ಪರಪ್ಪನ ಕಾರಾಗೃಹದಲ್ಲಿ ಶಶಿಕಲಾರನ್ನು ಭೇಟಿಯಾದ ದಿನಕರನ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 03 : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ರಂಪ ರಾಮಾಯಣ ತಣ್ಣಗಾಗುತ್ತಿದ್ದಂತಯೇ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ದಿನಕರನ್ ಬಂಧಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾರನ್ನು ಬುಧವಾರ ಭೇಟಿ ಮಾಡಿದರು.

ಶಶಿಕಲಾ ಅಕ್ರಮ ಆಸ್ತಿಗಳಿಕೆ ಕೇಸ್, ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್

ಮಧ್ಯಾಹ್ನ ಕಾರಾಗೃಹಕ್ಕೆ ಬಂದಿದ್ದ ದಿನಕರನ್, ಟೋಕನ್‌ ಪಡೆದು ಕೈದಿಗಳ ಭೇಟಿಗೆ ನಿಗದಿಪಡಿಸಿರುವ ಕೊಠಡಿಗೆ ತೆರಳಿ ಕೆಲ ನಿಮಿಷಗಳ ಬಳಿಕ ಅದೇ ಕೊಠಡಿಗೆ ಬಂದ ಶಶಿಕಲಾ ಹಾಗೂ ಇಳವರಸಿ ಜತೆ ದಿನಕರನ್ ಮಾತುಕತೆ ನಡೆಸಿದರು.

Dhinakaran meets AIADMK chief Sasikala in Bengaluru Parappana Agrahara prison

15 ನಿಮಿಷಗಳ ಬಳಿಕ ಕೊಠಡಿಯಿಂದ ಹೊರಬಂದ ದಿನಕರನ್ ಅಲ್ಲಿಂದ ಹೊರಟು ಹೋದರು. 'ಜೂನ್‌ 7ರಂದು ದಿನಕರನ್ ಜೈಲಿಗೆ ಬಂದು ಹೋಗಿದ್ದರು. ಅದಾದ ನಂತರ ನಡೆದ ಬೆಳವಣಿಗೆಯಿಂದಾಗಿ ಅವರು ಪುನಃ ಬಂದಿರಲಿಲ್ಲ.

ಸಾಮಾನ್ಯ ಕೈದಿಗಳನ್ನು ಭೇಟಿಯಾಗುವ ರೀತಿಯಲ್ಲೇ ಅವರ ಭೇಟಿಗೆ ಅವಕಾಶ ನೀಡಲಾಗಿತ್ತು' ಎಂದು ಜೈಲಿನ ಅಧಿಕಾರಿ ತಿಳಿಸಿದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾಗೆ ರಾಜಾತಿಥ್ಯ ಬಗ್ಗೆ ರಂಪರಾಮಾಯಣವೇ ಆಗಿತ್ತು.

Sasikala Natarajan Goes To Bangalore, Parappana Agrahara | Oneindia Kannada

ಇದಾದ ಬಳಿಕವೇ ಕಾರಗೃಹ ಡಿಐಜಿ ರೂಪ ಅವರನ್ನು ಎತ್ತಂಗಡಿ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A day after announcing his return to active party work, sidelined AIADMK (Amma) Deputy General Secretary TTV Dhinakaran on Wednesday met his aunt and party chief V K Sasikala at the Parappana Agrahara central prison Bengaluru.
Please Wait while comments are loading...