ಕಲಾ ಸೌಧದಲ್ಲಿ ರಂಗ ಪ್ರಯೋಗ : ಷೇಕ್ಸ್ ಪಿಯರ್ ನ ಬುರುಡೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 01: ಕವಿ ಚಕ್ರವರ್ತಿ ವಿಲಿಯಂ ಷೇಕ್ಸ್ ಪಿಯರ್ ವಿದಾಯ ಹೊಂದಿದ 400 ನೇ ವರ್ಷವಾದ 2016ನೇ ಇಸವಿಯಲ್ಲಿ, 'ಧ್ವನಿ' ರಂಗ ತಂಡದ ಉತ್ಸಾಹಿ ಕಲಾವಿದರಿಂದ ಪ್ರದರ್ಶನಗೊಳ್ಳುತ್ತಿರುವ ಕನ್ನಡ ರಂಗ ಪ್ರಯೋಗ "ಷೇಕ್ಸ್ ಪಿಯರನ ಬುರುಡೆ"

ನಾಟಕದ ಕಥಾ ವಸ್ತು:
ವಿಲಿಯಂ ಷೇಕ್ಸ್ ಪಿಯರ್ ನು ಅಸು ನೀಗಿದ ಬಳಿಕ ಅವನ ನಾಟಕಗಳ ಖ್ಯಾತಿ ವಿಶ್ವಾದ್ಯಂತ ಪಸರಿಸಿರುತ್ತದೆ. ಆತನ ನಾಟಕಗಳು, ಉಡುಗೆ ತೊಡುಗೆಗಳು, ಆತ ಬಳಸಿದ ಸಾಮಗ್ರಿಗಳು ಲಕ್ಷಾಂತರ ಪೌಂಡ್ ಗಳಿಗೆ ಹರಾಜುಗೊಳ್ಳಲ್ಪಡುತ್ತಿರುತ್ತದೆ.

Dhwani Theatre Group Shakespeare Na Burude Kannada Play KH Kala Soudha

ಇದೇ ಸಂದರ್ಭದಲ್ಲಿ ಇಂಗ್ಲೆಂಡಿನ ಸ್ಟ್ರಾಟ್ ಫರ್ಡ್ ನ ಒಬ್ಬ ಕಳ್ಳ ಷೇಕ್ಸ್ ಪಿಯರ್ ನ ತಲೆ ಬುರುಡೆಯನ್ನು ಕದ್ದು ಮಾರಾಟ ಮಾಡಿ ಕೋಟ್ಯಂತರ ದುಡ್ಡನ್ನು ಸಂಪಾದಿಸಬೇಕೆಂದು ಆಲೋಚಿಸುತ್ತಾನೆ.

ತಲೆ ಬುರುಡೆಯನ್ನು ಸಂಪಾದಿಸುವುದರಲ್ಲಿಯೂ ಯಶಸ್ವಿಯಾದ ಕಳ್ಳನು ಒಂದು ಸಮಸ್ಯೆಯಲ್ಲಿ ಬೀಳುತ್ತಾನೆ. ಅದೇನೆಂದರೆ, ಷೇಕ್ಸ್ ಪಿಯರ್ ನ ಕೃತಿಯ ಪಾತ್ರಗಳಾಗುತ್ತಾ ಹೋಗುತ್ತಾನೆ. ಆ ಪಾತ್ರಗಳ ಅನುಭವವೇ ನಾಟಕವನ್ನು ಮುಂದುವರೆಸಿಕೊಂಡು ಹೋಗುತ್ತದೆ.

Dhwani Theatre Group Shakespeare Na Burude Kannada Play KH Kala Soudha

ತಂಡ: ಧ್ವನಿ (ರಿ)
ರಚನೆ ಮತ್ತು ನಿರ್ದೇಶನ : ಪ್ರಭಾಕರ ರಾವ್
ವಸ್ತ್ರವಿನ್ಯಾಸ ಮತ್ತು ಪ್ರಸಾಧನ : ರಾಮಕೃಷ್ಣ ಬೆಳ್ತೂರ್
ರಂಗಸಜ್ಜಿಕೆ ಮತ್ತು ಪರಿಕರ : ರಘು ಸಿರಸಿ
ಬೆಳಕು : ಎಂ.ಜಿ.ನವೀನ್
ಸಂಗೀತ : ಪ್ರದೀಪ್ ಮುಳ್ಳೂರು
ನಿರ್ವಹಣೆ : ನವೀನ್ ವಸಿಷ್ಠ, ಹೇಮಂತ್ ಹೊಯ್ಸಳ
ಪ್ರದರ್ಶನದ ದಿನಾಂಕ - 3ನೇ ಡಿಸೆಂಬರ್, ಶನಿವಾರ
ಸಮಯ - ಸಂಜೆ 7.30 ರಿಂದ 8.45
ಸ್ಥಳ - ಕೆ.ಎಚ್.ಕಲಾಸೌಧ, ಹನುಮಂತನಗರ, ಬೆಂಗಳೂರು - 560019
ಟಿಕೆಟ್ ದರ - ರೂ.100/-
(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dhwani Theatre Group is performing a Play named 'Shakespeare Na Burude' on december 03, 2016 at KH Kala Soudha, Hanumantha Nagar, Bengaluru. The 400th year after the ‘Emperor of Poets’ William Shakespeare bid Good Bye to this world.
Please Wait while comments are loading...