ನಾಯಿಗಾಗಿ ಮದುವೆ ಮುರಿದುಕೊಂಡ ಬೆಂಗಳೂರು ಹುಡುಗಿ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 14: ಮನೆಯಲ್ಲಿ ಮದುವೆಗಾಗಿ ನಿಕ್ಕಿ ಮಾಡಿದ್ದ ಹುಡುಗ, ತನ್ನ ನಾಯಿ ಜತೆಗಿರುವುದು ಇಷ್ಟಪಡಲಿಲ್ಲ ಎಂಬ ಕಾರಣಕ್ಕೆ ಮದುವೆಯೇ ಬೇಡ ಎಂದಿರುವ ಕರಿಷ್ಮಾ ವಾಲಿಯಾ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾಳೆ. ಯಾರೇ ಹೇಳಿದರೂ ನನ್ನ ನಾಯಿಯಿಂದ ದೂರ ಆಗುವ ಮಾತೇ ಇಲ್ಲ ಎಂದಿರುವ ಆಕೆಗೆ, ಆ ಹುಡುಗನಿಂದ "ಸರಿ, ಆ ನಾಯಿಯನ್ನೇ ಮದುವೆಯಾಗು" ಎಂಬ ಉತ್ತರ ಬಂದಿದೆ.

ಆಕೆಯ ತೀರ್ಮಾನಕ್ಕೆ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಭಾರೀ ಕಾಮೆಂಟ್ ಗಳು ಬಂದಿವೆ. "ಯಾರಾದರೂ ತಾವು ಇಷ್ಟಪಡುವವರಿಗಾಗಿ ಸ್ವಲ್ಪವಾದರೂ ರಾಜಿ ಮಾಡಿಕೊಳ್ಳಬೇಕು. ಅದು ಸಾಕು ಪ್ರಾಣಿ ಇರಬಹುದು, ಹವ್ಯಾಸ ಅಥವಾ ಕೆರಿಯರ್ ಇರಬಹುದು. ಅವರು ನಿಮ್ಮ ಸಮಯ ಕೊಡುವಷ್ಟು ಅರ್ಹರಲ್ಲ. ಆಕೆ ಜೀವನದಿಂದ ಆತನನ್ನು ಹೊರಹಾಕಿರುವುದು ಒಳ್ಳೆಯದು" ಎಂದು ಫೇಸ್ ಬುಕ್ ನಲ್ಲಿ ಒಬ್ಬರು ಕಾಮೆಂಟ್ ಹಾಕಿದ್ದಾರೆ.[ಶ್ವಾನಪ್ರಿಯರಲ್ಲದವರು ಈ ಲೇಖನ ಓದಬೇಡಿ!]

Didn't Like Her Dog, So Bengaluru Woman Refused To Marry

"ಆ ಹುಡುಗ ಆಕೆಯನ್ನು ಬಿಟ್ಟು ಒಳ್ಳೆ ನಿರ್ಧಾರ ಮಾಡಿದ್ದಾನೆ. ಕುಟುಂಬಕ್ಕಿಂತ ನಾಯಿಗೆ ಪ್ರಾಮುಖ್ಯ ಕೊಡುವವರ ಜೊತೆ ಹೇಗೆ ಇರೋದಿಕ್ಕೆ ಸಾಧ್ಯ?" ಎಂದು ಕೂಡ ಪ್ರಶ್ನಿಸಿದ್ದಾರೆ. "ಯಾರಾದರೂ ನಾಯಿಯನ್ನ ಇಷ್ಟಪಡದಿರುವುದಕ್ಕೆ ಸಾಧ್ಯವಾ?" ಎಂಬ ಪ್ರಶ್ನೆಯನ್ನು ಕೂಡ ಹಲವರು ಕೇಳಿದ್ದಾರೆ.

ಅಂದಹಾಗೆ, ಕರಿಷ್ಮಾ ಬೆಂಗಳೂರು ಮೂಲದವಳು. ಸದ್ಯ ಗುರ್ ಗಾಂವ್ ನಲ್ಲಿ ಅನಲಿಸ್ಟ್ ಅಗಿ ಕೆಲಸ ಮಾಡ್ತಿದ್ದಾಳೆ. ಇತ್ತೀಚೆಗೆ ದೆಹಲಿ ಮೂಲದ ಅನುಕೂಲಸ್ಥ ಹುಡುಗನೊಬ್ಬನ ಜೊತೆಗೆ ಆಕೆಯ ಮನೆಯವರು ವಿವಾಹ ನಿಶ್ಚಯಿಸಿದ್ದರು. ಆ ನಂತರ ಇಬ್ಬರ ಮಧ್ಯೆ ಮಾತುಕತೆ ನಡೆಯುವಾಗ "ಲೂಸಿ (ನಾಯಿ)ಯಿಂದ ಸಮಸ್ಯೆಯಾಗಬಹುದು" ಎಂದು ಆ ಹುಡುಗ ಹೇಳಿದರೆ, "ಹಾಗಿದ್ದರೆ ಈ ಮದುವೆಯೇ ಬೇಡ" ಎಂದು ಕರಿಷ್ಮಾ ಉತ್ತರಿಸಿದ್ದಾಳೆ.[ಕೇರಳದಲ್ಲಿ ನಾಯಿ ಕಚ್ಚಿ ವೃದ್ಧೆ ಸಾವಿಗೆ ಮನೇಕಾ ಕಾರಣ?]

