ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರ ಭೇಟಿ ಮಾಡಿದ ಧನಂಜಯ್ ಕುಮಾರ್

By Mahesh
|
Google Oneindia Kannada News

ಬೆಂಗಳೂರು, ಮಾ.7: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 'ಪಕ್ಷ ಜಿಗಿತ' ಶುರುವಾಗಿದೆ. ಅತ್ತ ಗೂಳಿಹಟ್ಟಿ ಶೇಖರ್ ಗೆ ಜೆಡಿಎಸ್ ಧ್ವಜ ಹಸ್ತಾಂತರವಾಗಿದೆ. ಈ ಮಧ್ಯೆ, ಕೆಜೆಪಿ/ಬಿಜೆಪಿ ಮುಖಂಡ ವೇಣೂರು ಧನಂಜಯ್ ಕುಮಾರ್ ಆಳ್ವಾ ಚಿತ್ತ ಜೆಡಿಎಸ್ ಪಕ್ಷದತ್ತ ನೆಟ್ಟಿದೆ ಎಂಬ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಧನಂಜಯ್ ಕುಮಾರ್ ಅವರು ಶುಕ್ರವಾರ ಮಧ್ಯಾಹ್ನ ಜೆಡಿಎಸ್ ವರಿಷ್ಠರ ಮನೆ ಬಾಗಿಲು ತಟ್ಟಿದ್ದಾರೆ.

ಬಿಜೆಪಿ ಸಂಸದ, ವಕ್ತಾರರಾಗಿದ್ದ ಧನಂಜಯ್ ಕುಮಾರ್ ಅವರು ಯಡಿಯೂರಪ್ಪ ಅವರ ಬೆಂಬಲಿಗರಾಗಿ ಕರ್ನಾಟಕ ಜನತಾ ಪಕ್ಷ ಸೇರಿದ್ದರು.ಯಡಿಯೂರಪ್ಪ ಅವರು ಬಿಜೆಪಿಗೆ ಮರು ಸೇರ್ಪಡೆಯಾದರೂ ಧನಂಜಯ್ ಕುಮಾರ್ ಅವರಿಗೆ ಯೋಗ ಕೂಡಿ ಬಂದಿರಲಿಲ್ಲ. ಈಗ ಬರಿಗೈ ದಾಸನಾಗಿ ಅಲ್ಲೂ ಇಲ್ಲೂ ಎಂಬ ಪರಿಸ್ಥಿತಿ ತಂದುಕೊಂಡಿದ್ದಾರೆ. [ಜೆಡಿಎಸ್ ಅಭ್ಯರ್ಥಿ ಧನಂಜಯ ಕುಮಾರ್?]

ಈ ನಿಟ್ಟಿನಲ್ಲಿ ಜಾತ್ಯಾತೀತ ಜನತಾ ದಳದತ್ತ ಮುಖ ಮಾಡಿರುವ ಧನಂಜಯ್ ಅವರಿಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಅಭಯಸಿಕ್ಕಿದೆ. ಜೆಡಿಎಸ್ ಸೇರ್ಪಡೆ ಕುರಿತು ಚರ್ಚಿಸಲು ಶುಕ್ರವಾರ ಮಧ್ಯಾಹ್ನ ದೇವೇಗೌಡರ ಮನೆಗೆ ಧನಂಜಯ್ ಭೇಟಿ ನೀಡಿದ್ದಾರೆ.

Dhananjay kumar meets JDS Supremo HD Deve Gowda

ಕರ್ನಾಟಕ ಜನತಾ ಪಕ್ಷದ ಕಾರ್ಯಕರ್ತರು ಯಡಿಯೂರಪ್ಪ ಅವರ ಅಸಮಾಧಾನಗೊಂಡಿದ್ದು, ಎಲ್ಲರನ್ನು ಕಲೆ ಹಾಕಿ ಚರ್ಚೆ ನಡೆಸುತ್ತೇನೆ. ಕರಾವಳಿ ಭಾಗದಲ್ಲಿ ಜೆಡಿಎಸ್ ಅಲೆ ಏಳುವಂತೆ ಮಾಡುತ್ತೇನೆ. ಬೆಂಬಲಿಗರನ್ನು ಜೆಡಿಎಸ್ ಗೆ ಕರೆತರುತ್ತೇನೆ ಎಂದು ದೇವೇಗೌಡ ಅವರಿಗೆ ಧನಂಜಯ್ ಅವರಿಗೆ ಧನಂಜಯ್ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೆರಡು ದಿನಗಳಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳುತ್ತೇನೆ. ಮಂಗಳೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಧನಂಜಯ್ ಹೇಳಿದ್ದಾರೆ.

English summary
Former BJP and KJP Spokesperson Dhananjay Kumar likely to join JDS soon and after not getting any signals from BJP, Dhanajay is aiming for JDS ticket to contest from Mangalore. Dhananjay kumar today visited JDS Supremo HD Deve Gowda's residence had discussion with him
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X