಮನಸು ಕನ್ನಡಿ ಇದ್ದಂತೆ. ಎಲ್ಲವೂ ನಿನ್ನ ಮನಸಿನಲ್ಲಿದೆ- ಸುಖ, ದುಃಖ, ಯಶಸ್ಸು, ವೈಫಲ್ಯ. ನೀನು ಸಾಧಿಸಬಲ್ಲೆ ಅಂದುಕೊಂಡರೆ ಅದು ಸಾಧ್ಯ. ನಿನ್ನಿಂದ ಖಂಡಿತಾ ಅದು ಸಾಧ್ಯ... ತೋರಾ ಮನ್ ದರ್ಪಣ್ ಕೆಹ್ಲಾಯೇ" ಎಂದಿದ್ದಾರೆ ರೂಪಾ.

DIG Roopa Moudgil sung a song for video album

ಸನ್ಮಾನ ಕಾರ್ಯಕ್ರಮದಲ್ಲಿ ಸೌಮ್ಯಾ ಗೋಯೆಲ್, ಶಾರದಾ ಆರ್ಯಾ, ರೇಷ್ಮಾ ಕೃಷ್ಣಮೂರ್ತಿ, ಕಲ್ಪನಾ, ಮಧು ದೈತೋಟ ಇತರರು ತಮ್ಮ ಸಾಧನೆಯ ಹಾದಿಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
DIG Roopa Moudgil sung a song for video album 'Mahat'. Video album launched at Royal orchid hotel, Bengaluru on Wednesday. Many woman achievers felicitated in the album launch function.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