Didn't Like Her Dog, So Bengaluru Woman Refused To Marry

"ಆತ ನೋಡುವುದಕ್ಕೆ ಚೆನ್ನಾಗಿದ್ದಾನೆ, ಅನುಕೂಲಸ್ಥ ಆತನೇ ನನಗೆ ಸರಿಯಾದ ಜೋಡಿ ಅಂತ ನನ್ನ ತಾಯಿ ಯೋಚಿಸ್ತಾರೆ. ಕುಟುಂಬದಿಂದ ನನಗೆ ಬಹಳ ಒತ್ತಡವೂ ಇದೆ. ನಾಯಿಯ ಮೇಲಿನ ಪ್ರೀತಿಗೆ ನಾನು ತಪ್ಪು ನಿರ್ಧಾರ ತೆಗೆದುಕೊಂಡೆ ಅಂತ ಅವರೆಲ್ಲ ಅಂದುಕೊಂಡಿದ್ದಾರೆ. ಆ ಹುಡುಗ ಕೂಡ ನನ್ನ ನಿರ್ಧಾರದ ಬಗ್ಗೆ ಮತ್ತೆ ಯೋಚಿಸು ಅಂತ ಹೇಳ್ತಿದ್ದಾನೆ" ಎಂದಿದ್ದಾಳೆ ಕರಿಷ್ಮಾ ವಾಲಿಯಾ.[ಸರಕಾರಿ ಆಸ್ಪತ್ರೆಗೆ ನುಗ್ಗಿ ಭ್ರೂಣ ಹೊತ್ತೊಯ್ದ ನಾಯಿ!]

Didn't Like Her Dog, So Bengaluru Woman Refused To Marry

"ಕುಟುಂಬವೇ ಮುಖ್ಯ, ಕೆರಿಯರ್ ಅಲ್ಲ" ಅಂತ ವಿಚಾರಗಳನ್ನೇ ಆತ ಹೇಳ್ತಿದ್ದ. ಯಾವಾಗ ನನ್ನ ನಾಯಿಯ ವಿಚಾರವಾಗಿ ಮಾತನಾಡಿದನೋ ಅಗ ಈ ಸಂಬಂಧ ಕೈ ಬಿಟ್ಟೆ. ಆದರೆ ಈಗಲೂ ನನ್ನ ಕುಟುಂಬ ಮದುವೆಗೆ ಆತನೇ ಯೋಗ್ಯ ವರ ಅಂತ ಯೋಚಿಸ್ತಿದೆ. ಒಂದು ವಾರದಿಂದ ಆತನ ಜೊತೆಗೆ ಮಾತಾಡ್ತಿದೀನಿ. ಆತನ ತೀರ್ಮಾನವನ್ನೆಲ್ಲ ನನ್ನ ಮೇಲೆ ಹೇರುವುದಕ್ಕೆ ಪ್ರಯತ್ನಿಸ್ತಿದ್ದಾನೆ" ಎಂದಿದ್ದಾಳೆ ಕರಿಷ್ಮಾ ವಾಲಿಯಾ.

ಆ ಹುಡುಗ ನಾಯಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಸರಿಯೋ ತಪ್ಪೋ? ಮದುವೆ ಅಂದರೆ ಸಣ್ಣ-ಪುಟ್ಟ ರಾಜಿ ಮಾಡಿಕೊಂಡು ಜೀವನ ಚೆಂದಕ್ಕೆ ರೂಪಿಸಿಕೊಳ್ಳೋದಲ್ವಾ? ಆ ಹುಡುಗಿಯ ಭಾವನೆಗೂ ಬೆಲೆ ಕೊಡಬೇಕಿತ್ತಲ್ವಾ? ಕೂತು ಮಾತನಾಡಿದರೆ ಸಂಬಂಧ ಉಳೀತಿತ್ತೇನೋ? ಒಟ್ಟಾರೆ ಈ ಹುಡುಗಿ ನಿರ್ಧಾರದ ಬಗ್ಗೆ ನೀವೇನಂತೀರಿ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru based Karishma Walia, working in Gurgaon refused a arranged match when the man told her, he didn't want her dog to be a part of their life.
Please Wait while comments are loading...